Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಕಾಟ್ಲೆಂಡ್‌ ವಿರುದ್ಧ ಭರ್ಜರಿಯಾಗಿ ಗೆದ್ದು ಸೂಪರ್ 12ಗೆ ಪ್ರವೇಶಿಸಿದ ಜಿಂಬಾಬ್ವೆ

T20 world cup: Zimbabwe won against Scotland and enter super 12

ಟಿ20 ವಿಶ್ವಕಪ್‌ನಲ್ಲಿ ಅರ್ಹತಾ ಸುತ್ತಿನ ಅಂತಿಮ ಪಂದ್ಯ ಮುಕ್ತಾಯವಾಗಿದ್ದು ಜಿಂಬಾಬ್ವೆ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಜಿಂಬಾಬ್ವೆ ಪಡೆ ಈ ಬಾರಿಯ ವಿಶ್ವಕಪ್‌ನಲ್ಲಿ ಸೂಪರ್ 12 ಹಂತಕ್ಕೆ ತಲುಪಿದರೆ ಸೋಲು ಅನುಭವಿಸಿದ ಸ್ಕಾಟ್ಲೆಂಡ್ ತಂಡ ವಿಶ್ವಕಪ್‌ನ ಹೋರಾಟವನ್ನು ಅಂತ್ಯಗೊಳಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಶಿಸ್ತಿನ ಬೌಲಿಂಗ್ ನಡೆಸಿದ ಜಿಂಬಾಬ್ವೆ ತಂಡ ಸ್ಕಾಟ್ಲೆಂಡ್ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಸ್ಕಾಟ್ಲೆಂಡ್ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಆರಂಭದಲ್ಲಿ ಎಡವಿದರೂ ಬಳಿಕ ನಾಯಕ ಕ್ರೇಕ್ ಇರ್ವೀನ್ ಹಾಗೂ ಸಿಕಂದರ್ ರಾಜಾ ಅವರ ಅದ್ಭುತ ಪ್ರದರ್ಶನದಿಂದಾಗಿ 5 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ.

ಸಾಧಾರಣ ಮೊತ್ತಕ್ಕೆ ಆಟ ಮುಗಿಸಿದ ಸ್ಕಾಟ್ಲೆಂಡ್

ಸಾಧಾರಣ ಮೊತ್ತಕ್ಕೆ ಆಟ ಮುಗಿಸಿದ ಸ್ಕಾಟ್ಲೆಂಡ್

ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ಸ್ಕಾಟ್ಲೆಂಡ್ ತಂಡ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೇ ಹಿನ್ನಡೆ ಅನುಭವಿಸಿತ್ತು. ಜಾರ್ಜ್ ಮುನ್ಸೇ ಮಾತ್ರವೇ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅರ್ಧ ಶತಕ ಸಿಡಿಸಿದ್ದಾರೆ. ಮುನ್ಸೇ ಏಕಾಂಗೊ ಹೋರಾಟದ ಪರಿಣಾಮವಾಗಿ ಸ್ಕಾಟ್ಲೆಂಟ್ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 132 ರನ್‌ಗಳನ್ನು ಗಳಿಸಿತು.

ಜಿಂಬಾಬ್ವೆಗೆ ಆರಂಭಿಕ ಆಘಾತ, ಆಸರೆಯಾದ ಇರ್ವೀನ್, ರಾಜಾ

ಸ್ಕಾಟ್ಲೆಂಡ್ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. 42 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜೊತೆಯಾದ ನಾಯಕ ಕ್ರೇಗ್ ಇರ್ವೀನ್ ಹಾಗೂ ಸಿಕಂದರ್ ರಾಜಾ ಅದ್ಭುತ ಪ್ರದರ್ಶನ ನೀಡಿದರು. ಅದ್ಭುತ ಫಾರ್ಮ್ ಮುಂದುವರಿಸಿರುವ ಸಿಕಂದರ್ ರಾಜಾ 23 ಎಸೆತಗಳಲ್ಲಿ 40 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಇನ್ನು ನಾಯಕ ಇರ್ವೀನ್ 58 ರನ್‌ಗಳಿಸಿ ಔಟಾದರು. ಅದಾಗಲೇ ಜಿಂಬಾಬ್ವೆ ತಂಡ ಗೆಲುವಿನ ಸನಿಹಕ್ಕೆ ಬಂದಿದ್ದ ಕಾರಣ ನಂತರ ಸುಲಭವಾಗಿ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ.

ಸೂಪರ್ 12 ಹಂತಕ್ಕ ಪ್ರವೇಶ ಪಡೆದ ಇರ್ವೀನ್ ಪಡೆ

ಸ್ಕಾಟ್ಲೆಂಡ್ ವಿರುದ್ಧದ ಈ ಗೆಲುವಿನಿಂದಾಗಿ ಜಿಂಬಾಬ್ವೆ ತಂಡ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿದ್ದು ಪ್ರಮುಖ ತಂಡಗಳೊಂದಿಗೆ ಹೋರಾಡಲು ಸಜ್ಜಾಗಿದೆ. ಗ್ರೂಫ್ ಬಿನಲ್ಲಿ ಜಿಂಬಾಬ್ವೆ ಅಗ್ರ ತಂಡವಾಗಿ ಸೂಪರ್ 12ಗೆ ಅರ್ಹತೆ ಪಡೆದುಕೊಂಡಿದೆ. ಐರ್ಲೆಂಡ್ ಈ ಗುಂಪಿನಿಂದ ಅರ್ಹತೆ ಪಡೆದುಕೊಂಡಿರುವ ಎರಡನೇ ತಂಡವಾಗಿದೆ. ಇನ್ನು ಗ್ರೂಪ್ 'ಎ'ಯಲ್ಲಿ ಶ್ರೀಲಂಕಾ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪ್ಲೇಯಿಂಗ್ XI ಹೀಗಿದೆ

ಪ್ಲೇಯಿಂಗ್ XI ಹೀಗಿದೆ

ಸ್ಕಾಟ್ಲೆಂಡ್ ಆಡುವ ಬಳಗ: ಜಾರ್ಜ್ ಮುನ್ಸಿ, ಮೈಕೆಲ್ ಜೋನ್ಸ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರಿಂಗ್ಟನ್ (ನಾಯಕ), ಮೈಕೆಲ್ ಲೀಸ್ಕ್, ಕ್ಯಾಲಮ್ ಮ್ಯಾಕ್ಲಿಯೋಡ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ ವೀಲ್
ಬೆಂಚ್: ಕ್ರೇಗ್ ವ್ಯಾಲೇಸ್, ಕ್ರಿಸ್ ಸೋಲ್, ಹಮ್ಜಾ ತಾಹಿರ್, ಬ್ರಾಂಡನ್ ಮೆಕ್ಮುಲ್ಲೆನ್

ಜಿಂಬಾಬ್ವೆ ಆಡುವ ಬಳಗ: ಕ್ರೇಗ್ ಎರ್ವಿನ್ (ನಾಯಕ), ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ರಿಚರ್ಡ್ ನಾಗರವಾ, ಟೆಂಡೈ ಚಟಾರಾ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ಟೋನಿ ಮುನ್ಯೊಂಗಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಾಡ್ ಇವಾನ್ಸ್, ಕ್ಲೈವ್ ಮದಂಡೆ

Story first published: Friday, October 21, 2022, 17:55 [IST]
Other articles published on Oct 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+