ಸೂಪರ್ 12 ಹಂತಕ್ಕೇರುವುದೇ ನಮ್ಮ ಗುರಿ: ಜಿಂಬಾಬ್ವೆ ಸ್ಟಾರ್ ಆಟಗಾರ ಸಿಕಂದರ್ ರಾಜಾ ಹೇಳಿಕೆ

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಗೆಲುವಿನ ಆರಂಭ ಪಡೆದುಕೊಂಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಐರ್ಲಂಡ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡ 31 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಜಿಂಬಾಬ್ವೆ ತಂಡದ ಪರವಾಗಿ ಮಧ್ಯಮ ಕ್ರಮಾಂಕದ ಆಟಗಾರ ಸಿಕಂದರ್ ರಾಜಾ 82 ರನ್‌ಗಳ ಪ್ರದರ್ಶನ ನೀಡಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಿಕಂದರ್ ರಾಜಾ ಪಂದ್ಯದ ಬಳಿಕ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸೂಪರ 12 ಹಂತಕ್ಕೇರುವುದು ನಮ್ಮ ಮೊದಲ ಗುರಿ ಎಂದಿದ್ದಾರೆ. ಐರ್ಲೆಂಡ್ ವಿರುದ್ಧ ನೀಡಿದ ಅಮೋಘ ಪ್ರದರ್ಶನಕ್ಕೆ ಸಿಕಂದರ್ ರಾಜಾ 82 ರನ್‌ಗಳನ್ನು ಗಳಿಸಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.
"ನಾವು ಈ ವಿಶ್ವಕಪ್‌ಗೆ ಅರ್ಹತೆಯನ್ನು ಸಂಪಾದಿಸಿದ್ದಾಗ ಸಾಕಷ್ಟು ಸಂತಸಪಟ್ಟಿದ್ದೇವೆ. ನಮ್ಮ ಪ್ರಯಾಣ ಮುಗಿಯಿತು ಎಂದು ಅನಿಸುತ್ತಿಲ್ಲ. ನಾವು ಕೇವಲ ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸವುದಕ್ಕಾಗಿ ಮಾತ್ರವೇ ಇಲ್ಲಿಗೆ ಬಂದಿಲ್ಲ. ನಮ್ಮ ಗುರಿ ಸೂಪರ್ 12ಕ್ಕೆ ಪ್ರವೇಶ ಪಡೆಯುವುದಾಗಿದೆ. ಅಲ್ಲಿ ದೊಡ್ಡ ತಂಡಗಳನ್ನು ಎದುರಿಸಿ ನಾವು ಯಾವ ರೀತಿಯಾಗಿ ಪ್ರದರ್ಶನ ನೀಡುತ್ತೇವೆ ಎಂಬುದು ನೋಡಬೇಕಿದೆ" ಎಂದಿದ್ದಾರೆ ಸಿಕಂದರ್ ರಾಜಾ.
48 ಎಸೆತಗಳನ್ನು ಎದುರಿಸಿದ ಸಿಕಂದರ್ ರಾಜಾ 82 ರನ್‌ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿತ್ತು. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಲು ಯಶಸ್ವಿಯಾಯಿತು.
ಈ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಕೂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮಧ್ಯಮ ಕ್ರಮಾಂಕದ ಆಟಗಾರರು ಕೆಲ ಕಾಲ ಹೋರಾಟ ನಡೆಸಿದರಾದರೂ ಜಿಂಬಾಬ್ವೆ ನೀಡಿದ ಗುರಿ ತಲುಪಲು ಐರ್ಲೆಂಡ್ ತಂಡಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 31 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ಜಿಂಬಾಬ್ವೆ ಆಡುವ ಬಳಗ: ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ಮುಜರಬಾನಿ ಆಶೀರ್ವಾದ
ಬೆಂಚ್: ಬ್ರಾಡ್ ಇವಾನ್ಸ್, ವೆಲ್ಲಿಂಗ್ಟನ್ ಮಸಕಡ್ಜಾ, ಟೋನಿ ಮುನ್ಯೊಂಗಾ, ಕ್ಲೈವ್ ಮದಂಡೆ
ಐರ್ಲೆಂಡ್ ಆಡುವ ಬಳಗ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ,
ಮಾರ್ಕ್ ಅದೈರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
ಬೆಂಚ್: ಸ್ಟೀಫನ್ ಡೊಹೆನಿ, ಕಾನರ್ ಓಲ್ಫರ್ಟ್, ಗ್ರಹಾಂ ಹ್ಯೂಮ್, ಫಿಯಾನ್ ಹ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications