ಮೇ 17 ಶುಕ್ರವಾರ, ಜೂನ್ 2 ರಿಂದ ಆರಂಭವಾಗುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಲಿದೆ. ಈ ಟೂರ್ನಿಯ 20 ತಂಡಗಳು ಭಾಗವಹಿಸುತ್ತಿದ್ದು, ರೋಹಿತ್ ಶರ್ಮಾ ಮುನ್ನೆಡೆಸುತ್ತಿರುವ ಬಲಿಷ್ಠ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ.
ಈ ಟೂರ್ನಿಗೂ ಮುನ್ನ ಎಲ್ಲ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಲ್ಲಾ ಅಭ್ಯಾಸ ಪಂದ್ಯಗಳು ಮೇ 27 ರಿಂದ ಜೂನ್ 1 ರವರೆಗೆ ನಡೆಯಲಿವೆ.

ಒಟ್ಟು 16 ಅಭ್ಯಾಸ ಪಂದ್ಯಗಳು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಕ್ರಿಕೆಟ್ ಸ್ಟೇಡಿಯಂ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಕ್ವೀನ್ಸ್ ಪಾರ್ಕ್ ಓವಲ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಟೀಮ್ ಇಂಡಿಯಾ ಕೇವಲ ಒಂದು ಅಭ್ಯಾಸ ಪಂದ್ಯವಾಡುತ್ತಿದೆ. ಜೂನ್ 1 ರಂದು ಬಾಂಗ್ಲಾದೇಶ ಮತ್ತು ಟೀಮ್ ಇಂಡಿಯಾ ಮುಖಾಮುಖಿಯಾಗಲಿವೆ. ಆದರೆ ಎಲ್ಲಿ ಪಂದ್ಯ ನಡೆಯಲಿದೆ ಎಂಬುದರ ಬಗ್ಗೆ ಐಸಿಸಿ ಇನ್ನು ತಿಳಿಸಿಲ್ಲ.
ಬಾಂಗ್ಲಾದೇಶ ಎದುರು ಅಭ್ಯಾಸ ಪಂದ್ಯ ಆಡುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಟೀಮ್ ಇಂಡಿಯಾಗೆ ಇದೊಂದು ಅವಕಾಶವಾಗಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಬಹುದು.
ಕೆನಡಾ vs ನೇಪಾಳ- ಟೆಕ್ಸಾಸ್ 10:30 PM
ಓಮನ್ vs ಪಪುವಾ ನ್ಯೂಗಿನಿಯಾ -ಟ್ರಿನಿಡಾಡ್ ಮತ್ತು ಟೊಬಾಗೋ 3:00 PM
ನಮೀಬಿಯಾ vs ಉಗಾಂಡಾ - ಟ್ರಿನಿಡಾಡ್ ಮತ್ತು ಟೊಬಾಗೋ 7:00 PM
ಶ್ರೀಲಂಕಾ vs ನೆದರ್ಲ್ಯಾಂಡ್ಸ್ - ಫ್ಲೋರಿಡಾ 10:30 PM
ಬಾಂಗ್ಲಾದೇಶ vs USA - ಟೆಕ್ಸಾಸ್ 10:30 PM
ಆಸ್ಟ್ರೇಲಿಯಾ ವಿರುದ್ಧ ನಮೀಬಿಯಾ- ಟ್ರಿನಿಡಾಡ್ ಮತ್ತು ಟೊಬಾಗೋ 7:00 PM
(29 ಮೇ) ದಕ್ಷಿಣ ಆಫ್ರಿಕಾ ಇಂಟ್ರಾ-ಸ್ಕ್ವಾಡ್ - ಫ್ಲೋರಿಡಾ 10:30
ಅಫ್ಘಾನಿಸ್ತಾನ vs ಓಮನ್ - ಟ್ರಿನಿಡಾಡ್ ಮತ್ತು ಟೊಬಾಗೋ 1:00 PM
ನೇಪಾಳ vs USA - ಟೆಕ್ಸಾಸ್ 10:30 PM
ಸ್ಕಾಟ್ಲೆಂಡ್ vs ಉಗಾಂಡಾ - ಟ್ರಿನಿಡಾಡ್ ಮತ್ತು ಟೊಬಾಗೊ, 10:30 PM
ನೆದರ್ಲ್ಯಾಂಡ್ಸ್ vs ಕೆನಡಾ - ಟೆಕ್ಸಾಸ್ 3:00 PM
ನಮೀಬಿಯಾ vs ಪಪುವಾ ನ್ಯೂಗಿನಿಯಾ - ಟ್ರಿನಿಡಾಡ್ ಮತ್ತು ಟೊಬಾಗೋ, 3:00 PM
ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ - ಟ್ರಿನಿಡಾಡ್ ಮತ್ತು ಟೊಬಾಗೊ 7:00 PM
ಐರ್ಲೆಂಡ್ vs ಶ್ರೀಲಂಕಾ - ಫ್ಲೋರಿಡಾ 10:30 PM
ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ - ಟ್ರಿನಿಡಾಡ್ ಮತ್ತು ಟೊಬಾಗೋ 10:30 PM
ಬಾಂಗ್ಲಾದೇಶ vs ಭಾರತ (TBA)