Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Tazmin Brits: ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾದ ತಜ್ಮಿನ್

ಭಾರತದಲ್ಲಿ ಈಗ ಏಕದಿನ ಮಹಿಳಾ ವಿಶ್ವಕಪ್ ನಡೆಯುತ್ತಿದೆ. ಇಂದೋರನಲ್ಲಿ ನಡೆದ ಪಂದ್ಯದಲ್ಲಿ
ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್ ತಂಡ ನೀಡಿದ್ದ 232 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದರು.

ತಜ್ಮಿನ್ ಬ್ರಿಟ್ಸ್ 87 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಇವರು ಅಂತಿಮವಾಗಿ 89 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 101 ರನ್ ಬಾರಿಸಿ ಔಟ್ ಆದರು. ಇದು ತಜ್ಮಿನ್ ಬ್ರಿಟ್ಸ್ ಅವರ ಪ್ರಸಕ್ತ ವರ್ಷದ ಐದನೇ ಶತಕವಾಗಿದೆ. ಒಂದೇ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಸ್ಮೃತಿ ಮಂಧನಾ ಅವರ ದಾಖಲೆಯನ್ನು ಅಳಿಸಿ ಹಾಕಿದರು.

Tazmin Brits Shatters ODI Records with 5th Ton of 2025 South Africa Beats New Zealand

ಸ್ಮೃತಿ ಮಂಧನಾ ಸಹ ಈ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಈಗಾಗಲೇ 4 ಶತಕಗಳನ್ನು ಸಿಡಿಸಿದ್ದಾರೆ. ಸ್ಮೃತಿ 2024ರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ 4 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ತಜ್ಮಿನ್ ಬ್ರಿಟ್ಸ್ ಈ ವರ್ಷ ಐದು ಶತಕಗಳನ್ನು ಗಳಿಸುವ ಮೂಲಕ ಅವರ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ತಜ್ಮಿನ್ ಬ್ರಿಟ್ಸ್ ಬಾರಿಸಿದ 4ನೇ ಶತಕವಾಗಿದೆ.

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಏಕದಿನ ಶತಕಗಳು

5 ತಜ್ಮಿನ್ ಬ್ರಿಟ್ಸ್ (2025)
4 ಸ್ಮೃತಿ ಮಂಧಾನ (2024)
4 ಸ್ಮೃತಿ ಮಂಧಾನ (2025)

ತಜ್ಮಿನ್ ಬ್ರಿಟ್ಸ್ ಮತ್ತೊಂದು ವಿಶ್ವ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಇನಿಂಗ್ಸ್ ಆಧಾರದ ಮೇಲೆ ಅತಿ ವೇಗವಾಗಿ 7 ಶತಕಗಳನ್ನು ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆಯನ್ನು ಆಸ್ಟ್ರೇಲಿಯಾದ ದಂತಕಥೆ ಬ್ಯಾಟ್ಸ್‌ಮನ್ ಮೆಗ್ ಲ್ಯಾನಿಂಗ್ ಹೊಂದಿದ್ದರು. ಲ್ಯಾನಿಂಗ್ 44 ಏಕದಿನ ಇನ್ನಿಂಗ್ಸ್‌ಗಳಲ್ಲಿ ಏಳು ಶತಕ ಬಾರಿಸಿದ್ದರು.

ಪಂದ್ಯದ ಫಲಿತಾಂಶ

ನ್ಯೂಜಿಲೆಂಡ್‌ ಮೊದಲು ಬ್ಯಾಟಿಂಗ್ ಮಾಡಿ 47.5 ಓವರ್‌ಗಳಲ್ಲಿ 231 ರನ್‌ ಸಿಡಿಸಿತು. ಈ ವೇಳೆ ಸೋಫಿಯಾ ಡಿವೈನ್‌ 9 ಬೌಂಡರಿ ಸೇರಿದಂತೆ 85 ರನ್‌ ಸಿಡಿಸಿದರು. ಬ್ರೂಕ್ ಹ್ಯಾಲಿಡೇ 45 ರನ್ ಬಾರಿಸಿದರು. ದಕ್ಷಿಣ ಆಫ್ರಿಕಾದ ಪರ ಮ್ಲಾಬಾ 4 ವಿಕೆಟ್‌ ಕಬಳಿಸಿದರು. ದಕ್ಷಿಣ ಆಫ್ರಿಕಾ ಗುರಿಯನ್ನು 40.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ ಮುಟ್ಟಿ ಸಂಭ್ರಮಿಸಿತು. ಈ ವೇಳೆ ಸುನೆ ಲೂಸ್ ಸಹ 83 ರನ್‌ ಬಾರಿಸಿ ಮಿಂಚಿದರು.

Story first published: Monday, October 6, 2025, 22:05 [IST]
Other articles published on Oct 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+