Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ಗೂ ಮುನ್ನ ಐಸಿಸಿಯಿಂದ ವಿಶೇಷ ಗೌರವ ಪಡೆದ 7 ಟೀಮ್‌ ಇಂಡಿಯಾ ಆಟಗಾರರು

ಮೇ 30 ಗುರುವಾರ, 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನೆರಡು ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಿಂದ ಟೀಮ್‌ ಇಂಡಿಯಾ ಆಟಗಾರರು ವಿಶೇಷ ಗೌರವವನ್ನು ಸ್ವೀಕರಿಸಿದ್ದಾರೆ.

ಐಸಿಸಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಿಗೆ 2023ರ ವರ್ಷದ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ 7 ಆಟಗಾರರು ವಿವಿಧ ಸ್ವರೂಪಗಳಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ಈ ಆಟಗಾರರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

Team India 7 players who received special honor from ICC

ಟಿ20 ವಿಶ್ವಕಪ್‌ಗೂ ಮುನ್ನ ಐಸಿಸಿ 2023ರ ವರ್ಷದ ಟಿ20 ತಂಡ ಪ್ರಶಸ್ತಿಯನ್ನು ಇಬ್ಬರು ಟೀಮ್‌ ಇಂಡಿಯಾ ಆಟಗಾರರು ಪಡೆದುಕೊಂಡಿದ್ದಾರೆ. ಭಾರತದ 360 ಡಿಗ್ರಿ ಆಟಗಾರ ಎಂದು ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ ಮತ್ತು ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಐಸಿಸಿ ಟಿ20 ವರ್ಷದ ತಂಡದ ಪ್ರಶಸ್ತಿ ನೀಡಲಾಗಿದೆ.

ಇದರೊಂದಿಗೆ ಸೂರ್ಯಕುಮಾರ್ ಯಾದವ್‌ಗೆ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಸೂರ್ಯ ಕುಮಾರ್ ಕಳೆದ ವರ್ಷ ಟಿ20 ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 17 ಪಂದ್ಯಗಳಲ್ಲಿ 48ರ ಸರಾಸರಿ ಮತ್ತು 155 ರ ಸ್ಟ್ರೈಕ್ ರೇಟ್‌ನಲ್ಲಿ 744 ರನ್ ಗಳಿಸಿದರು. ಈ ಹಿಂದೆ 2022ರಲ್ಲಿ ಕೂಡ ಸೂರ್ಯ ಈ ಪ್ರಶಸ್ತಿ ಪಡೆದಿದ್ದರು.

ಇದಲ್ಲದೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಐಸಿಸಿ ವರ್ಷದ ಏಕದಿನ ತಂಡದ ಕ್ಯಾಪ್ ಪಡೆದಿದ್ದಾರೆ. ರೋಹಿತ್ ಶರ್ಮಾ ಈ ಕ್ಯಾಪ್ ಅನ್ನು ಕುಲದೀಪ್ ಯಾದವ್‌ಗೆ ತುಂಬಾ ತಮಾಷೆಯಾಗಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಸಿಸಿ ಆಯ್ಕೆ ಮಾಡಿರುವ 2023ರ ವರ್ಷದ ಏಕದಿನ ತಂಡ ಪ್ಲೇಯಿಂಗ್-11ರಲ್ಲಿ ಭಾರತದ 4 ಆಟಗಾರರು ಸ್ಥಾನ ಪಡೆದಿರುವುದು ವಿಶೇಷ.

ಸ್ಟಾರ್‌ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಅವರಿಗೆ ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಈ ಕ್ಯಾಪ್ ಕ್ರೆಡಿಟ್‌ ನೀಡಿರುವ ಜಡೇಜಾ ವಿಶೇಷ ವ್ಯಕ್ತಿಯಿಂದ ವಿಶೇಷ ಟೋಪಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಐಸಿಸಿ 2021ರಿಂದ ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದೆ.

Story first published: Thursday, May 30, 2024, 16:12 [IST]
Other articles published on May 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+