Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Playoffs: ಬೆಂಗಳೂರಿನ ಕೈ ತಪ್ಪಿದ ಫೈನಲ್‌ ಪಂದ್ಯ: ಅಹಮದಾಬಾದ್‌ಗೆ ಶಿಫ್ಟ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಲೀಗ್‌ ಹಂತದ ಪಂದ್ಯಗಳು ನಡೆಯುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಲೀಗ್‌ ಹಂತದ ಪಂದ್ಯಗಳು ಮುಗಿಯಲಿದ್ದು, ಪ್ಲೇ ಆಫ್‌ ನತ್ತ ಎಲ್ಲರ ಚಿತ್ತ ನೆಟ್ಟಿವೆ. ಈ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಈ ಬಾರಿಯ ಐಪಿಎಲ್‌ ಫೈನಲ್‌ಗೆ ಆತಿಥ್ಯ ನೀಡುವ ಕನಸು ಕಂಡಿತ್ತು. ಆದರೆ ಈ ಕನಸಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ ಕೊಳ್ಳಿ ಇಟ್ಟಿದೆ. ಅಂದಹಾಗೆ ಐಪಿಎಲ್‌ ಫೈನಲ್‌, ಬೆಂಗಳೂರಿನಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನಕ್ಕೆ ಶಿಫ್ಟ್‌ ಆಗಲು ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಬಿಸಿಸಿಐ ಬುಧವಾರ ಪ್ಲೇ ಆಫ್‌ ವೇಳಾಪಟ್ಟಿಯನ್ನು ಪ್ರಕಟಿಸಿದೆ. 70 ಲೀಗ್‌ ಹಂತದ ಪಂದ್ಯಗಳಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿವೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿದ್ದು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡ ಎರಡನೇ ಕ್ವಾಲಿಫೈಯರ್, ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ ಆಡಲಿದೆ. ಎರಡನೇ ಕ್ವಾಲಿಫೈಯರ್ ಹಾಗೂ ಮೊದಲ ಕ್ವಾಲಿಫೈಯರ್‌ನಲ್ಲಿ ಜಯ ಸಾಧಿಸಿದ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

IPL 2026 Playoffs

ಬಿಸಿಸಿಐ ಈಗ ಪ್ಲೇ ಆಫ್‌ ದಿನಾಂಕಗಳನ್ನು ಪ್ರಕಟಿಸಿದೆ. ಮೇ 26 ರಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ. ನ್ಯೂ ಚಂಡೀಗಡ್‌ ತಂಡ ಮೇ 27 ರಂದು ಎಲಿಮಿನೇಟರ್‌ ಪಂದ್ಯಕ್ಕೆ ಆತಿಥ್ಯ ನೀಡಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 29 ರಂದು ನ್ಯೂ ಚಂಡೀಗಡ್‌ ಮೈದಾನದಲ್ಲಿ ನಡೆಯಲಿದೆ. ಮೇ 31 ರಂದು ಐಪಿಎಲ್‌ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಸಂಪ್ರದಾಯ ಮುರಿದ ಬಿಸಿಸಿಐ

ಬಿಸಿಸಿಐ ಈ ಬಾರಿಯ ಫೈನಲ್‌ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲಿದೆ. ಈ ಮೂಲಕ ಬಿಸಿಸಿಐ ತಾನೇ ಹಾಕಿಕೊಂಡಿದ್ದ ಸಂಪ್ರದಾಯವನ್ನು ಮುರಿದಿದೆ. ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡದ ತವರು ಮೈದಾನದಲ್ಲಿ ಉದ್ಘಾಟನಾ ಮತ್ತು ಐಪಿಎಲ್‌ ಫೈನಲ್‌ ಪಂದ್ಯಗಳು ನಡೆಯಲಿದ್ದವು. ಅದರಂತೆ 18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿದ್ದ ಬೆಂಗಳೂರು ತಂಡ ತನ್ನ ತವರು ಮೈದಾನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಉದ್ಘಾಟನಾ ಪಂದ್ಯವನ್ನು ಆಡಿತ್ತು. ಆದರೆ ಫೈನಲ್‌ ಪಂದ್ಯ ಬೆಂಗಳೂರಿನ ಕೈ ತಪ್ಪಿದೆ.

ಏತಕ್ಕೆ ಶಿಫ್ಟ್ ಆಗಿದೆ?

ಬೆಂಗಳೂರಿನ ಐಪಿಎಲ್‌ ಫೈನಲ್‌ ಪಂದ್ಯ ಶಿಫ್ಟ್ ಆಗಲು ಪ್ರಮುಖ ಕಾರಣ, ಶಾಸಕರಿಗೆ ನೀಡುವ ಉಚಿತ ಪಾಸ್‌ಗಳು ಎಮದು ತಿಳಿದು ಬಂದಿದೆ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, ಪ್ರತಿ ಪಂದ್ಯಕ್ಕೆ ಕನಿಷ್ಠ 5 ಟಿಕೆಟ್‌ಗಳನ್ನು ಶಾಸಕರಿಗೆ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಜನಪ್ರತಿನಿಧಿಗಳನ್ನು ಕ್ರೀಡಾಂಗಣದಲ್ಲಿ ವಿಐಪಿಗಳಂತೆ ನೋಡಬೇಕು ಎಂದು ತಿಳಿಸಿದ್ದರು. ಶಾಸಕರ ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿ ಶಾಸಕರಿಗೆ 3 ಟಿಕೆಟ್‌ಗಳನ್ನು ನೀಡುವ ಮೂಲಕ ರಾಜಿ ಮಾಡಿಕೊಂಡಿದ್ದರು.

Story first published: Wednesday, May 6, 2026, 13:04 [IST]
Other articles published on May 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+