Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SMAT: ರಾಜಸ್ಥಾನ್ ಸೋಲಿಸಿ ಫೈನಲ್‌ ಪ್ರವೇಶಿಸಿದ ತಮಿಳುನಾಡು

Tamil Nadu vs Rajasthan, 1st Semi-Final: Tamil Nadu won by 7 wickets

ಅಹ್ಮದಾಬಾದ್: ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 29) ಮುಕ್ತಾಯಗೊಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ಸೋಲಿಸಿರುವ ತಮಿಳುನಾಡು ತಂಡ ಫೈನಲ್‌ಗೆ ಪ್ರವೇಶಿಸಿದೆ. ಅರುಣ್ ಕಾರ್ತಿಕ್ ಸ್ಫೋಟಕ ಅರ್ಧ ಶತಕದ ನೆರವಿನಿಂದ ತಮಿಳುನಾಡು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ, ಆದಿತ್ಯ ಗರ್ವಾಲ್ 29, ಅಶೋಕ್ ಮೆನಾರಿಯಾ 51, ಅರ್ಜಿತ್ ಗುಪ್ತಾ 45, ರಾಜೇಶ್ ಬಿಷ್ಣೋಯ್ 12, ಮಹಿಪಾಲ್ ಲಾಮ್ರರ್ 3 ರನ್ ಕೊಡುಗೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 154 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ತಮಿಳುನಾಡಿನಿಂದ ಹರಿ ನಿಶಾಂತ್ 4, ಎನ್‌ ಜಗದೀಶನ್ 28, ಅರುಣ್ ಕಾರ್ತಿಕ್ ಅಜೇಯ 89 (54 ಎಸೆತ), ದಿನೇಶ್ ಕಾರ್ತಿಕ್ ಅಜೇಯ 26 ರನ್‌ ಸೇರಿಸಿದರು. ತಮಿಳುನಾಡು ತಂಡ 18.4 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿತು. ಫೈನಲ್‌ ಪಂದ್ಯ ಜನವರಿ 31ರಂದು ನಡೆಯಲಿದೆ.

ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿನ ಸಾಯ್ ಕಿಶೋರ್ 2, ಸೋನು ಯಾದವ್ 1, ಬಾಬ ಅಪರಾಜಿತ್ 1, ಮುರುಗನ್ ಅಶ್ವಿನ್ 1, ಎಂ ಮೊಹಮ್ಮದ್ 4 ವಿಕೆಟ್‌ (24 ರನ್‌)ನಿಂದ ಗಮನ ಸೆಳೆದರೆ, ತಮಿಳುನಾಡು ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ತನ್ವೀರ್ ಉಲ್ ಹಕ್ 1, ಅನಿಕೇತ್ ಚೌಧರಿ 1, ರವಿ ಬಿಷ್ಣೋಯ್ 1 ವಿಕೆಟ್‌ ಪಡೆದರು.

Story first published: Friday, January 29, 2021, 16:10 [IST]
Other articles published on Jan 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+