For Quick Alerts
ALLOW NOTIFICATIONS  
For Daily Alerts
 

R Ashwin Replacement: ಶೀಘ್ರದಲ್ಲೇ ಅಶ್ವಿನ್‌ ಸ್ಥಾನ ತುಂಬಲಿದ್ದಾರೆ ಯುವ ಸ್ಪಿನ್ನರ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಈ ವೇಳೆ ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಭಾರೀ ನಿರಾಸೆ ಕಾದಿತ್ತು. ಟೀಮ್‌ ಇಂಡಿಯಾದ ಅನುಭವಿ ಸ್ಪಿನ್ ಬೌಲರ್ ಅಶ್ವಿನ್‌ ದಿಢೀರ್ ನಿವೃತ್ತಿ ಘೋಷಿಸಿದರು. ಇವರ ವಿದಾಯದ ಸುದ್ದಿ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿತ್ತು. ಆದರೆ ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಎದ್ದಿತ್ತು.

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಈ ಬಾರಿ ಐದು ಪಂದ್ಯಗಳನ್ನು ಆಡಲಾಗುತ್ತಿದೆ. ಈ ವೇಳೆ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಮೂರನೇ ಪಂದ್ಯ ಡ್ರಾ ಆಗಿತ್ತು. ಹೀಗಾಗಿ ನಾಲ್ಕನೇ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಇಬ್ಬರು ಸ್ಪಿನ್ ಬೌಲರ್‌ನೊಂದಿಗೆ ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ. ಬೆಂಚ್ ಮೇಲೆ ಕಾಯುತ್ತಿದ್ದ ವಾಷಿಂಗ್ಟನ್‌ ಸುಂದರ್‌ ಸಹ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಆಡಬೇಕಿದ್ದು ಅಶ್ವಿನ್‌ ರಿಪ್ಲೇಸ್ ಮೇಂಟ್ ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.

Tanush Kotian Likely to Replace R Ashwin in Border-Gavaskar Trophy

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಖಂಡೀತವಾಗಿಯೂ ಅಶ್ವಿನ್‌ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಇದೆಲ್ಲದರ ನಡುವೆ ಅಶ್ವಿನ್ ಬದಲಿ ಆಟಗಾರನನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಆಟಗಾರ ಬೇರೆ ಯಾರೂ ಅಲ್ಲ ತನುಷ್ ಕೋಟ್ಯಾನ್.

ಟೀಮ್ ಇಂಡಿಯಾಕ್ಕೆ ಈಗ ಯುವ ಸ್ಪಿನ್ ಬೌಲರ್ ಒಬ್ಬ ಎಂಟ್ರಿ ನೀಡುವ ಕಾಲ ಬಂದಿದೆ. ಇವರು ಬಾರ್ಡರ್‌ ಗವಾಸ್ಕರ್‌ ಸರಣಿಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಮುಂಬೈ ತಂಡದ ಆಲ್‌ರೌಂಡರ್‌ ತನುಷ್ ಕೋಟ್ಯಾನ್‌ ಅವರು ಟೀಮ್ ಇಂಡಿಯಾವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎದು ವರದಿಗಳು ತಿಳಿಸಿವೆ. ಕೋಟ್ಯಾನ್‌ಗೆ ಮೊದಲ ಬಾರಿಗೆ ಟೀಮ್ ಇಂಡಿಯಾದಿಂದ ಕರೆ ಬರುವ ಸಾಧ್ಯತೆ ಇದೆ. ಇವರು ಮಂಗಳವಾರ ಆಸ್ಟ್ರೇಲಿಯಾ ಫ್ಲೈಟ್ ಹತ್ತುವ ಸಾಧ್ಯತೆ ಇದೆ. ಇವರು ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಭಾಗವಾಗಿದ್ದರು.


ವೃತ್ತಿಜೀವನ ಹೇಗಿತ್ತು?

ಕೋಟ್ಯಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 33 ಪಂದ್ಯಗಳಲ್ಲಿ 101 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇವರು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್‌. ಅಶ್ವಿನ್‌ ಅವರ ಸ್ಥಾನ ತುಂಬ ಬಲ್ಲ ಸೂಕ್ತ ಆಟಗಾರ ತನುಷ್ ಕೋಟ್ಯಾನ್‌ ಎಂದು ಹೇಳಲಾಗುತ್ತಿದೆ.

Tanush Kotian Likely to Replace R Ashwin in Border-Gavaskar Trophy

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಬ್ರಿಸ್ಬೇನ್‌ನಲ್ಲಿ ಡಿಸೆಂಬರ್‌ 26 ರಿಂದ ಆರಂಭವಾಗಲಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಉಭಯ ತಂಡಗಳದ್ದಾಗಿದೆ. ಸರಣಿಯಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Story first published: Monday, December 23, 2024, 20:40 [IST]
Other articles published on Dec 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+