For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್

T20 worldcup 2021, Match 10: Scotland Won against Oman by 8 wickets

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಹತ್ತನೇ ಪಂದ್ಯ ಇಂದು ( ಅಕ್ಟೋಬರ್ 21 ) ಒಮನ್ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವೆ ನಡೆಯಿತು. ಒಮನ್ ನಗರದ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಜಯ ಸಾಧಿಸುವುದರ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಒಮನ್ 20 ಓವರ್‌ಗಳಲ್ಲಿ 122 ರನ್‌ಗಳಿಗೆ ಆಲ್ ಔಟ್ ಆಯಿತು. ಒಮನ್ ಪರ ಆಕೀಬ್ ಇಲಿಯಾಸ್, ಮೊಹಮ್ಮದ್ ನದೀಮ್ ಮತ್ತು ನಾಯಕ ಜೀಶನ್ ಮಕ್ಸೂದ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಎರಡಂಕಿ ಮುಟ್ಟುವ ಪ್ರಯತ್ನವನ್ನು ಮಾಡಲಿಲ್ಲ. ಹೀಗೆ ಒಮನ್ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದಲ್ಲಿ ವಿಫಲತೆಯನ್ನು ಹೊಂದಿತು. ಸ್ಕಾಟ್ಲೆಂಡ್ ಪರ ಡೇವಿ 3, ಶಫ್ಯಾನ್ ಶರೀಫ್ 2, ಲೀಸ್ಕ್ 2 ಮತ್ತು ಮಾರ್ಕ್ ವ್ಯಾಟ್ 1 ವಿಕೆಟ್ ಪಡೆದು ಮಿಂಚಿದರು.

ಇನ್ನು ಒಮನ್ ನೀಡಿದ 123 ರನ್‌ಗಳ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ಜಾಗರೂಕತೆಯಿಂದ ಆಟವನ್ನಾಡಿ 17 ಓವರ್‌ಗಳಲ್ಲಿಯೇ ಗುರಿಯನ್ನು ತಲುಪಿದೆ. ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ 20, ಕೈಲ್ ಕೊಯೆಟ್ಜರ್ 41, ಮ್ಯಾಥ್ಯೂ ಕ್ರಾಸ್ ಅಜೇಯ 26 ಮತ್ತು ರಿಚೀ ಬೆರಿಂಗ್ಟನ್ ಅಜೇಯ 31 ರನ್ ಗಳಿಸಿದರು. ಈ ಮೂಲಕ ಸ್ಕಾಟ್ಲೆಂಡ್ 17 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 ರನ್ ಗಳಿಸುವುದರ ಮೂಲಕ ಸೂಪರ್ 12 ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದೆ. ಹೀಗೆ ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿರುವ ಸ್ಕಾಟ್ಲೆಂಡ್ ಆ ಸುತ್ತಿನ ತನ್ನ ಮೊದಲನೇ ಪಂದ್ಯವನ್ನು ಅಕ್ಟೋಬರ್ 25ರ ಸೋಮವಾರದಂದು ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ.

ಇನ್ನು ಟೂರ್ನಿಯಲ್ಲಿ ಇದುವರೆಗೂ 3 ಅರ್ಹತಾ ಪಂದ್ಯಗಳನ್ನಾಡಿರುವ ಸ್ಕಾಟ್ಲೆಂಡ್ ಎರಡೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಇದೀಗ ಸೂಪರ್ 12 ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದೆ. ಇನ್ನು ಇದಕ್ಕೂ ಮುನ್ನ ಶ್ರೀಲಂಕಾ ತಂಡ ಕೇವಲ 2 ಪಂದ್ಯಗಳನ್ನಾಡಿ ಉತ್ತಮ ನೆಟ್ ರನ್ ರೇಟ್ ಹೊಂದಿದ್ದ ಕಾರಣ ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತ್ತು.

ಅರ್ಹತಾ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶ್ರೀಲಂಕಾ 70 ರನ್‌ಗಳ ಜಯ

ಈ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಬಹುಬೇಗನೆ ತನ್ನ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 8 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಅಲ್ಪ ಮೊತ್ತಕ್ಕೆ ಇನಿಂಗ್ಸ್ ಮುಗಿಸುವ ರೀತಿ ಇತ್ತು. ಆದರೆ ಶ್ರೀಲಂಕಾ ತಂಡದ ಪರ ಪತುಮ್ ನಿಸ್ಸಾಂಕ 61, ವನಿಂದು ಹಸರಂಗ 71 ಹಾಗೂ ತಂಡದ ನಾಯಕ ದಾಸುನ್ ಶನಕ ಅಜೇಯ 21 ರನ್ ಗಳಿಸಿದ ಕಾರಣ ಶ್ರೀಲಂಕಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇನ್ನು ಶ್ರೀಲಂಕಾ ನೀಡಿದ 172 ರನ್‌ಗಳ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ 18.3 ಓವರ್‌ಗಳಲ್ಲಿ 101 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್ ಔಟ್ ಆಯಿತು. ಈ ಮೂಲಕ ಶ್ರೀಲಂಕಾ 70 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಒಟ್ಟು 2 ಪಂದ್ಯಗಳನ್ನಾಡಿರುವ ಶ್ರೀಲಂಕಾ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು 4 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶಿಸಿದೆ. ಶ್ರೀಲಂಕಾ ಎ ಗುಂಪಿನಲ್ಲಿದ್ದು ತನ್ನ ಗುಂಪಿನ ಇತರೆ ತಂಡಗಳು ಋಣಾತ್ಮಕ ನೆಟ್ ರನ್ ರೇಟ್ ಹೊಂದಿರುವ ಕಾರಣ 2 ಪಂದ್ಯಗಳು ಮುಗಿದ ಕೂಡಲೇ 4 ಅಂಕಗಳನ್ನು ಪಡೆದು ಕೊಳ್ಳುವುದರ ಮೂಲಕ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಸೂಪರ್ 12 ಹಂತಕ್ಕೆ ಪ್ರವೇಶಿಸಿದೆ.

ಕೊಹ್ಲಿ ರೋಹಿತ್ ಅಲ್ವೇ ಅಲ್ಲ, ಟೀಮ್ ಇಂಡಿಯಾದ ರಿಯಲ್ ಗೇಮ್ ಚೇಂಜರ್ಸ್ ಇವರೇ | Oneindia Kannada

Story first published: Friday, October 22, 2021, 10:18 [IST]
Other articles published on Oct 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+