ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂರನೇ ಬಾರಿಗೆ ನ್ಯೂಜಿಲಂಡ್‌ನ ಅತ್ಯುನ್ನತ ಕ್ರಿಕೆಟ್ ಪ್ರಶಸ್ತಿ ಪಡೆದ ರಾಸ್ ಟೇಯ್ಲರ್

Taylor Bags Richard Hadlee Medal For The Third Time In His Career

ನ್ಯೂಜಿಲೆಂಡ್‌ನ ಅನುಭವಿ ಕ್ರಿಕೆಟಿಗ ರಾಸ್ ಟೇಯ್ಲರ್ ನ್ಯೂಜಿಲೆಂಡ್‌ನ ಅತ್ಯುನ್ನತ ಕ್ರಿಕೆಟ್ ಪ್ರಶಸ್ತಿಯಾದ ರಿಚರ್ಡ್ ಹ್ಯಾಡ್ಲೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ರಾಸ್ ಟೇಯ್ಕರ್ ಮೂರನೇ ಬಾರಿಗೆ ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದಾರೆ.

ಕೊರೊನಾ ವೈರಸ್ ಕಾರಣದಿಂದಾಗಿ ನ್ಯೂಜಿಲೆಂಡ್ ಕ್ರಿಕೆಟ್ ವಾರ್ಷಿಕ ಪ್ರಶಸ್ತಿ ಸಮಾರಂಭವನ್ನು ಆನ್‌ಲೈನ್ ನಲ್ಲಿ ಆಯೋಜಿಸಿತ್ತು. ಇದರ ಕೊನೆಯ ದಿನವಾದ ಇಂದು (ಮೇ1) ಈ ಪ್ರಶಸ್ತಿಯನ್ನು ರಾಸ್ ಟೇಯ್ಲರ್ ಮುಡಿಗೇರಿಸಿಕೊಂಡಿದ್ದಾರೆ. ರಾಸ್ ಟೇಯ್ಲರ್ ಜೊತೆಗೆ ಕೀವಿಸ್ ವೇಗಿ ಟಿಮ್ ಸೌಥಿ ವಾರ್ಷಿಕ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕೊರೊನಾ ವೈರಸ್‌ಗೆ ತುತ್ತಾದ ಕತಾರ್ ವಿಶ್ವಕಪ್ ಫುಟ್ಬಾಲ್ ರಾಯಭಾರಿಕೊರೊನಾ ವೈರಸ್‌ಗೆ ತುತ್ತಾದ ಕತಾರ್ ವಿಶ್ವಕಪ್ ಫುಟ್ಬಾಲ್ ರಾಯಭಾರಿ

ಈ ಹಿಂದಿ‌ನ ಎರಡು ವಿಶ್ವಕಪ್ ಗಳಲ್ಲಿ ನ್ಯೂಜಿಲೆಂಡ್ ತಂಡ ಫೈನಲ್‌ ಪ್ರವೇಶ ಮಾಡಿತ್ತು. ಇದರ ಪ್ರಮುಖ ಆಟಗಾರನಾಗಿ ಟೇಯ್ಲರ್ ಮಿಂಚಿದ್ದರು. ಈ ಸಂದರ್ಭದಲ್ಲಿ ಇನ್ನೂ ಒಂದು ವಿಶ್ವಕಪ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ರಾಸ್ ಟೇಯ್ಲರ್. 2023ರಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಆಶಯವನ್ನು ತಿಳಿಸಿದ್ದಾರೆ.

ಕಳೆದ ಕ್ರಿಕೆಟ್ ಋತುವಿನಲ್ಲಿ ರಾಸ್ ಟೇಯ್ಲರ್ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಹೆಸರಿನಲ್ಲಿದ್ದ ಅತಿ ಹೆಚ್ಚು ಟೆಸ್ಟ್ ಸ್ಕೋರರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲೂ ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಟೇಯ್ಲರ್ ಹೆಸರಿನಲ್ಲಿದೆ.

ಕ್ರಿಕೆಟರ್ ಮನೋಜ್ ತಿವಾರಿಗೆ ಒಲಿಂಪಿಕ್ಸ್‌ ಶೂಟರ್ ಆಗುವಾಸೆ!ಕ್ರಿಕೆಟರ್ ಮನೋಜ್ ತಿವಾರಿಗೆ ಒಲಿಂಪಿಕ್ಸ್‌ ಶೂಟರ್ ಆಗುವಾಸೆ!

ಇನ್ನು ಟಿ20 ಕ್ರಿಕೆಟ್‌ನಲ್ಲಿ ರಾಸ್ ಟೇಯ್ಲರ್ 100 ಪಂದ್ಯಗಳನ್ನಾಡಿದ ಮೊದಲ ಕೀವಿಸ್ ಆಟಗಾರ ಎಂಬ ಸಾಧನೆಯನ್ನೂ ರಾಸ್ ಟೇಯ್ಲರ್ ಭಾರತದ ವಿರುದ್ಧದ ಸರಣಿಯಲ್ಲಿ ಮಾಡಿದ್ದರು.

Story first published: Friday, May 1, 2020, 13:07 [IST]
Other articles published on May 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X