ಒಂದೇ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಧೋನಿ - ತಮಿಳು ನಟ ವಿಜಯ್; ನಾಯಕಿ ಈ ಖ್ಯಾತ ನಟಿ: ವರದಿ

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಇಂದು ( ಜೂನ್ 22 ) ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿನಯದ ಮುಂದಿನ ಚಿತ್ರವಾದ 'ವಾರಿಸು' ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಕಂಡು ಖುಷಿಯಲ್ಲಿದ್ದ ದಳಪತಿ ವಿಜಯ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಸುದ್ದಿ ಬಂದಿದ್ದು ಅವರ ಖುಷಿಯನ್ನು ದುಪ್ಪಟ್ಟು ಮಾಡಿದೆ.
ಹೌದು, ತಮ್ಮ ನೆಚ್ಚಿನ ನಟ ದಳಪತಿ ವಿಜಯ್ ಹಾಗೂ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಒಂದೇ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ವಿಜಯ್ ಹಾಗೂ ಎಂಎಸ್ ಧೋನಿ ಅಭಿಮಾನಿಗಳು ಈ ಸುದ್ದಿ ಕೇಳಿ ಫುಲ್ ಖುಷ್ ಆಗಿದ್ದಾರೆ. ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಹಲವು ಸಿನಿಮಾ ಯೋಜನೆಗಳ ಸುದ್ದಿಗಳು ಹೊರಬೀಳುತ್ತಿದ್ದು, ವಿಜಯ್ ಅಭಿನಯಿಸಲಿರುವ 68ನೇ ಸಿನಿಮಾಗಾಗಿ ಎಂಎಸ್ ಧೋನಿ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಅಷ್ಟಕ್ಕೂ ವಿಜಯ್ ಸಿನಿಮಾದಲ್ಲಿ ಎಂಎಸ್ ಧೋನಿ ಅವರ ಪಾತ್ರವೇನು, ನಾಯಕಿ ಯಾರು ಹಾಗೂ ಈ ಸಿನಿಮಾದ ಕುರಿತಾಗಿ ಹರಿದಾಡುತ್ತಿರುವ ಇನ್ನಷ್ಟು ಸುದ್ದಿಗಳೇನು ಎಂಬುದರ ಕುರಿತ ಮಾಹಿತಿ ಮುಂದೆ ಇದೆ ಓದಿ.

ಧೋನಿ ಸಿನಿಮಾದಲ್ಲಿ ವಿಜಯ್ ನಾಯಕ
ಎಂಎಸ್ ಧೋನಿ ಹಾಗೂ ದಳಪತಿ ವಿಜಯ್ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ವಿಜಯ್ ನಾಯಕ ನಟನಾಗಿ ಕಾಣಿಸಿಕೊಂಡರೆ, ಎಂಎಸ್ ಧೋನಿ ಈ ಚಿತ್ರಕ್ಕಾಗಿ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿ ಇದೆ. ಹೌದು, ಎಂಎಸ್ ಧೋನಿ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭಿಸಬೇಕು ಎಂಬ ಯೋಜನೆಯಲ್ಲಿದ್ದು, ಮೊದಲ ಚಿತ್ರವನ್ನು ವಿಜಯ್ ಅವರಿಗೆ ನಿರ್ಮಿಸಲಿದ್ದಾರೆ ಎನ್ನಲಾಗುತ್ತಿದೆ.

ಮಾತುಕತೆ ಮುಗಿದಿದೆ ಎಂಬ ಸುದ್ದಿಯೂ ಇದೆ
ಎಂಎಸ್ ಧೋನಿ ಈಗಾಗಲೇ ವಿಜಯ್ ಅವರನ್ನು ಭೇಟಿಯಾಗಿ ತಾವು ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸುತ್ತಿದ್ದು, ಸಿನಿಮಾವೊಂದರಲ್ಲಿ ನೀವು ಅಭಿನಯಿಸಬೇಕು ಎಂದು ಮಾತುಕತೆಯನ್ನೂ ಮುಗಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನು ಈ ಹಿಂದೆ ಎಂ ಎಸ್ ಧೋನಿ ಮತ್ತು ವಿಜಯ್ ಪರಸ್ಪರ ಭೇಟಿ ಮಾಡಿದ್ದರು. ಆದರೆ ಈ ಭೇಟಿ ಹಿಂದಿನ ನಿಖರವಾದ ಕಾರಣ ಮಾತ್ರ ಬಹಿರಂಗವಾಗಿರಲಿಲ್ಲ. ಸದ್ಯ ಆ ಭೇಟಿಗೂ ಮತ್ತು ಈ ಸುದ್ದಿಗೂ ಹೋಲಿಕೆಯನ್ನು ಮಾಡುತ್ತಿರುವ ಅಭಿಮಾನಿಗಳು ಎಂಎಸ್ ಧೋನಿ ನಿರ್ಮಿಸಲಿರುವ ಚಿತ್ರದಲ್ಲಿ ವಿಜಯ್ ಅಭಿನಯಿಸುವುದು ಖಚಿತ ಎನ್ನುತ್ತಿದ್ದಾರೆ.

ನಾಯಕಿ ಯಾರು?
ಧೋನಿ ನಿರ್ಮಾಣ ಮತ್ತು ವಿಜಯ್ ನಟಿಸಲಿರುವ ಚಿತ್ರದಲ್ಲಿ ನಾಯಕಿ ಯಾರಿರಬಹುದು ಎಂಬ ಚರ್ಚೆಯೂ ಕೂಡ ಆರಂಭವಾಗಿದ್ದು, ಮೂಲಗಳ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ನಯನತಾರಾ ನಾಯಕಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications