
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ಚಿತ್ತಗಾಂಗ್‌ನಲ್ಲಿ ನಡೆಯಲಿದೆ. ಬ್ಯಾಟಿಂಗ್‌ಗೆ ಸ್ವರ್ಗವಾಗಿರುವ ಈ ಕ್ರೀಡಾಂಗಣದಲ್ಲಿ ಭಾರತೀಯ ಬ್ಯಾಟಿಂಗ್ ಪಡೆ ಲಾಭ ಪಡೆಯುವ ವಿಶ್ವಾಸದಲ್ಲಿದೆ. ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತ ಗಳಿಸಿ ದೊಡ್ದ ಅಂತರದ ಗೆಲುವು ಸಾಧಿಸಿತ್ತು. ಹಾಗಾಗಿ ಟೆಸ್ಟ್ ಸರಣಿಯಲ್ಲಿಯೂ ಭಾರತದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಕುತೂಹಲ ಮೂಡಿಸಿದೆ. ಈ ಬಗ್ಗೆ ಬಾಂಗ್ಲಾದೇಶದ ವೇಗದ ಬೌಲರ್ ಟಸ್ಕಿನ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ತಗಾಂಗ್‌ನಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಯಶಸ್ಸು ಸಾಧಿಸಲಬೇಕಾದರೆ ತಾಳ್ಮೆಯನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು ನಾವು ಬಲವಂತವಾಗಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆ ಅದರಿಂದ ನಮಗೆ ಲಾಭವಾಗುವುದಿಲ್ಲ. ನಾವು ಆಗ ರನ್‌ಗಳನ್ನು ಬಿಟ್ಟುಕೊಡುತ್ತೇವೆ. ಅವರು ತಾಳ್ಮೆಯನ್ನು ಕಳೆದುಕೊಳ್ಳುವಂತೆ ಮಾಡಬೇಕಿದೆ. ಅವರು ತಪ್ಪುಗಳನ್ನು ಮಾಡುವವರೆಗೆ ಕಾಯಬೇಕು ಎಂದಿದ್ದಾರೆ ಟಸ್ಕಿನ್ ಅಹ್ಮದ್.
ಇನ್ನು ಇದೇ ಸಂದರ್ಭದಲ್ಲಿ ಟಸ್ಕಿನ್ ಮೊದಲ ಟಸ್ಟ್ ಪಂದ್ಯದಲ್ಲಿ ಆಡಲು ಲಭ್ಯವಿದ್ದಾರೆಯೇ ಎಂಬ ಬಗ್ಗೆ ಖಚಿತಪಡಿಸಿಲ್ಲ. ಗಾಯದಿಂದ ಇನ್ನು ಕೂಡ ಚೇತರಿಸಿಕೊಳ್ಳುತ್ತಿದ್ದು ಏಕದಿನ ಸರಣಿಯಿಂದಲೂ ಹೊರಗುಳಿದುದ್ದರು. ಕೆಲಸದ ಒತ್ತಡದ ಬಗ್ಗೆ ಮ್ಯಾನೇಜ್‌ಮೆಂಟ್ ಕಳವಳಗೊಂಡಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆನು ಕೂಡ ಪ್ರಯತ್ನ ಪಡುತ್ತಿದ್ದೇನೆ. ಫಿಟ್‌ನೆಸ್ ಹಾಗೂ ಬೌಲಿಂಗ್ ಬಗ್ಗೆ ಹೆಚ್ಚು ನಿಗಾವಹಿಸುತ್ತಿದ್ದೇನೆ" ಎಂದಿದ್ದಾರೆ ಟಸ್ಕಿನ್ ಅಹ್ಮದ್.
ಇನ್ನು ಬಾಂಗ್ಲಾದೇಶ ತಂಡ ಏಕದಿನ ಮಾದರಿಯಕಲ್ಲಿ ಮಿಂಚುತ್ತಿದ್ದರೂ ಟೆಸ್ಟ್ ಮಾದರಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ವರ್ಷದಲ್ಲಿ ಆಡಿದ 8 ಪಂದ್ಯಗಳ ಪೈಕಿ ಬಾಂಗ್ಲಾದೇಶ ಒಂದು ಗೆಲವನ್ನು ಮಾತ್ರವೇ ಸಾಧಸಿದೆ. ಒಂದು ಡ್ರಾ ಗೊಂಡಿದ್ದರೆ ಉಳಿದ ಆರು ಪಂದ್ಯಗಳಲ್ಲಿ ಸೋತಿದೆ. ಇನ್ನು ಬಾಂಗ್ಲಾದೇಶ ಟೆಸ್ಟ್ ಮಾದರಿಯಲ್ಲಿ ಭಾರತದ ವಿರುದ್ಧ ಈವರೆಗೂ ಗೆಲುವು ಸಾಧಿಸಿಲ್ಲ.
"ಚಿತ್ತಗಾಂಗ್ ಬಾಂಗ್ಲಾದೇಶದಲ್ಲಿ ಬ್ಯಾಟಿಂಗ್‌ಗೆ ಸ್ವರ್ಗವೆನಿಸಿರುವ ತಾಣವಾಗಿದೆ. ಇಲ್ಲಿ ವೇಗದ ಬೌಲರ್‌ಗಳಿಗೆ ಬಹಳ ಕಠಿಣವಾಗಿರಲಿದೆ. ನಾವು ಪ್ರಗತಿ ಕಾಣುತ್ತಿದ್ದೇವೆ ಆದರೆ ನಮಗೆ ಪೂರಕವಾದ ಪಿಚ್ ದೊರೆತಯುತ್ತಿಲ್ಲ. ಇದು ಸಾಮಾನ್ಯವಾಇ ಬ್ಯಾಟಿಂಗ್‌ಗೆ ಪೂರಕವಾದ ಪಿಚ್. ಟೆಸ್ಟ್ ಕ್ರಿಕೆಟ್ ಯಾವಾಗಲೂ ಸವಾಲಾಗಿದ್ದು ಪಂದ್ಯವನ್ನು ಐದು ದಿನಗಳವರೆಗೆ ಕೊಂಡೊಯ್ಯಬೇಕಿದೆ. ಇಲ್ಲಿಯು ಕೂಡ ನಾವು ಅಂತಿಮ ದಿನದವರೆಗೂ ಆಡಬೇಕಿದೆ" ಎಂದಿದ್ದಾರೆ ಬಾಂಗ್ಲಾದೇಶದ ಹಿರಿಯ ವೇಗಿ ಟಸ್ಕಿನ್ ಅಹ್ಮದ್.