ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭಾಗವಹಿಸಲಿದ್ದು, ಸ್ಟಾರ್ ಆಟಗಾರರ ಬಳಗವನ್ನು ಹೊಂದಿದೆ. ಆದರೆ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡದ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ಸ್ ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವುದು ನಿಜಕ್ಕೂ ಯಂಗ್ ಪ್ಲೇಯರ್ ಚಿಂತೆ ಹೆಚ್ಚಿಸಿದೆ.
ತವರಿನಲ್ಲಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಬಳಿಕ ಈ ಸ್ಟಾರ್ ಪ್ಲೇಯರ್ಸ್ ಭಾರತ ತಂಡದ ಪರ ಅಂಗಳಕ್ಕೆ ಇಳಿದಿದ್ದು ಇದೇ ಮೊದಲ ಬಾರಿಗೆ ಆಗಿತ್ತು. 14 ತಿಂಗಳ ಬಳಿಕ ಸ್ಟಾರ್ ಆಟಗಾರರು ಅಖಾಡಕ್ಕೆ ಇಳಿದಿರುವುದು ಯುವ ಆಟಗಾರರ ನಿದ್ದೆ ಹೆಚ್ಚಿಸಿದೆ.

ಹಿರಿಯ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಆಡಬಹುದು ಎಂಬ ಸಂದೇಶವನ್ನು ಈ ಮೂಲಕವೇ ಸಾರಲಾಗಿತ್ತು. ಅಲ್ಲದೆ ಇತ್ತೀಚಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಅಲ್ಲಿಗೆ ಒನ್ ಸೀಟ್ ಯಂಗ್ ಪ್ಲೇಯರ್‌ಗೆ ಮಿಸ್ ಆಗಿದ್ದು ಕನ್ಫರ್ಮ್ ಆಯಿತು. ಇನ್ನು ವಿರಾಟ್ ಕೊಹ್ಲಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ನೀಡಬೇಕೋ ಬೇಡ ಎಂಬ ಬಗ್ಗೆ ಈಗ ಚರ್ಚೆ ವ್ಯಾಪಕವಾಗಿದೆ. ಹಾಗಿದ್ದರೆ ಉಭಯ ಆಟಗಾರರ ಅಂಕಿ ಅಂಶಗಳನ್ನು ನೋಡಿದಾಗ ಯಾರು ಬೆಸ್ಟ್ ಎನ್ನುವುದು ಗೊತ್ತಾಗುತ್ತದೆ.

ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವುದು ಅಷ್ಟು ಸುಲಭದ ನಿರ್ಧಾರ ಆಗಲಾರದು. ಭಾರತ ಮಾತ್ರವಲ್ಲದೆ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್, ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 117 ಟಿ20 ಪಂದ್ಯಗಳಲ್ಲಿ 51 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 4037 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 4,000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ವಿರಾಟ್. ಈ ಅಂಕಿ ಅಂಶದಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಮತ್ತು ರೋಹಿತ್ ನಡುವಿನ ವ್ಯತ್ಯಾಸವೆಂದರೆ ಒಬ್ಬ ಆಟಗಾರನನ್ನು ತಂಡದಲ್ಲಿ ಆಯ್ಕೆ ಮಾಡಿ ಇನ್ನೊಬ್ಬನನ್ನು ಕೈಬಿಡುವುದು ಸರಿಯಲ್ಲ.

ಭಾರತದ ನಾಯಕ ರೋಹಿತ್ ಶರ್ಮಾ ಇದುವರೆಗೆ 151 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 31.79 ಸರಾಸರಿಯಲ್ಲಿ 3974 ರನ್ ಗಳಿಸಿದ್ದಾರೆ. ಅಂದರೆ ಕೊಹ್ಲಿ ಮುಂದೆ ರೋಹಿತ್ ಅವರ ಸರಾಸರಿ ತೀರಾ ಸಾಧಾರಣ. ರೋಹಿತ್ ತಂಡಕ್ಕೆ ಉತ್ತಮ ಆರಂಭವನ್ನು ನೀಡುತ್ತಾರೆ ಮತ್ತು ಆದ್ದರಿಂದ ಮಿಡ್ಲ್ ಆರ್ಡರ್ ಬ್ಯಾಟರ್‌ಗಳಿಗೆ ಅನುಕೂಲವಾಗುತ್ತದೆ. ಆದರೆ ವಿರಾಟ್ (138.15) ಮತ್ತು ರೋಹಿತ್ (139.97) ಅವರ ಸ್ಟ್ರೈಕ್ ರೇಟ್‌ಗಳನ್ನು ನೋಡಿದ ನಂತರ, ಈ ವಾದವು ಸುಳ್ಳು ಎಂದು ಸಾಬೀತಾಗುತ್ತದೆ. ಬ್ಯಾಟಿಂಗ್ ಸಂಖ್ಯೆಗಳ ಹೊರತಾಗಿ, ಫೀಲ್ಡಿಂಗ್‌ನಲ್ಲಿ ನಾಯಕ ರೋಹಿತ್ ಸೇರಿದಂತೆ ಅನೇಕ ಸಹ ಆಟಗಾರರಿಗಿಂತ ಕೊಹ್ಲಿ ಮೇಲಿದ್ದಾರೆ.
ಈಗಾಗಲೇ ಹೇಳಿದ ಹಾಗೆ ಇಬ್ಬರೂ ತಮ್ಮ ತಮ್ಮ ಸ್ಲಾಟ್‌ಗಳಿಗೆ ನ್ಯಾಯ ವದಗಿಸುವ ಆಟಗಾರರು. ಈ ಇಬ್ಬರೂ ಸ್ಟಾರ್ ಆಟಗಾರರು ತಂಡದಲ್ಲಿದ್ದರೆ, ಎದುರಾಳಿಗಳಿಗೆ ನಡುಕು ಹುಟ್ಟುವುದು ಗ್ಯಾರಂಟಿ. ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಆದ್ಯತೆ ನೀಡುವುದು ಸರಿ. ಆದರೆ, ಅನುಭವವನ್ನು ಕಡೆಗಣಿಸುವುದು ಸರಿಯಲ್ಲ ಎಂಬ ಅಭಿಪ್ರಾಯವ್ಯಕ್ತವಾಗುತ್ತಿದೆ.