For Quick Alerts
ALLOW NOTIFICATIONS  
For Daily Alerts
 

IND vs BAN: ಟೆಸ್ಟ್ ಸರಣಿಯಲ್ಲಿ ಭಾರತದ 3 ವಿಕೆಟ್ ಕೀಪರ್ಸ್ ಆಡುವ ಸಾಧ್ಯತೆ!

ಆಗಸ್ಟ್ 13 ಮಂಗಳವಾರ, ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ರೋಚಕತೆಯಿಂದ ಕೂಡಿರುತ್ತವೆ.

ಏಕೆಂದರೆ ಎರಡೂ ತಂಡಗಳು ಅಪಾಯಕಾರಿ ಸ್ಪಿನ್ನರ್‌ಗಳನ್ನು ಹೊಂದಿವೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 1 ರವರೆಗೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲಲೇಬೇಕು.

Team India 3 wicket keepers are likely to play in Test series against Bangladesh

ಹೀಗಾಗಿ ಇಂತಹ ಮಹತ್ವದ ಸರಣಿಗಾಗಿ ನಾಯಕ ರೋಹಿತ್ ಶರ್ಮಾ ಅವರು ಭಾರತದ ಟೆಸ್ಟ್ ತಂಡದಲ್ಲಿ 3 ವಿಕೆಟ್‌ಕೀಪರ್-ಬ್ಯಾಟರ್ಸ್‌ ಅನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಟೆಸ್ಟ್ ಸರಣಿಯಲ್ಲಿ ಎಲ್ಲಾ ಮೂರು ವಿಕೆಟ್‌ಕೀಪರ್ಸ್ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ. ಈ 3 ವಿಕೆಟ್‌ಕೀಪರ್ಸ್‌ ಬಗ್ಗೆ ಮಾಹಿತಿ ಇಲ್ಲಿದೆ.

1) ಕೆಎಲ್ ರಾಹುಲ್: ಟೆಸ್ಟ್ ಕ್ರಿಕೆಟ್‌ನಲ್ಲಿ 6ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವುದರ ಜೊತೆಗೆ, ಕೆಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಒಂದು ಕಾರಣದಿಂದಾಗಿ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್‌ಗೆ ಖಂಡಿತವಾಗಿಯೂ ಅವಕಾಶ ನೀಡಬಹುದು.

ರಾಹುಲ್ ಏಕದಿನ ಮಾದರಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿದರೆ, ಟೀಮ್ ಇಂಡಿಯಾ ಹೆಚ್ಚುವರಿ ಆಲ್ ರೌಂಡರ್ ನೊಂದಿಗೆ ಫೀಲ್ಡಿಂಗ್ ಮಾಡುವ ಆಯ್ಕೆಯನ್ನು ಪಡೆಯುತ್ತದೆ. ಭಾರತ ತಂಡದ ಮ್ಯಾನೇಜ್‌ಮೆಂಟ್ ಕೂಡ ಈಗ ಅದೇ ಸೂತ್ರವನ್ನು ಟೆಸ್ಟ್‌ನಲ್ಲಿಯೂ ಅನ್ವಯಿಸಬಹುದು.

ಕೆಎಲ್ ರಾಹುಲ್ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಬಿರುಗಾಳಿ ಎಬ್ಬಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ವಿಕೆಟ್ ಕೀಪಿಂಗ್ ನಲ್ಲಿ ರಾಹುಲ್ ಅವರ ಕ್ಯಾಚಿಂಗ್ ಮತ್ತು ಸ್ಟಂಪಿಂಗ್ ಕೂಡ ಅತ್ಯುತ್ತಮವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಆರಂಭಿಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಸಂಖ್ಯೆಯಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಭಾರತ ಪರ ರಾಹುಲ್ 50 ಟೆಸ್ಟ್ ಪಂದ್ಯಗಳಲ್ಲಿ 34.08 ಸರಾಸರಿಯಲ್ಲಿ 2863 ರನ್ ಗಳಿಸಿದ್ದಾರೆ. 8 ಶತಕ ಮತ್ತು 14 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಅವರ ಅತ್ಯುತ್ತಮ ಸ್ಕೋರ್ 199 ರನ್.

2) ಧ್ರುವ್ ಜುರೆಲ್: ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಮತ್ತು ಟೆಸ್ಟ್ ಪಂದ್ಯದ ಸಮಯದ ಒತ್ತಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯುವ ಪ್ರತಿಭೆ ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅವರಲ್ಲಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬಹುದು.

ಈ ವರ್ಷದ ಫೆಬ್ರವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಧ್ರುವ್ ಜುರೆಲ್ 90 ರನ್ ಬಾರಿಸಿದ್ದರು. ಈ ಮೂಲಕ ಮೂಲಕ ಭಾರತವನ್ನು ಸೋಲಿ ದವಡೆಯಿಂದ ಪಾರು ಮಾಡಿದರು. ಧ್ರುವ್ ಜುರೆಲ್ ಬ್ಯಾಟಿಂಗ್‌ಗೆ ಇಳಿದಾಗ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತ್ತು.

ಇದಾದ ನಂತರ ಧ್ರುವ್ ಜುರೆಲ್ 149 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 90 ರನ್ ಗಳಿಸಿದರು. ಧ್ರುವ್ ಜುರೆಲ್‌ ಅವರ ಈ ಇನ್ನಿಂಗ್ಸ್‌ನಿಂದಾಗಿ ಭಾರತ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದಕ್ಕಾಗಿ ಧ್ರುವ್ ಜುರೆಲ್ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನೂ ಪಡೆದಿದ್ದರು.

ಧ್ರುವ್ ಜುರೆಲ್ ಅವರು ರಾಂಚಿ ಟೆಸ್ಟ್‌ನಲ್ಲಿ ತಮ್ಮ ಹೋರಾಟದ ಬ್ಯಾಟಿಂಗ್ ಮೂಲಕ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನಪಿಸಿದ್ದರು. ಧ್ರುವ್ ಜುರೆಲ್ ಭಾರತ ಪರ 3 ಟೆಸ್ಟ್ ಪಂದ್ಯಗಳಲ್ಲಿ 63.33 ಸರಾಸರಿಯಲ್ಲಿ 190 ರನ್ ಗಳಿಸಿದ್ದಾರೆ. ಧ್ರುವ್ ಜುರೆಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 1 ಅರ್ಧಶತಕ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಧ್ರುವ್ ಜುರೆಲ್ ಅವರ ಅತ್ಯುತ್ತಮ ಸ್ಕೋರ್ 90 ರನ್.

3) ರಿಷಬ್ ಪಂತ್: ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಅವರು ರಿಷಬ್ ಪಂತ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡುವುದು ಬಹುತೇಕ ಪಕ್ಕಾ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ರಿಷಬ್ ಪಂತ್ ಮೇಲುಗೈ ಸಾಧಿಸಿದ್ದಾರೆ. ರಿಷಬ್ ಪಂತ್ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ ಸ್ಪಿನ್ನರ್‌ಗಳ ಮೇಲೆ ಒತ್ತಡ ಹೇರುತ್ತಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ, ಉತ್ತಮ ರನ್ ಕಲೆ ಹಾಕುವ ಜೊತೆಗೆ ಸರಣಿ ಗೆಲ್ಲಲು ಸಹಾಯವಾಗುತ್ತದೆ.

ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಏಕದಿನ ಮತ್ತು ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ರಿಷಬ್ ಪಂತ್ 33 ಟೆಸ್ಟ್ ಪಂದ್ಯಗಳಲ್ಲಿ 43.67 ರ ಅತ್ಯುತ್ತಮ ಸರಾಸರಿಯಲ್ಲಿ 2271 ರನ್ ಗಳಿಸಿದ್ದು, 5 ಶತಕ ಹಾಗೂ 11 ಅರ್ಧ ಶತಕ ಸಿಡಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ರಿಷಬ್ ಪಂತ್ ಅವರ ಅತ್ಯುತ್ತಮ ಸ್ಕೋರ್ 159 ರನ್.

ಟೀಮ್ ಇಂಡಿಯಾ ಪರ ರಿಷಭ್ ಪಂತ್ ಅವರು ವಿಶ್ವದಾದ್ಯಂತ ಇರುವ ಹಲವು ಕಠಿಣ ಮೈದಾನಗಳಲ್ಲಿ ಪಂದ್ಯಗಳನ್ನು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ರಿಷಬ್ ಪಂತ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಟೆಸ್ಟ್ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.

ರಿಷಬ್ ಪಂತ್ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ರಿಷಬ್ ಪಂತ್ ನಂತರ ಡಿಸೆಂಬರ್ 2022 ರ ಕೊನೆಯಲ್ಲಿ ಅಪಘಾತಕ್ಕೀಡಾಗಿದ್ದರು. ಇದು ಅಪಘಾತ ನಂತರ ಪಂತ್ ಅವರ ಮೊದಲ ಟೆಸ್ಟ್ ಸರಣಿಯಾಗಲಿದೆ.

Story first published: Tuesday, August 13, 2024, 13:28 [IST]
Other articles published on Aug 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+