Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಭಾರತದ ಮತ್ತೋರ್ವ ಸ್ಟಾರ್ ಆಲ್‌ರೌಂಡರ್ ಚಿಂತನೆ: ವರದಿ

Team India All-Rounder Ravindra Jadeja Thinking about retirement from Test cricket: Report

ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆಯಲ್ಲಿದ್ದಾರೆ ಎಂಬ ಸಂಗತಿ ಬಹಿರಂಗವಾಗಿತ್ತು. ಬಿಸಿಸಿಐ ಮೂಲಗಳು ಈ ಮಾಹಿತಿಯನ್ನು ನೀಡಿದ್ದವು. ಇದೀಗ ಮತ್ತೋರ್ವ ಆಲ್‌ರೌಂಡರ್ ಬಗ್ಗೆಯೂ ಅದೇ ರೀತಿಯ ಮಾತುಗಳು ಕೇಳಿ ಬರುತ್ತಿದೆ. ಭಾರತದ ಮೂರು ಮಾದರಿಯಲ್ಲಿಯೂ ಪ್ರಮುಖ ಆಟಗಾರನಾಗಿ ಮಿಂಚುತ್ತಿರುವ ಆಟಗಾರ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಗಾಯದ ಕಾರಣದಿಂದಾಗಿ ಇತ್ತೀಚೆಗೆ ತಂಡದಿಂದ ಅನೇಕ ಬಾರಿ ಹೊರಗುಳಿಯುತ್ತಿದ್ದು ಸ್ಥಿರವಾಗಿ ತಂಡದಲ್ಲಿ ಇತ್ತೀಚೆಗೆ ವಿಫಲವಾಗುತ್ತಿರುವ ಟೀಮ್ ಇಂಡಿಯಾದ ಪ್ರಮುಖ ಆಟಗಾರನೇ ಈ ನಿರ್ಧಾರವನ್ನು ತೆಗೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾದರೆ ಆ ಆಟಗಾರ ಯಾರು? ಟೀಮ್ ಇಂಡಿಯಾದ ಆ ಪ್ರಮುಖ ಆಲ್‌ರೌಂಡರ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳಲು ಯೋಚಿಸುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಬಗ್ಗೆ ಜಡೇಜಾ ಚಿಂತನೆ

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಬಗ್ಗೆ ಜಡೇಜಾ ಚಿಂತನೆ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಆಗಿರುವ ರವೀಂದ್ರ ಜಡೇಜಾ ಭಾರತದ ಮೂರು ಮಾದರಿಯ ತಂಡದಲ್ಲಿಯೂ ಖಾಯಂ ಸದಸ್ಯ. ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ ಜಡೇಜಾ. ಆದರೆ ಇತ್ತೀಚೆಗೆ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಹೆಚ್ಚಿನ ಗಮನಹರಿಸಲು ಬಯಸುತ್ತಿರುವ ಕಾರಣದಿಂದಾಗಿ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಿಂದ ಜಡ್ಡು ಹೊರಕ್ಕೆ

ದಕ್ಷಿಣ ಆಫ್ರಿಕಾ ಪ್ರವಾಸದಿಂದ ಜಡ್ಡು ಹೊರಕ್ಕೆ

ಇತ್ತೀಚೆಗಷ್ಟೇ ಅಂತ್ಯವಾದ ನ್ಯೂಜಿಲೆಂಡ್ ವಿರುದ್ಧಧ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ರವೀಂದ್ರ ಜಡೇಜಾ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ಮೂರನೇ ಟೆಸ್ಟ್ ಪಮದ್ಯದಿಂದ ಅವರು ಸಂಪೂರ್ಣವಾಗಿ ಹೊರಗುಳಿದಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಯಲ್ಲಿ ಜಡೇಜಾ ಭಾಗಿಯಾಗುವ ನಿರೀಕ್ಷೆಯಿತ್ತು. ಆದರೆ ಈಗಾಗಲೇ ಪ್ರಕಟವಾಗಿರುವ ಟೆಸ್ಟ್ ತಂಡದಲ್ಲಿ ಮೊಣಕಾಲಿನ ಗಾಯದ ಕಾರಣದಿಂದಾಗಿ ಜಡೇಜಾ ಹೊರಗುಳಿದಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒತ್ತು ನೀಡಲು ಜಡೇಜಾ ನಿವೃತ್ತಿ?

ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒತ್ತು ನೀಡಲು ಜಡೇಜಾ ನಿವೃತ್ತಿ?

ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ ಮಾದರಿಗೆ ನಿವೃತ್ತಿ ಘೋಷಿಸಲು ಯೋಚಿಸುತ್ತಿರುವ ಬಗ್ಗೆ ದೈನಿಕ್ ಜಾಗರಣ್ ಪತ್ರಿಕೆ ವರದಿ ಮಾಡಿದೆ. ಗಾಯದ ಕಾರಣದಿಂದಾಗಿ ಅವರು ಈ ನಿರ್ಧಾರವನ್ನು ಕೈಗೊಳ್ಳಲಿದ್ದು ಮುಂದಿನ ವರ್ಷ ನಡೆಯಲಿರುವ ಶ್ರಿಲಂಕಾ ಪ್ರವಾಸದಿಂದಲೂ ಅವರು ಹೊರಗುಳಿಯುವ ಸಾಧ್ಯತೆಯಿದೆ ಎಂದು ದೈನಿಕ್ ಜಾಗರಣ್ ವರದಿಯಲ್ಲಿ ಹೇಳಿದೆ. ರವೀಂದ್ರ ಜಡೇಕಾ ಅವರ ಸಹ ಆಟಗಾರ ಜಡೇಜಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಬಯಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಮೂರು ಆಯಾಮದ ಆಟಗಾರ ಜಡ್ಡು

ಮೂರು ಆಯಾಮದ ಆಟಗಾರ ಜಡ್ಡು

33 ವರ್ಷದ ರವೀಂದ್ರ ಜಡೇಜಾ ಟೀಮ್ ಇಂಡಿಯಾ ಪರವಾಗಿ ಎಲ್ಲಾ ಮಾದರಿಯ ತಂಡದಲ್ಲಿಯೂ ಖಾಯಂ ಸದಸ್ಯನಾಗಿ ಗುರುತಿಸಿಕೊಂಡಿದ್ದು ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ತವರಿನಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಮಿಂಚಿರುವ ಜಡ್ಡು ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಅಮೋಘ ಫಿಲ್ಡಿಂಗ್‌ನಿಂದಲೂ ಎದುರಾಳಿಗೆ ಆಘಾತ ನಿಡುವ ಸಾಮರ್ಥ್ಯಹೊಂದಿದ್ದು ಅ್ದೇ ಕಾರಣದಿಂದಾಗಿ ಅವರು ತ್ರಿ ಡೈಮೆನ್ಶನ್ ಆಟಗಾರ ಎನಿಸಿಕೊಂಡಿದ್ದಾರೆ. ಈವರೆಗೆ ರವೀಂದ್ರ ಜಡೇಜಾ ಒಟ್ಟು 57 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು ಬ್ಯಾಟಿಂಗ್ ವೇಳೆ 2195 ರನ್‌ಗಳನ್ನು ಬಾರಿಸಿದ್ದರೆ ಬೌಲಿಂಗ್‌ನಲ್ಲಿ 232 ವಿಕೆಟ್ ಸಂಪಾದಿಸಿದ್ದಾರೆ.

Story first published: Monday, December 13, 2021, 10:05 [IST]
Other articles published on Dec 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+