For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಅರ್ಹತಾ ಸುತ್ತಿನ ಪಂದ್ಯದಲ್ಲಿ ಒಮಾನ್ ವಿರುದ್ಧ ಬಾಂಗ್ಲಾದೇಶಕ್ಕೆ ಜಯ

T20 worldcup 2021, Match 6: Bangladesh Won against Oman by 26 runs

ಕಳೆದ ಭಾನುವಾರದಿಂದ ಆರಂಭವಾಗಿರುವ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆತಿದೆ. ಟೂರ್ನಿಯ ಅರ್ಹತಾ ಸುತ್ತಿನ ಆರನೇ ಪಂದ್ಯದಲ್ಲಿ ಇಂದು ( ಅಕ್ಟೋಬರ್ 19 ) ಬಾಂಗ್ಲಾದೇಶ ಮತ್ತು ಒಮನ್ ತಂಡಗಳು ಸೆಣಸಾಡಿದವು. ಈ ಪಂದ್ಯ ಒಮನ್‌ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆಯಿತು.

ಈ ಪಂದ್ಯದಲ್ಲಿ ಒಮನ್ ತಂಡದ ವಿರುದ್ಧ ಬಾಂಗ್ಲಾದೇಶ ತಂಡ 26 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶಿಸುವ ಬಾಂಗ್ಲಾದೇಶದ ಆಸೆ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 153 ರನ್ ಗಳಿಸುವುದರ ಮೂಲಕ ಎದುರಾಳಿ ಒಮನ್ ತಂಡಕ್ಕೆ 154 ರನ್‌ಗಳ ಗುರಿಯನ್ನು ನೀಡಿತು. ಇನ್ನೂ ಮೊದಲನೇ ಅಭ್ಯಾಸ ಪಂದ್ಯದಲ್ಲಿ 10 ವಿಕೆಟ್‍ಗಳ ಗೆಲುವನ್ನು ಸಾಧಿಸುವುದರ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಒಮಾನ್ ಈ ಪಂದ್ಯದಲ್ಲಿ ಅಂತಹದ್ದೇ ಪ್ರದರ್ಶನ ನೀಡುವಲ್ಲಿ ಎಡವಿದೆ. 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್‌ ಗಳಿಸಿದ ಒಮನ್ ಬಾಂಗ್ಲಾದೇಶದ ವಿರುದ್ಧ ಸೋಲಿಗೆ ಶರಣಾಗಿದೆ.

ಬಾಂಗ್ಲಾದೇಶ ಮತ್ತು ಒಮಾನ್ ತಂಡಗಳ ನಡುವಿನ ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ

ಬಾಂಗ್ಲಾದೇಶ ಮತ್ತು ಒಮನ್ ತಂಡದ ನಡುವೆ ನಡೆದ ಅರ್ಹತಾ ಸುತ್ತಿನ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ನಡೆಸಿತು. ಬಾಂಗ್ಲಾದೇಶದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮೊಹಮ್ಮದ್ ನಯೀಮ್ 64 ರನ್ ಗಳಿಸಿ ಉತ್ತಮ ಆರಂಭವನ್ನು ನೀಡಿದರು. ಮತ್ತೋರ್ವ ಆರಂಭಿಕ ಆಟಗಾರನಾದ ಲಿಟನ್ ದಾಸ್ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ನಂತರ ಬಂದ ಮೆಹದಿ ಹಸನ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು, ಶಕಿಬ್ ಅಲ್ ಹಸನ್ 29 ಎಸೆತಗಳಲ್ಲಿ 42 ರನ್ ಬಾರಿಸಿ ಸ್ಫೋಟಕ ಆಟವನ್ನಾಡಿ ರನ್ ಔಟ್ ಆದರು. ಇನ್ನುಳಿದಂತೆ ಅಫೀಫ್ ಹುಸೇನ್ 1, ತಂಡದ ನಾಯಕ ಮಹಮದುಲ್ಲಾ 17, ಮುಶ್ಫಿಕರ್ ರಹೀಂ 6, ಮೊಹಮ್ಮದ್ ಸೈಫುದ್ದೀನ್ 0, ಟಸ್ಕಿನ್ ಅಹ್ಮದ್ ಅಜೇಯ 1 ಮತ್ತು ಮುಸ್ತಫಿಜರ್ ರೆಹಮಾನ್ 2 ರನ್ ಗಳಿಸಿದರು. ಈ ಮೂಲಕ ಬಾಂಗ್ಲಾದೇಶ ಒಟ್ಟಾರೆ 20 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲ್ ಔಟ್ ಆಯಿತು.

ಇನ್ನು ಬಾಂಗ್ಲಾದೇಶ ನೀಡಿದ 154 ರನ್‌ಗಳ ಗುರಿಯನ್ನು ಒಮನ್ ತಂಡ ಚೇಸ್ ಮಾಡಲಿದೆ ಎಂಬ ನಿರೀಕ್ಷೆ ಕೂಡ ಇತ್ತು. ಈ ರೀತಿಯ ನಿರೀಕ್ಷೆ ಹುಟ್ಟಲು ಕಾರಣ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಒಮನ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೇ 13.4 ಓವರ್‌ಗಳಲ್ಲಿ 131 ರನ್‌ಗಳನ್ನು ಬಾರಿಸಿದ್ದು. ಹೌದು, ಕಳೆದ ಪಂದ್ಯದಲ್ಲಿ ಒಮಾನ್ ನೀಡಿದ ಪ್ರದರ್ಶನದಿಂದ ಈ ಪಂದ್ಯದಲ್ಲಿಯೂ ಅದೇ ರೀತಿಯ ಪ್ರದರ್ಶನವನ್ನು ವೀಕ್ಷಕರು ನಿರೀಕ್ಷಿಸಿದ್ದರು. ಆದರೆ ಅದೇ ರೀತಿಯ ಪ್ರದರ್ಶನವನ್ನು ನೀಡುವಲ್ಲಿ ಒಮನ್ ತಂಡ ವಿಫಲವಾಗಿದೆ. ಒಮನ್ ತಂಡದ ಪರ ಜಿತೇಂದರ್ ಸಿಂಗ್ ಮತ್ತು ಕಶ್ಯಪ್ ಪ್ರಜಾಪತಿ ಹೊರತುಪಡಿಸಿ ಬೇರೆ ಯಾವುದೇ ಆಟಗಾರರು ಸಹ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಜಿತೇಂದರ್ ಸಿಂಗ್ 33 ಎಸೆತಗಳಲ್ಲಿ 40 ರನ್ ಬಾರಿಸಿದರು. ಒಮನ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಈ ಮೂಲಕ ಬಾಂಗ್ಲಾದೇಶ 26 ರನ್‌ಗಳ ಜಯವನ್ನು ಸಾಧಿಸಿತು.

ಬಾಂಗ್ಲಾದೇಶದ ಪರ ಬ್ಯಾಟಿಂಗ್‌ನಲ್ಲಿ 42 ರನ್ ಬಾರಿಸಿ ಬೌಲರ್‌ನಲ್ಲಿ 3 ವಿಕೆಟ್ ಪಡೆದ ಶಕಿಬ್ ಅಲ್ ಹಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Wednesday, October 20, 2021, 10:19 [IST]
Other articles published on Oct 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+