Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: 2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅಳಿಸಿ ಹಾಕಬಲ್ಲ ದಾಖಲೆಗಳಿವು

ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಗುರುವಾರ, ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಐಸಿಸಿ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಆತಿಥೇಯ ಭಾರತ ಮಾತ್ರವಲ್ಲದೆ, ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐದು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡ ತನ್ನ ಏಕದಿನ ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತದೆ.

team-india-captain-rohit-sharma

ಭಾರತ ತಂಡ ತನ್ನ 3ನೇ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದ್ದು, 50-ಓವರ್‌ಗಳ ಐಸಿಸಿ ಪಂದ್ಯಾವಳಿಯಲ್ಲಿ ನಾಯಕ ರೋಹಿತ್ ಶರ್ಮಾ ಮುರಿಯಬಹುದಾದ ದಾಖಲೆಗಳ ಬಗ್ಗೆ ತಿಳಿಯೋಣ.

* ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಭಾರತೀಯ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯಲಿದ್ದಾರೆ. ಸದ್ಯ ಇಬ್ಬರೂ 6 ಶತಕಗಳಿಂದ ಸಮಬಲದಲ್ಲಿದ್ದಾರೆ.

* ರೋಹಿತ್ ಶರ್ಮಾ (ಇದುವರೆಗೆ 17 ವಿಶ್ವಕಪ್ ಪಂದ್ಯಗಳಲ್ಲಿ 978 ರನ್) ಏಕದಿನ ವಿಶ್ವಕಪ್‌ನಲ್ಲಿ 1,000 ರನ್ ಗಡಿ ದಾಟಿದ ನಾಲ್ಕನೇ ಭಾರತೀಯ ಆಟಗಾರನಾಗಲು ಕೇವಲ 22 ರನ್ ಗಳಿಸಬೇಕಿದೆ.

team-india-captain-rohit-sharma

* ರೋಹಿತ್ ಶರ್ಮಾ (451 ಪಂದ್ಯಗಳಲ್ಲಿ 551 ಸಿಕ್ಸರ್) ಕ್ರಿಸ್ ಗೇಲ್ ಅವರ (553 ಸಿಕ್ಸರ್) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿಯಲು ಕೇವಲ ಮೂರು ಸಿಕ್ಸರ್‌ಗಳ ಅವಶ್ಯಕತೆ ಇದೆ.

* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18,000 ರನ್ ಪೂರೈಸಿದ 5ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ರೋಹಿತ್ ಶರ್ಮಾ (451 ಪಂದ್ಯಗಳಲ್ಲಿ 17,642 ರನ್) ಕೇವಲ 352 ರನ್‌ಗಳ ದೂರದಲ್ಲಿದ್ದಾರೆ.

* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಬಾರಿಸಿದ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಅವರಿಗೆ ಕೇವಲ ಮೂರು ಅರ್ಧಶತಕಗಳ ಅಗತ್ಯವಿದೆ. ಅನುಭವಿ ಆರಂಭಿಕ ಆಟಗಾರ ಇದುವರೆಗೆ ಏಕದಿನದಲ್ಲಿ 52 ಅರ್ಧಶತಕಗಳು, ಟೆಸ್ಟ್‌ನಲ್ಲಿ 16 ಅರ್ಧಶತಕಗಳು ಮತ್ತು ಟಿ20 ಪಂದ್ಯಗಳಲ್ಲಿ 29 ಅರ್ಧಶತಕಗಳನ್ನು ಬಾರಿಸಿದ್ದಾರೆ.

Story first published: Wednesday, October 4, 2023, 20:47 [IST]
Other articles published on Oct 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+