'ಕನ್ನಡಿಯಲ್ಲಿ ಮುಖ ನೋಡಿಕೋ': ಉಮರ್ ಅಕ್ಮಲ್ ಆರೋಪಕ್ಕೆ ಕೋಚ್ ಮಿಕ್ಕಿ ಆರ್ಥರ್ ತಿರುಗೇಟು!

ಪಾಕಿಸ್ತಾನದ ಉಮರ್ ಅಕ್ಮಲ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾಗ ಆತನ ಪ್ರದರ್ಶನ ಕಂಡ ಹಲವಾರು ಕ್ರಿಕೆಟ್ ಆಟಗಾರರು ಮತ್ತು ಕ್ರಿಕೆಟ್ ಪಂಡಿತರು ಈತ ಭವಿಷ್ಯದಲ್ಲಿ ಪಾಕಿಸ್ತಾನದ ನಾಯಕನಾಗುವುದು ಖಚಿತ ಎಂದು ಊಹಿಸಿದ್ದರು. 2009ರ ಆಗಸ್ಟ್ 1ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಉಮರ್ ಅಕ್ಮಲ್ ಕೊನೆಯದಾಗಿ ಆಡಿದ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ್ದು 2019ರ ಅಕ್ಟೋಬರ್ 7ರಂದು ಶ್ರೀಲಂಕಾ ವಿರುದ್ಧ ನಡೆದಿದ್ದ ಟಿ ಟ್ವೆಂಟಿ ಪಂದ್ಯದ ಮೂಲಕ. ಹೀಗೆ 2009 - 2019ರವರೆಗೆ ಒಂದು ದಶಕದವರೆಗೆ ಪಾಕಿಸ್ತಾನದ ಪರ ಕಣಕ್ಕಿಳಿದಿದ್ದ ಉಮರ್ ಅಕ್ಮಲ್ ಕಾಲ ಕಳೆದಂತೆ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಬಂದರು.
ಉಮರ್ ಅಕ್ಮಲ್ 2019ರ ಬಳಿಕ ಯಾವುದೇ ಅವಕಾಶ ಸಿಗದೇ ಮೂಲೆಗುಂಪಾದರು. ಇನ್ನು ಉಮರ್ ಅಕ್ಮಲ್ ಅವಕಾಶ ಕಳೆದುಕೊಂಡು ವಿಫಲ ಹೊಂದಲು ಪ್ರಮುಖ ಕಾರಣ ಅವರ ಬ್ಯಾಟಿಂಗ್ ವೈಫಲ್ಯ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಅವರ ವಿವಾದಗಳೂ ಸಹ ಅವರನ್ನು ಮೈದಾನದಿಂದ ಹೊರದೂಡಿದವು. ಹೀಗೆ ಅವಕಾಶ ಕಳೆದುಕೊಂಡ ಹಾಗೂ ನಿಷೇಧದ ಮುಖಭಂಗಕ್ಕೊಳಗಾದ ಉಮರ್ ಅಕ್ಮಲ್ ಹಲವು ದಿನಗಳ ಬಳಿಕ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ತುಟಿಬಿಚ್ಚಿದ್ದಾರೆ.
ಇತ್ತೀಚೆಗಷ್ಟೆ ನಡೆದಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಉಮರ್ ಅಕ್ಮಲ್ 'ನನ್ನ ಕ್ರಿಕೆಟ್ ವೃತ್ತಿ ಜೀವನವನ್ನು ಕೋಚ್ ಮಿಕ್ಕಿ ಆರ್ಥರ್ ಹಾಳು ಮಾಡಿದರು. ಆಯ್ಕೆ ಸಮಿತಿ ಹಾಗೂ ಸ್ಥಳೀಯ ಕೋಚ್‌ಗಳೂ ಸಹ ನನ್ನನ್ನು ಬೆಂಬಲಿಸಲಿಲ್ಲ' ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಹೌದು, ದಕ್ಷಿಣ ಆಫ್ರಿಕಾ ಮೂಲದ ಮಿಕ್ಕಿ ಆರ್ಥರ್ ಪಾಕಿಸ್ತಾನದ ಕೋಚ್ ಆಗಿದ್ದಾಗ ತನಗೆ ಸರಿಯಾದ ಅವಕಾಶ ನೀಡದೇ ತನ್ನ ಕೆರಿಯರ್ ಹಾಳು ಮಾಡಿದರು ಎಂದು ಉಮರ್ ಅಕ್ಮಲ್ ಆರೋಪವನ್ನು ಮಾಡಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದುಮಾಡುತ್ತು. ಇದೀಗ ಈ ಗಂಭೀರ ಆರೋಪದ ಕುರಿತು ಸ್ವತಃ ಮಿಕ್ಕಿ ಆರ್ಥರ್ ಪ್ರತಿಕ್ರಿಯಿಸಿದ್ದು, ಅವರ ಈ ಪ್ರತಿಕ್ರಿಯೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಹಾಗೂ ಉಮರ್ ಅಕ್ಮಲ್ ಅವರು ಟ್ರೋಲ್‌ಗೂ ಸಹ ಒಳಗಾಗಿದ್ದರು. ಈ ಕುರಿತಾದ ಮತ್ತಷ್ಟು ವಿವರ ಮುಂದಿದೆ.

ಮಿಕ್ಕಿ ಆರ್ಥರ್ ನೀಡಿದ ಪ್ರತಿಕ್ರಿಯೆ
ಉಮರ್ ಅಕ್ಮಲ್ ಗಂಭೀರ ಆರೋಪದ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಮಿಕ್ಕಿ ಆರ್ಥರ್ ಒಂದೇ ವಾಕ್ಯದಲ್ಲಿ ತಿರುಗೇಟು ಕೊಟ್ಟಿದ್ದಾರೆ. ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೋ ಉಮರ್ ಎಂದು ಬರೆದುಕೊಂಡಿರುವ ಮಿಕ್ಕಿ ಆರ್ಥರ್ ಉಮರ್ ಅಕ್ಮಲ್ ಮಾಡಿದ ಆರೋಪವೆಲ್ಲಾ ಸುಳ್ಳು, ಅವನ ಅವನತಿಗೆ ಅವನೇ ಕಾರಣ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಕೋಚ್ ಆಗಿ ಪಾಕಿಸ್ತಾನವನ್ನು ಅತ್ಯುನ್ನತ ಹಂತಕ್ಕೆ ಕೊಂಡೊಯ್ದಿದ್ದರು ಮಿಕ್ಕಿಲ್ಲ
ಇನ್ನು ಪಾಕಿಸ್ತಾನ ಮಿಕ್ಕಿ ಆರ್ಥರ್ ಕೋಚಿಂಗ್ ಅಡಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿತ್ತು ಹಾಗೂ 2017ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಟ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದೂ ಸಹ ಇದೇ ಮಿಕ್ಕಿ ಆರ್ಥರ್ ಕೋಚ್ ಆಗಿದ್ದಾಗಲೇ. ಆದರೆ ನಂತರದ ದಿನಗಳಲ್ಲಿ ತಂಡದ ಯಶಸ್ವಿ ಕೋಚ್ ಆಗಿದ್ದ ಮಿಕ್ಕಿ ಆರ್ಥರ್ ಅವರನ್ನು ಪಾಕಿಸ್ತಾನ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಉಮರ್ ಅಕ್ಮಲ್ ಅಂಕಿಅಂಶ
16 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಉಮರ್ ಅಕ್ಮಲ್ 1003 ರನ್ ಕಲೆಹಾಕಿದ್ದರೆ, 121 ಏಕದಿನ ಪಂದ್ಯಗಳಲ್ಲಿ 3194 ರನ್ ಕಲೆಹಾಕಿದ್ದಾರೆ ಹಾಗೂ 84 ಟಿ ಟ್ವೆಂಟಿ ಪಂದ್ಯಗಳನ್ನಾಡಿ 1690 ರನ್ ಕಲೆ ಹಾಕಿದ್ದಾರೆ. ಹೀಗೆ ಸಾಮಾನ್ಯ ಕ್ರಿಕೆಟ್ ಅಂಕಿಅಂಶವನ್ನು ಹೊಂದಿರುವ ಉಮರ್ ಅಕ್ಮಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನಿಷೇಧ ಕೂಡ ಹೊಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications