For Quick Alerts
ALLOW NOTIFICATIONS  
For Daily Alerts
 

ಬೆಳ್ಳಿ ಪರದೆ ಮೇಲೆ ಬ್ಯಾಟ್‌ ಬೀಸಲಿದ್ದಾರೆ ಭಾರತದ ನಾಯಕಿ ಮಿಥಾಲಿ ರಾಜ್

By Shruthi Gk
Taapsee Pannu acting in Indian Womens Cricket Captain Mithali Rajs Biopic

ಬೆಂಗಳೂರು, ಡಿಸೆಂಬರ್ 3: ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇತ್ತೀಚಿಗೆ ಸಾಕಷ್ಟು ಬಯೋಪಿಕ್ ಗಳು ಸೆಟ್ಟೇರಿವೆ. ಅದರಲ್ಲೂ ಕ್ರೀಡಾ ಆಧಾರಿತ ಬಯೋಪಿಕ್ ಗಳು ಹೆಚ್ಚಾಗಿ ಬರುತ್ತಿವೆ. ಈಗಾಗಲೆ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಬಯೋಪಿಕ್ ತಯಾರಾಗುತ್ತಿದೆ. ನಟ ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಗ ಇದೆ ಸಾಲಿಗೆ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬಯೋಪಿಕ್ ಸೇರ್ಪಡೆಯಾಗುತ್ತಿದೆ.

ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜೀವನ ಈಗ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ಬರುತ್ತೆ ಎಂದು ಅನೇಕ ಸಮಯದಿಂದ ಹೇಳಲಾಗುತ್ತಿತ್ತು. ಆದರೀಗ ಅಧಿಕೃತವಾಗಿ ಈ ವಿಚಾರ ಅನೌನ್ಸ್ ಆಗಿದೆ. ಡಿಸೆಂಬರ್ 3 ಮಿಥಾಲಿ ರಾಜ್ 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ದಿನವೆ ಸಿನಿಮಾ ಕೂಡ ಅನೌನ್ಸ್ ಆಗಿದೆ.

ಅಂದ್ಹಾಗೆ ಮಿಥಾಲಿ ರಾಜ್ ಪಾತ್ರದಲ್ಲಿ ಟ್ಯಾಲೆಂಟೆಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ 'ಶಬಾಶ್ ಮಿಥು' ಟೈಟಲ್ ಇಡಲಾಗಿದೆ. ಚಿತ್ರಕ್ಕೆ ನಿರ್ದೇಶಕ ರಾಹುಲ್ ಧೋಲಾಕಿಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ತಾಪ್ಸಿ, ಮಿಥಾಲಿ ರಾಜ್ ಗೆ ಹಟ್ಟುಹಬ್ಬದ ಶುಭಾಶಯ ಕೋರಿ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ 20 ವರ್ಷ ಪೂರೈಸದ ಮೊದಲ ಕ್ರಿಕೆಟರ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಟಿ ತಾಪ್ಸಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಿಷನ್ ಮಂಗಲ್ ಮತ್ತು ಸಾಂದ್ ಕಿ ಆಂಖ್ ಎರಡು ಹಿಟ್ ಚಿತ್ರಗಳನ್ನು ನೀಡಿರುವ ತಾಪ್ಸಿ ಈಗ ಮಿಥಾಲಿ ಆಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.

Story first published: Tuesday, December 3, 2019, 19:12 [IST]
Other articles published on Dec 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+