ಟಿ20: 11 ವರ್ಷಗಳ ವೃತ್ತಿ ಬದುಕಿನಲ್ಲಿ ಧೋನಿ ವಿಶಿಷ್ಟ ದಾಖಲೆ
ಬೆಂಗಳೂರು, ಫೆಬ್ರವರಿ 03: ಎಂಎಸ್ ಧೋನಿ ಅವರು ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಕಳೆದ 11 ವರ್ಷಗಳಿಂದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಮ್ಮೆ ಕೂಡಾ ಶೂನ್ಯ ಸುತ್ತಿಲ್ಲ.
ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದು ನೆನಪಿರಬಹುದು. ಇದು ಅವರು 10 ವರ್ಷಗಳಲ್ಲಿ ಗಳಿಸಿದ ಮೊದಲ ಅರ್ಧಶತಕ ಎಂಬುದು ಮತ್ತೊಂದು ವಿಶೇಷ.

ದೀರ್ಘಕಾಲ ಶೂನ್ಯ ಸುತ್ತದೆ ಉಳಿದಿರುವ ಆಟಗಾರ ಎಂಬ ಸಾಧನೆ ಧೋನಿ ಅವರ ಹೆಸರಿನಲ್ಲಿದೆ. 64 ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಗಳಲ್ಲಿ ಒಮ್ಮೆ ಕೂಡಾ ಡಕ್ ಔಟ್ ಆಗಿಲ್ಲ. 22 ಸ್ಟಂಪಿಂಗ್ಸ್ ಹಾಗೂ 41 ಕ್ಯಾಚ್ ಪಡೆದಿದ್ದಾರೆ. ಇದು ಕೂಡಾ ದಾಖಲೆಯಾಗಿದೆ.
2007ರ ಟಿ-20 ವಿಶ್ವಕಪ್ ಗೆಲುವು, 2009ರಲ್ಲಿ ನಂ 1 ಟೆಸ್ಟ್ ತಂಡ, 2011ರಲ್ಲಿ ವಿಶ್ವಕಪ್ ಜಯ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವನ್ನು ಸಾಂಕೇತಿಕವಾಗಿ ಸೂಚಿಸುವ ನಾಲ್ಕು ಸ್ಟಾರ್ ಗಳಿರುವ ನೆನಪಿನ ಕಾಣಿಕೆಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಧೋನಿ ಅವರಿಗೆ ನೀಡಿ ಸನ್ಮಾನಿಸಲಾಯಿತು.
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications