Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆ ಒಂದು ವಿಡಿಯೋ ದೊಡ್ಡ ಶಕ್ತಿ ನೀಡಿತು: ಪಾಕ್ ವಿರುದ್ಧ ಪಂದ್ಯ ಗೆದ್ದ ಬಳಿಕ ಸಿಕಂದರ್ ರಾಜಾ ಹೇಳಿಕೆ

T20 World cup: Zimbabwe star cricketer Sikandar Raza said Ricky Ponting words Inspiring Him

ಈ ಬಾರಿಯ ಟಿ20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ದೊಡ್ಡ ಆಘಾತವನ್ನು ನೀಡಿದೆ. ಭಾರತದ ವಿರುದ್ಧ ಸೋತ ಆಘಾತದಲ್ಲಿದ್ದ ಪಾಕ್ ತಂಡಕ್ಕೆ ಮತ್ತೊಂದು ಆಘಾತ ನೀಡುವಲ್ಲಿ ಜಿಂಬಾಬ್ವೆ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡಕ್ಕೆ ಮತ್ತೊಮ್ಮೆ ಮ್ಯಾಚ್ ವಿನ್ನರ್ ಆಗಿ ಮಿಂಚಿದ್ದು ಅನುಭವಿ ಆಟಗಾರ ಸಿಕಂದರ್ ರಾಜಾ. ಈ ಮೂಲಕ ಚುಟುಕು ಮಾದರಿಯಲ್ಲಿ ತಾನೋರ್ವ ಎಂಥಾ ಅದ್ಭುತ ಆಟಗಾರ ಎಂಬುದನ್ನು ರಾಜಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಸಾಕಷ್ಟು ತಲೆಕೆಡಿಸಿಕೊಂಡಿದ್ದ ಸಿಕಂದರ್ ರಾಜಾಗೆ ಪಂದ್ಯಕ್ಕೂ ಮುನ್ನ ಹೊಸ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯಲು ಓರ್ವ ದಿಗ್ಗಜ ಆಟಗಾರನ ಮಾತು ನೆರವಾಯಿತು ಎಂದಿದ್ದಾರೆ ಸ್ವತಃ ಸಿಕಂದರ್ ರಾಜಾ. ಪಂದ್ಯದ ಮುಗಿದ ಬಳಿಕ ಈ ಬಗ್ಗೆ ಸ್ವತಃ ಸಿಕಂದರ್ ರಾಜಾ ಮಾತನಾಡಿದ್ದು ಆ ದಿಗ್ಗಜ ಆಟಗಾರನ ಸ್ಪೂರ್ತಿಯುತ ಮಾತುಗಳು ನನ್ನಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿತು ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ರಾಜಾ ಹೇಳಿದ ಆ ದಿಗ್ಗಜ ಯಾರು?

ರಾಜಾ ಹೇಳಿದ ಆ ದಿಗ್ಗಜ ಯಾರು?

ಸಿಕಂದರ್ ರಾಜಾ ಉಲ್ಲೇಖಿಸಿದ್ದು ಬೇರೆ ಯಾರನ್ನೂ ಅಲ್ಲ. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಬಗ್ಗೆ. ಸಿಕಂದರ್ ರಾಜಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು ರಿಕಿ ಪಾಂಟಿಂಗ್. ಈ ಮಾತುಗಳು ತನ್ನನ್ನು ಹೆಚ್ಚು ಸ್ಪೂರ್ತಿಗೊಳಿಸಿತು ಎಂದಿದ್ದಾರೆ ರಾಜಾ. "ನಾನು ಇವತ್ತಿನ ಪಂದ್ಯಕ್ಕೆ ಸಾಕಷ್ಟು ಕಾತರನಾಗಿದ್ದೆ. ಇಂದು ಮುಂಜಾನೆ ನಾನು ರಿಕಿ ಪಾಂಟಿಂಗ್ ಅವರ ವಿಡಿಯೋವನ್ನು ನೋಡಿದೆ. ಅರ ಮಾತುಗಳೇ ಇಂದು ನಾನು ಇಂಥಾ ಪ್ರದರ್ಶನ ನೀಡಲು ಸಾಧ್ಯವಾಗುವಂತೆ ಮಾಡಿತು. ಆ ಕಾರಣಕ್ಕಾಗಿ ನಾನು ರಿಕಿ ಪಾಂಟಿಂಗ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ ಜಿಂಬಾಬ್ವೆ ತಂಡದ ಪ್ರಮುಖ ಆಟಗಾರ ಸಿಕಂದರ್ ರಾಜಾ.

ರಾಜಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದ ಪಾಂಟಿಂಗ್

ರಾಜಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದ ಪಾಂಟಿಂಗ್

ಐಸಿಸಿಯ ಸಾಮಾಜಿಕ ಜಾಲತಾಣದಲ್ಲಿ ರಿಕಿ ಪಾಂಟಿಂಗ್ ಅವರ ವಿಶೇಷ ಸಂದರ್ಶನವನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಪಾಂಟಿಂಗ್ ಜಿಂಬಾಬ್ವೆ ಆಟಗಾರ ಸಿಕಂದರ್ ರಾಜಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ತಂಡವನ್ನು ಮುಂದೆ ನಿಂತು ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುವ ಬಗ್ಗೆ ಭಾರೀ ಮೆಚ್ಚುಗೆಯನ್ನು ಪಾಂಟಿಂಗ್ ವ್ಯಕ್ತಪಡಿಸಿದ್ದರು. ಪಂದ್ಯಕ್ಕೂ ಮುನ್ನ ಈ ವಿಡಿಯೋವನ್ನು ನೋಡಿದ್ದು ತನಗೆ ಹೆಚ್ಚು ಸ್ಪೋರ್ತಿ ನೀಡಿತು ಎಂದು ರಾಜಾ ಹೇಳಿದ್ದಾರೆ.

ಪಾಕ್ ವಿರುದ್ಧ ಬೌಲಿಂಗ್‌ನಲ್ಲಿ ಮಿಂಚಿದ ರಾಜಾ

ಪಾಕ್ ವಿರುದ್ಧ ಬೌಲಿಂಗ್‌ನಲ್ಲಿ ಮಿಂಚಿದ ರಾಜಾ

ಜಿಂಬಾಬ್ವೆ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದ ಮೂರು ಪಂದ್ಯಗಳಲ್ಲಿಯೂ ಸಿಕಂದರ್ ರಾಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಮಹತ್ವದ ಅಂಶ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರಾಜಾ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವಿಗ ಕಾರಣವಾದರ. 4 ಓವರ್‌ಗಳಲ್ಲಿ ರಾಜಾ 25 ರನ್‌ಗಳನ್ನು ನೀಡಿ ಪಾಕ್ ತಂಡದ ಮೂರು ವಿಕೆಟ್ ಸಂಪಾದಿಸಿದರು. ಈ ಮೂಲಕ ತಂಡದ ಗೆಲುವಿಗೆ ರಾಜಾ ಮತ್ತೊಮ್ಮೆ ಕಾರಣವಾಗಿದ್ದಾರೆ.

ಸೆಮಿಫೈನಲ್‌ ಮೇಲೆ ಕಣ್ಣಿಟ್ಟ ಜಿಂಬಾಬ್ವೆ

ಸೆಮಿಫೈನಲ್‌ ಮೇಲೆ ಕಣ್ಣಿಟ್ಟ ಜಿಂಬಾಬ್ವೆ

ಇನ್ನು ಅರ್ಹತಾ ಸುತ್ತಿನಲ್ಲಿ ಎರಡು ಪಂದ್ಯ ಗೆದ್ದು ಸೂಪರ್ 12 ಹಂತ ಪ್ರವೇಶಿಸಿರುವ ಜಿಂಬಾಬ್ವೆ ಈಗ ಸೆಮಿಫೈನಲ್ ಮೇಲೆ ಕಣ್ಣಿಟ್ಟಿದೆ. ಆದರೆ ಇದು ಸಾಕಷ್ಟು ಜಿಂಬಾಬ್ವೆ ಪಾಲಿಗೆ ಕಠಿಣ ಹಾದಿಯಾಗಿದ್ದರೂ ಅಸಾಧ್ಯವಲ್ಲ ಎಂಬುದು ಸ್ಪಷ್ಟ. ಸೂಪರ್ 12 ಹಂತದಲ್ಲಿ ಆಡಿರುವ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಸೋಲು ಅನುಭವಿಸಿರುವ ಜಿಂಬಾಬ್ವೆ ತಂಡ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು ಮುಂದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾದರೆ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಜಿಂಬಾಬ್ವೆ ಮುಂದಿದೆ.

Story first published: Friday, October 28, 2022, 13:03 [IST]
Other articles published on Oct 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+