ಲಾರ್ಡ್ಸ್‌ನಲ್ಲಿ ಕೊನೆಯ ಪಂದ್ಯ: ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಬಳಿಕ ಸ್ಟಾರ್ ಬ್ಯಾಟರ್ ಬ್ಯೂಮಾಂಟ್ ನಿವೃತ್ತಿ
ಇಂಗ್ಲೆಂಡ್ ಸದ್ಯ ಭಾರತದ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಇನ್ನೊಂದು ಕಡೆ ಆತಿಥೇಯ ಮಹಿಳಾ ತಂಡ ಭಾರತದ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗುತ್ತಿದೆ. ಈ ವೇಳೆ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಟ್ಯಾಮಿ ಬ್ಯೂಮಾಂಟ್ ಅವರಿಗೆ ಈ ಪಂದ್ಯ ವಿಶೇಷವಾಗಿದೆ. ಭಾರತದ ವಿರುದ್ಧದ ಈ ಟೆಸ್ಟ್ ಪಂದ್ಯವು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು 35 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ಘೋಷಿಸಿದ್ದಾರೆ.
ಸುಮಾರು 17 ವರ್ಷಗಳ ಕಾಲ ಇಂಗ್ಲೆಂಡ್ ಪರ ಆಡಿದ ಅನುಭವ ಹೊಂದಿರುವ ಬ್ಯೂಮಾಂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ. ಇವರು 2009ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಪರ ಪದಾರ್ಪಣೆ ಮಾಡಿದರು. ಇದುವರೆಗೆ ಇವರು ಮೂರು ಮಾದರಿಯಲ್ಲಿ 260 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಇವರು ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಟ್ಯಾಮಿ ಬ್ಯೂಮಾಂಟ್ ಏಕದಿನ ಕ್ರಿಕೆಟ್‌ನಲ್ಲಿ 12 ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಇವರು 4,500 ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,975 ರನ್ ಮತ್ತು 11 ಟೆಸ್ಟ್‌ಗಳಲ್ಲಿ 612 ರನ್‌ಗಳನ್ನು ಗಳಿಸಿದ್ದಾರೆ.
ಚಿಕ್ಕ ಹುಡುಗಿಯಾಗಿದ್ದಾಗ ಬ್ಯಾಟ್ ಹಿಡಿದಾಗ ಇಂಗ್ಲೆಂಡ್ ಪರ ಆಡುವುದು ದೊಡ್ಡ ಕನಸಾಗಿತ್ತು. ದೇಶವನ್ನು ಪ್ರತಿನಿಧಿಸಿರುವುದು ದೊಡ್ಡ ಗೌರವ. ಯುವ ಆಟಗಾರ್ತಿಯರ ಅವಕಾಶಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಟ್ಯಾಮಿ ಬ್ಯೂಮಾಂಟ್ ತಿಳಿಸಿದ್ದಾರೆ. ಲಾರ್ಡ್ಸ್ ಟೆಸ್ಟ್ ಅನ್ನು ತಮ್ಮ ವೃತ್ತಿಜೀವನಕ್ಕೆ ಪರಿಪೂರ್ಣ ವಿದಾಯ ಎಂದು ಬ್ಯೂಮಾಂಟ್ ಹೇಳಿದ್ದಾರೆ. ಅಲ್ಲದೆ ಇವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಆಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಟ್ಯಾಮಿ ಬ್ಯೂಮಾಂಟ್ ಸಾಧನೆ
ಇಂಗ್ಲೆಂಡ್ ತಂಡ ಕಂಡಿರುವ ಸ್ಟಾರ್ ಆಟಗಾರ್ತಿಯರ ಸಾಲಿನಲ್ಲಿ ಟ್ಯಾಮಿ ಬ್ಯೂಮಾಂಟ್ ಅಗ್ರಸ್ಥಾನ. ಇವರ ನಾಯಕತ್ವದಲ್ಲಿ ಇಂಗ್ಲೆಂಡ್ 2017ರಲ್ಲಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ಈ ಟೂರ್ನಿಯಲ್ಲಿ 410 ರನ್ ಸಿಡಿಸಿ ಅಬ್ಬರಿಸಿದ್ದರು. ಅಲ್ಲದೆ ಸರಣಿ ಶ್ರೇಷ್ಠ ಆಟಗಾರ್ತಿ ಎಂಬ ಪ್ರಶಸ್ತಿ ಪಡೆದಿದ್ದರು. ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಇಬ್ಬರು ಇಂಗ್ಲೆಂಡ್ ಮಹಿಳಾ ಆಟಗಾರ್ತಿಯರಲ್ಲಿ ಟ್ಯಾಮಿ ಬ್ಯೂಮಾಂಟ್ ಒಬ್ಬರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications