ಸಂಘಟಿತ ಆಟದ ಪ್ರದರ್ಶನ ನೀಡಿದ ತಮಿಳು ತಲೈವಾಸ್ 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 77ನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದರು. ಬುಧವಾರ ನಡೆದ ಪಂದ್ಯದಲ್ಲಿ ತಲೈವಾಸ್ 40-26 ರಿಂದ ಜಯ ಸಾಧಿಸಿತು. ಈ ಗೆಲುವಿನ ಮೂಲಕ ತಮಿಳು ತಲೈವಾಸ್ ಆಡಿದ 13 ಪಂದ್ಯಗಳಲ್ಲಿ 5 ಜಯ, 7 ಸೋಲು, 1 ಡ್ರಾ ಸಾಧಿಸಿದ್ದು, 33 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿದೆ.
ಈ ಪಂದ್ಯದ ಮೊದಲಾವಧಿಯಲ್ಲಿ ಯುಪಿ ಯೋಧಾಸ್ ಅಮೋಘ ಪ್ರದರ್ಶನ ನೀಡಿದರು. ಈ ತಂಡ ಮೊದಲ 20 ನಿಮಿಷದಲ್ಲಿ 17-12 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಯುಪಿ ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ತಲಾ ಏಳು ಅಂಕ ಕಲೆ ಹಾಕಿ ಅಬ್ಬರಿಸಿತು. ಈ ವೇಳೆ ತಮಿಳು ತಂಡದ ಟ್ಯಾಕಲ್ ಕೊಂಚ ಮಂಕಾಗಿತ್ತು. ಇನ್ನು ಈ ವೇಳೆ ಒಂದು ಬಾರಿ ತಮಿಳು ತಲೈವಾಸ್ ಆಲ್‌ಔಟ್ ಆಯಿತು.

ಎರಡನೇ ಅವಧಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ ತಮಿಳು ತಲೈವಾಸ್ ಅಮೋಘ ಪ್ರದರ್ಶನ ನೀಡಿದರು. ಡಕ್‌ಔಟ್ ನಲ್ಲಿ ಹಾಕಿಕೊಂಡ ರಣ ತಂತ್ರದಿಂದ ಆಡಿದ ತಲೈವಾಸ್ ಅಬ್ಬರಿಸಿದರು. ಈ ವೇಳೆ ಯುಪಿ ತಂಡವನ್ನು ತಲೈವಾಸ್ ಮೂರು ಬಾರಿ ಆಲೌಟ್ ಆಯಿತು. ಇನ್ನು ರೈಡಿಂಗ್‌ನಲ್ಲಿ 12 ಅಂಕಗಳನ್ನು ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ 7 ಅಂಕ ಕಲೆ ಹಾಕಿದರು.
ವಿಜೇತ ತಂಡದ ಪರ ಮೊಯಿನ್ ಶಾಫಾಘಿ 8, ನರೇಂದ್ರ ಕಂಡಲ 6 ಅಂಕ ಕಲೆ ಹಾಕಿದರು. ಯುಪಿ ಪರ ಗಗನ್ ಗೌಡ 8 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಎಲ್ಲರ ಗಮನ ಸೆಳೆದರು.

ಇದಕ್ಕೂ ಮೊದಲು ನಡೆದ ದಬಾಂಗ್ ದೆಹಲಿ ಕೆಸಿ ಹಾಗೂ ಪಾಟ್ನಾ ಪೈರೇಟ್ಸ್ ತಂಡ ಅಂಕಗಳನ್ನು ಹಂಚಿಕೊಳ್ಳುವಲ್ಲಿ ಸಫಲವಾದವು. 78ನೇ ಪಂದ್ಯದಲ್ಲಿ ದಬಾಂಗ್ 39-39 ಅಂಕಗಳಿಂದ ಪಾಟ್ನಾ ವಿರುದ್ಧ ಟೈ ಸಾಧಿಸಿತು. ಈ ಪಂದ್ಯದಲ್ಲಿ ಅಂಕಗಳನ್ನು ಕಲೆ ಹಾಕಿದ ದಬಾಂಗ್ 43 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಪಾಟ್ನಾ ಪೈರೇಟ್ಸ್ ಆಡಿದ 13 ಪಂದ್ಯಗಳಲ್ಲಿ 7 ಜಯ, 5 ಸೋಲು, 1 ಡ್ರಾ ಸಾಧಿಸಿದ್ದು 42 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
ಪಾಟ್ನಾ ಮೊದಲಾವಧಿಯಲ್ಲಿ 20-10 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿಯಲ್ಲಿ ಮಾಜಿ ಚಾಂಪಿಯನ್ 11 ಅಂಕಗಳನ್ನು, 6 ಅಂಕಗಳನ್ನು ಟ್ಯಾಕಲ್ ಕಲೆ ಹಾಕಿತು. ಈ ಬಾರಿ ದಬಾಂಗ್ ತಂಡವನ್ನು ಒಂದು ಬಾರಿ ಪಾಟ್ನಾ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ದಬಾಂಗ್ ತಂಡ ಆರ್ಭಟ ನಡೆಸಿತು. ಈ ವೇಳೆ 29-19 ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಪಾಟ್ನಾ 2 ಬಾರಿ ಆಲೌಟ್ ಆದರೆ, ದಬಾಂಗ್ 1 ಬಾರಿ ಆಲೌಟ್ ಆದರು.