ಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋ

ಪಾರ್ಲ್, ಡಿಸೆಂಬರ್ 5: ಆಟದ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ತಬ್ರೇಜ್ ಶಮ್ಸಿ ಮ್ಯಾಜಿಕ್ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ದಕ್ಷಿಣ ಆಫ್ರಿಕಾದ ಪಾರ್ಲ್‌ನಲ್ಲಿರುವ ಬೋಲ್ಯಾಂಡ್ ಪಾರ್ಕ್ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 4) ನಡೆದ ಮ್ಝಾನ್ಸಿ ಸೂಪರ್ ಲೀಗ್ ಪಂದ್ಯದ ವೇಳೆ ಕೈಯಲ್ಲಿದ್ದ ಕರವಸ್ತ್ರವನ್ನು ಕೋಲಾಗಿ ಪರಿವರ್ತಿಸಿ ಶಮ್ಸಿ ಅಚ್ಚರಿ ಮೂಡಿಸಿದ್ದರು.
ಮ್ಝಾನ್ಸಿ ಸೂಪರ್ ಲೀಗ್ 24ನೇ ಪಂದ್ಯವಾಗಿ ಪಾರ್ಲ್ vs ಡರ್ಬನ್ ಹೀಟ್ ನಡುವಿನ ಪಂದ್ಯದಲ್ಲಿ, ಡರ್ಬನ್ ಹೀಟ್ ಇನ್ನಿಂಗ್ಸ್‌ನಲ್ಲಿ ಪಾರ್ಲ್ ರಾಕ್ಸ್ ಬೌಲರ್ ತಬ್ರೇಜ್ ಶಮ್ಸಿ 7.6ನೇ ಓವರ್‌ಗೆ ಎಸೆದ ಚೆಂಡಿಗೆ, ವಿಹಾಬ್ ಲುಬ್ಬೆ ಲಾಂಗ್ ಆಫ್ ಬೌಂಡರಿಯತ್ತ ಚೆಂಡು ಅಟ್ಟಿದರು.
ಆದರೆ ಅಲ್ಲಿ ನಿಂತಿದ್ದ ಹಾರ್ಡಸ್ ವಿಲ್ಜೋಯೆನ್ ಚೆಂಡನ್ನು ಕ್ಯಾಚ್ ಮಾಡಿದರು. ವಿಕೆಟ್ ಲಭಿಸುತ್ತಲೇ ತಬ್ರೇಜ್, ಕೈಯಲ್ಲಿದ್ದ ಕರ್ಚೀಫ್ ಹೊರಗೆ ಚಾಚಿದವರೇ ಅದನ್ನು ಹ್ಯಾಂಡ್ ಸ್ಟಿಕ್‌ನ ಹಾಗೆ ಬದಲಾಯಿಸಿದರು. ಶಮ್ಸಿ ಮಾಡಿರುವ ಈ ಮ್ಯಾಜಿಕ್ ವೀಡಿಯೋ ಸಾಮಾಜಿಕ ತಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪಾರ್ಲ್ ರಾಕ್ಸ್, ಕ್ಯಾಮರೂನ್ ಡೆಲ್ಪೋರ್ಟ್ 84, ನಾಯಕ ಫಾ ಡು ಪ್ಲೆಸಿಸ್ 66 ರನ್‌ನೊಂದಿಗೆ 20 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 195 ರನ್ ಬಾರಿಸಿತ್ತು. ಡರ್ಬಲ್ ಹೀಟ್ ತಂಡ, ಅಲೆಕ್ಸ್ ಹೇಲ್ಸ್ 97 ರನ್‌ನೊಂದಿಗೆ 18.5ನೇ ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 197 ರನ್‌ನೊಂದಿಗೆ 6 ವಿಕೆಟ್ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications