Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Team India: 92 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ತಂಡ ಬೃಹತ್ ದಾಖಲೆ

ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಎಲ್ಲೆಡೆ ಸದ್ದು ಮಾಡುತ್ತಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಗೆದ್ದು ಭಾರತ ಇತಿಹಾಸ ನಿರ್ಮಿಸಿದೆ. 92 ವರ್ಷಗಳಲ್ಲಿ ಮೊದಲ ಬಾರಿಗೆ ವಿಶೇಷ ದಾಖಲೆ ಬರೆದಿರುವ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 280 ರನ್‌ಗಳಿಂದ ಸೋಲಿಸಿದೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭರ್ಜರಿ ಆಲ್‌ರೌಂಡರ್ ಪ್ರದರ್ಶನದಿಂದ ಟೀಮ್ ಇಂಡಿಯಾ ಗೆಲುವು ಕಂಡಿದೆ.

Team India biggest record in Test cricket

ಬಾಂಗ್ಲಾದೇಶ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಅಶ್ವಿನ್ 113 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ ಅವರು 88 ರನ್‌ಗಳಿಗೆ 6 ವಿಕೆಟ್ ಪಡೆದು ಬಾಂಗ್ಲಾದೇಶ ಗೆಲುವಿಗೆ ಕಡಿವಾಣ ಹಾಕಿದರು.

ಬೃಹತ್ ದಾಖಲೆ

1932ರಲ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿತು. ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 1932ರ ಜೂನ್ 25 ರಂದು ಲಾರ್ಡ್ಸ್‌ ಅಂಗಳದಲ್ಲಿ ಆಡಿತು. ಇದೀಗ ಭಾರತ ತಂಡದ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಶ್ರೇಷ್ಠ ದಾಖಲೆ ನಿರ್ಮಿಸಿದೆ.

ಟೀಮ್ ಇಂಡಿಯಾ ಗೆದ್ದ ಟೆಸ್ಟ್ ಪಂದ್ಯಗಳ ಸಂಖ್ಯೆ ಸೋತ ಟೆಸ್ಟ್ ಪಂದ್ಯಗಳ ಸಂಖ್ಯೆಯನ್ನು ಮೀರಿದ್ದು ಇದೇ ಮೊದಲು. ಭಾರತ ತಂಡವು 1932 ರಿಂದ ಒಟ್ಟು 580 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 179 ಪಂದ್ಯಗಳನ್ನು ಗೆದ್ದರೆ, 178 ಪಂದ್ಯಗಳಲ್ಲಿ ಸೋತಿದೆ. ಈ ಅವಧಿಯಲ್ಲಿ 223 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಗೆಲುವಿನ ಶೇಕಡಾವಾರು 50.13 ಆಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಹೊಸ ಮೈಲಿಗಲ್ಲು ಸಾಧಿಸಿದ ವಿಶ್ವದ 5ನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತಕ್ಕಿಂತ ಮೊದಲು ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಈ ಸಾಧನೆ ಮಾಡಿವೆ. ಆಸ್ಟ್ರೇಲಿಯಾ ಇದುವರೆಗೆ ಒಟ್ಟು 866 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 414 ಪಂದ್ಯಗಳನ್ನು ಗೆದ್ದು 232 ಪಂದ್ಯಗಳಲ್ಲಿ ಸೋಲುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇಂಗ್ಲೆಂಡ್ 1077 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 397 ಪಂದ್ಯಗಳನ್ನು ಗೆದ್ದು, 325 ಪಂದ್ಯಗಳಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾ 466 ಟೆಸ್ಟ್ ಪಂದ್ಯಗಳಲ್ಲಿ 179 ಗೆಲುವು ಮತ್ತು 161 ಸೋಲು ಕಂಡಿದೆ. ಪಾಕಿಸ್ತಾನ 458 ಟೆಸ್ಟ್ ಪಂದ್ಯಗಳಲ್ಲಿ 148 ರಲ್ಲಿ ಗೆದ್ದರೆ, 144 ರಲ್ಲಿ ಸೋಲು ಅನುಭವಿಸಿದೆ.

Story first published: Monday, September 23, 2024, 11:12 [IST]
Other articles published on Sep 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+