ವಿಶ್ವ ಕ್ರಿಕೆಟ್‌ನಲ್ಲಿ ಕಳಚುತ್ತಿದ್ಯಾ ಕಿಂಗ್ ಕೊಹ್ಲಿ ಕಿರೀಟ!

This is the reason for Virat Kohli bad form. | Virat Kohli |

ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಅದ್ವಿತೀಯ ಆಟಗಾರ. ಜಗತ್ತುಕಂಡ ಅದ್ಭುತ ಆಟಗಾರರಲ್ಲಿ ಓರ್ವ ಎಂಬ ಮಾತನ್ನು ಕ್ರಿಕೆಟ್‌ನ ಲೆಜೆಂಡರಿ ಆಟಗಾರರೇ ಒಪ್ಪಿಕೊಂಡಿದ್ದಾರೆ. ಟೀಮ್ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಕೊಹ್ಲಿ.

ಆದರೆ ತನ್ನ ಕಳೆದ ಆರು ತಿಂಗಳಿನಿಂದ ಕೊಹ್ಲಿ ತಮ್ಮ ಹಿಂದಿನ ಫಾರ್ಮ್‌ನಲ್ಲಿ ಇದ್ದಂತೆ ಕಾಣುತ್ತಿಲ್ಲ. ಪ್ರತಿ ಮೂರರಿಂದ ನಾಲ್ಕು ಪಂದ್ಯಗಳಿಗೊಂದರಂತೆ ಶತಕ ಬಾರಿಸುತ್ತಿದ್ದ ಕೊಹ್ಲಿಯ ಶತಕವನ್ನು ಅಭಿಮಾನಿಗಳು ನೋಡದೆ ಅದಾಗಲೇ ಆರು ತಿಂಗಳು ಕಳೆದಿದೆ.

ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?

ಹಾಗಾದರೆ ಕೊಹ್ಲಿ ಕೂಡ ಫಾರ್ಮ್ ಕಳೆದುಕೊಂಡು ಬಿಟ್ರಾ? ಗೆಲುವಿನ ಮೇಲೆ ಗೆಲುವಿನಲ್ಲಿ ತೇಲುತ್ತಿದ್ದ ಟೀಮ್ ಇಂಡಿಯಾಗೆ ಒಂದು ಸರಣಿ ಸೋಲು ಕೊಹ್ಲಿಯ ಫಾರ್ಮ್ ಮೇಲೆ ಪ್ರಶ್ನೆ ಮಾಡುವಂತೆ ಮಾಡಿದೆ.

ಕೊಹ್ಲಿಗೂ ಕಾಡುತ್ತಿದ್ಯಾ ಫಾರ್ಮ್ ಸಮಸ್ಯೆ:

ಕೊಹ್ಲಿಗೂ ಕಾಡುತ್ತಿದ್ಯಾ ಫಾರ್ಮ್ ಸಮಸ್ಯೆ:

ವಿರಾಟ್ ಕೊಹ್ಲಿ ಯಾವಾಗಲೂ ಫಾರ್ಮ್ ಕಳೆದುಕೊಂಡಿದ್ದೇ ಇಲ್ಲ. ಆದರೆ ಕಳೆದ ಕೆಲ ಸಮಯಗಳಿಂದ ಕೊಹ್ಲಿ ಬ್ಯಾಟ್‌ನಿಂದ ಅಂದುಕೊಂಡಂತೆ ರನ್ ಹರಿದುಬರುತ್ತಿಲ್ಲ. ಟೀಮ್ ಇಂಡಿಯಾವನ್ನು ಏಕಾಂಗಿಯಾಗಿ ಗೆಲ್ಲಿಸುತ್ತಿದ್ದ ಕೊಹ್ಲಿ ದೊಡ್ಡ ಮೊತ್ತ ಕಲೆ ಹಾಕಲು ವಿಫಲರಾಗುತ್ತಿದ್ದಾರೆ.

ಶತಕಗಳ ಸರದಾರ ಶತಕಗಳಿಸೋದನ್ನೇ ಮರೆತುಬಿಟ್ರಾ?

ಶತಕಗಳ ಸರದಾರ ಶತಕಗಳಿಸೋದನ್ನೇ ಮರೆತುಬಿಟ್ರಾ?

ವಿರಾಟ್ ಕೊಹ್ಲಿ ಪ್ರತಿ ಸರಣಿಯಲ್ಲೂ ಕನಿಷ್ಟ ಒಂದು ಶತಕವನ್ನು ಬಾರಿಸದೆ ಸರಣಿಯನ್ನು ಪೂರೈಸುತ್ತಿರಲಿಲ್ಲ. ಆದರೆ ವಿಶ್ವಕಪ್ ಬಳಿಕ ವೆಸ್ಟ್‌ ಇಂಡೀಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿ ಮಿಂಚಿದ ಕೊಹ್ಲಿ ಬಳಿಕ ಶತಕವನ್ನು ಬಾರಿಸುವುದನ್ನೇ ಮರೆತುಬಿಟ್ಟಂತೆ ಕಾಣುಸುತ್ತಿದೆ.

ಒಂದು ಶತಕಗಳಿಸದೆ ಆರು ತಿಂಗಳು:

ಒಂದು ಶತಕಗಳಿಸದೆ ಆರು ತಿಂಗಳು:

ವಿರಾಟ್ ಕೊಹ್ಲಿ ಅಂತಿಮವಾಗಿ ಶತಕವನ್ನು ಬಾರಿಸಿದ್ದು ಕಳೆದ ಆಗಸ್ಟ್‌ನಲ್ಲಿ. ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕವನ್ನು ಬಾರಿಸಿದ್ದರು. ಅದೇ ಕೊನೆ ಅಲ್ಲಿಂದ ನಂತರ ಆಡಿದ ಸರಣಿಯಲ್ಲಿ ಕೊಹ್ಲಿ ಶತಕವನ್ನು ಬಾರಿಸಿಲ್ಲ.

43ನೇ ಶತಕದ ಬಳಿಕ:

43ನೇ ಶತಕದ ಬಳಿಕ:

ವಿರಾಟ್ ಕೊಹ್ಲಿ 43ನೇ ಶತಕದ ವರೆಗೆ ಅದ್ಭುತವಾಗಿ ಎಲ್ಲೂ ಎಡವಿದಂತೆ ಭಾಸವಾಗಲೇ ಇಲ್ಲ. ಆದರೆ ಅದಾದ ಬಳಿಕ ಕೊಹ್ಲಿ ಒಂದೇ ಒಂದು ಶತಕ ದಾಖಲಿಸಲು ಸಾಧ್ಯವಾಗಿಲ್ಲ. ಅರ್ಧಶತಕವನ್ನು ಬಾರಿಸುತ್ತಿದ್ದರೂ ಅದನ್ನು ಶತಕವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗುತ್ತಿಲ್ಲ.

ವಿಶ್ವಕಪ್‌ನಲ್ಲೂ ದಾಖಲಾಗಿಲ್ಲ ಒಂದೂ ಶತಕ:

ವಿಶ್ವಕಪ್‌ನಲ್ಲೂ ದಾಖಲಾಗಿಲ್ಲ ಒಂದೂ ಶತಕ:

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮೇಲೆ ತುಂಬಾ ನಿರೀಕ್ಷೆಗಳು ಇತ್ತು. ವಿರಾಟ್ ಕೊಹ್ಲಿ ಅದಾಗಲೆ 41 ಶತಕವನ್ನು ಬಾರಿಸಿದ್ದರು. ವಿಶ್ವಕಪ್‌ನಲ್ಲಿ ಶತಕಗಳ ಸುರಿಮಳೆಯನ್ನು ಸುರಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ರೋಹಿತ್ ಶರ್ಮಾ 5 ಶತಕ ಬಾರಿಸಿ ಮಿಂಚಿದರೆ ವಿರಾಟ್ ಕೊಹ್ಲಿ ಒಂದು ಶತಕವನ್ನು ಬಾರಿಸಲೂ ಸಾಧ್ಯವಾಗಲಿಲ್ಲ. ಕನಿಷ್ಟ ಒಂದು ಅರ್ಧ ಶತಕವೂ ಕೊಹ್ಲಿ ಬ್ಯಾಟ್‌ನಿಂದ ಬರಲಿಲ್ಲ.

ಕೀವಿಸ್ ವಿರುದ್ಧದ ಸರಣಿಯಲ್ಲೂ ಫ್ಲಾಪ್:

ಕೀವಿಸ್ ವಿರುದ್ಧದ ಸರಣಿಯಲ್ಲೂ ಫ್ಲಾಪ್:

ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧದ ಸರಣಿಯಲ್ಲೂ ಫ್ಲಾಪ್ ಆಗಿದ್ದಾರೆ. ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಮಾತ್ರವೇ ಒಂದು ಅರ್ಧ ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಪಂದ್ಯಗಳಲ್ಲಿ ಕೊಹ್ಲಿ ಕಳಪೆಯಾಗಿ ಆಡಿದ್ದಾರೆ.

ಮತ್ತೆ ಅಬ್ಬರಿಸಬೇಕು ಕೊಹ್ಲಿ:

ಮತ್ತೆ ಅಬ್ಬರಿಸಬೇಕು ಕೊಹ್ಲಿ:

ಅತಿಯಾದ ಕ್ರಿಕೆಟ್ ಟೀಮ್ ಇಂಡಿಯಾ ನಾಯಕನ ಆಟದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ಅಬ್ಬರಿಸಬೇಕು ಎಂಬುದು ಅಭಿಮಾನಿಗಳ ನಿರೀಕ್ಷೆ. ವಿಶ್ವಕ್ರಿಕೆಟ್‌ನಲ್ಲಿ ಮೂಗಿನಮೇಲೆ ಬೆರಳಿಟ್ಟು ಮೋಡುವಂತೆ ಆಡುವ ವಿರಾಟ್ ಕೊಹ್ಲಿ ಕ್ರಿಕೆಟ್‌ ಲೋಕದ ಕಿಂಗ್ ಅನ್ನುವುದು ನಿಜವಾದರೂ ಕೊಹ್ಲಿಯ ಮೇಲಿನ ನಿರೀಕ್ಷೆ ಹೆಚ್ಚಿರುವುದರಿಂದ ಆ ನಿರೀಕ್ಷೆಯನ್ನು ನಿಭಾಯಿಸಲೇಬೇಕಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, February 13, 2020, 18:03 [IST]
Other articles published on Feb 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X