ಭಾರತ ವಿರುದ್ಧದ ಟಿ20 ಸರಣಿಗೆ ಕಿವೀಸ್ ತಂಡ ಪ್ರಕಟ, ತಂಡಕ್ಕೆ ಮರಳಿದ ಕೇನ್

ಬೆಂಗಳೂರು, ಜನವರಿ 30: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಟಿ20 ತಂಡಕ್ಕೆ ಮರಳಿದ್ದಾರೆ. ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.
ಶ್ರೀಲಂಕಾ ವಿರುದ್ಧ ಏಕೈಕ ಟಿ20 ಪಂದ್ಯಕ್ಕೆ ಅಲಭ್ಯರಾದ ಬಳಿಕ ಕೇನ್ ಅವರು ಟಿ20 ಪಂದ್ಯವನ್ನಾಡಿರಲಿಲ್ಲ. ಜಿಮ್ಮಿ ನೀಶಮ್ ಬದಲಿಗೆ ತಂಡಕ್ಕೆ ಬಂದಿದ್ದ ಡಗ್ ಬ್ರಾಸ್ ವೆಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹೆನ್ಸಿ ನಿಕೋಲಸ್ ಅವರು 14 ಮಂದಿ ತಂಡದಿಂದ ಹೊರಬಿದ್ದಿದ್ದಾರೆ.
ಆಲ್ ರೌಂಡರ್ ಡರ್ಲ್ ಮಿಚೆಲ್ ಹಾಗೂ ವೇಗಿ ಬ್ಲೇರ್ ಟಿಕ್ನರ್ ತಂಡದಲ್ಲಿ ಹೊಸಮುಖಗಳಾಗಿದ್ದಾರೆ. ನ್ಯೂಜಿಲೆಂಡ್ ನ ದೇಶಿ ಟಿ20 ಲೀಗ್ ಸೂಪರ್ ಸ್ಮಾಶ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಫೆಬ್ರವರಿ 06ರಿಂದ ವೆಲ್ಲಿಂಗ್ಟನ್ ನಲ್ಲಿ ಆರಂಭವಾಗಲಿವೆ. ಭಾರತ ಹಾಗೂ ಕಿವೀಸ್ ಮಹಿಳೆಯರ ಪಂದ್ಯವೂ ಅದೇ ಪಿಚ್ ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ತಂಡ : ಕೇನ್ ವಿಲಿಯಮ್ಸನ್(ನಾಯಕ), ಡಗ್ ಬ್ರೇಸ್ ವೆಲ್, ಕಾಲಿನ್ ಡಿ ಗ್ರ್ಯಾಂಡ್ ಹೊಮ್, ಲಾಕಿ ಫರ್ಗುಸನ್(ಮೊದಲೆರಡು ಪಂದ್ಯಕ್ಕೆ), ಮಾರ್ಟಿನ್ ಗಪ್ಟಿಲ್, ಸ್ಕಾಟ್ ಕುಗ್ಗೆಲೈನ್, ಡರ್ಲ್ ಮಿಚೆಲ್, ಕಾಲಿನ್ ಮನ್ರೋ, ಮಿಚೆಲ್ ಸಾಂಟ್ನರ್, ಟಿಮ್ ಶಿಫರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬ್ಲೆರ್ ಟಿಕ್ನರ್(ಮೂರನೇ ಪಂದ್ಯಕ್ಕೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications