For Quick Alerts
ALLOW NOTIFICATIONS  
For Daily Alerts
 

ರೋಹಿತ್ ಜೊತೆಗೆ ಆರಂಭಿಕನಾಗಿ ಮುಂದುವರಿಯುವ ಸುಳಿವು ನೀಡಿದ ನಾಯಕ ವಿರಾಟ್ ಕೊಹ್ಲಿ

Team India captain Virat Kohli says he would like to open the innings with virat kohli

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆಲುವನ್ನು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-2 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆರಂಭಿಕನಾಗಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಕಣಕ್ಕಿಳಿದು ಯಶಸ್ಸು ಸಾಧಿಸಿದ್ದರು.

ಈ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಾ ಮುಂದೆಯೂ ತಾನು ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ಸುಳಿವನ್ನು ನೀಡಿದ್ದಾರೆ. ಆರಂಭಿನಾಗಿ ನಾನು ಖಂಡಿತವಾಗಿಯೂ ರೋಹಿತ್ ಶರ್ಮಾಗೆ ಜೊತೆಗಾರನಾಗಲು ಬಯಸುತ್ತೇನೆ ಎನ್ನುವ ಮೂಲಕ ಭಾರತ ತಂಡಕ್ಕೆ ಚುಟುಕು ಕ್ರಿಕೆಟ್‌ನಲ್ಲಿ ಹೊಸ ಆರಂಭಿಕ ಜೋಡಿಯ ಬಗ್ಗೆ ಸುಳಿವನ್ನು ನೀಡಿದ್ದಾರೆ.

"ಇಂದು ನಾನು ಹಾಗೂ ರೋಹಿತ್ ನಮ್ಮ ಉದ್ದೇಶದಲ್ಲಿ ಅತ್ಯಂತ ಸ್ಪಷ್ಟವಾಗಿದ್ದೆವು. ನಾನು ಒಬ್ಬರನ್ನೊಬ್ಬರು ನಂಬಬಹುದು ಎಂದು ನನಗೆ ತಿಳಿದಿತ್ತು. ಈ ಸಂದರ್ಭದಲ್ಲಿ ಒಬ್ಬರು ಹೊರನಡೆದರೂ ಇನ್ನೊಬ್ಬರು ಆಟವನ್ನು ಮುಂದುವರಿಸಬಹುದು. ಇಂದು ನಾವು ನಿಜವಾದ ರೋಹಿತ್ ಶರ್ಮಾರ ಆಟವನ್ನು ನೋಡಿದೆವು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

"ನಾನು ಐಪಿಎಲ್‌ನಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿದಿದ್ದೇನೆ. ನಾನು ಈ ಹಿಂದೆ ಬೇರೆ ಬೇರೆ ಕ್ರಮಾಂಕದಲ್ಲಿ ಆಡಿದ್ದೇನೆ. ಆದರೆ ನನಗೆ ಅನಿಸುತ್ತದೆ ಈ ನಾವು ಸಾಕಷ್ಟು ಅದ್ಭುತವಾದ ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ. ಈಗ ಇಬ್ಬರು ಅತ್ಯುತ್ತಮ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಓವರ್‌ಗಳನ್ನು ತೆಗೆದುಕೊಳ್ಳುವ ವಿಚಾರವಾಗಿದೆ" ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

"ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾಗೆ ಜೊತೆಗಾರನಾಗಲು ನಾನು ಖಂಡಿತಾ ಬಯಸುತ್ತೇನೆ. ನಾನು ಜೊತೆಗಾರಿಕೆಯನ್ನು ನೀಡಿದರೆ, ನಾವು ಇಬ್ಬರೂ ಕ್ರೀಸ್‌ಗೆ ಕಚ್ಚಿನಿಂತರೆ ನಮ್ಮಿಬ್ಬರಲ್ಲಿ ಒಬ್ಬರು ಎದುರಾಳಿಯನ್ನು ಘಾಸಿಗೊಳಿಸಬಲ್ಲೆವು. ಓರ್ವ ಆಟಗಾರು ವಿಕೆಟ್ ಕಳೆದುಕೊಂಡರೂ ಇನ್ನೋರ್ವ ಸೆಟ್ ಆಗಿದ್ದಾನೆ ಎಂದು ಇತರ ಆಟಗಾರರ ಈ ಮೂಲಕ ಮತ್ತಷ್ಟು ಆತ್ಮವಿಶ್ವಾಸವನ್ನು ಪಡೆಯಬಲ್ಲರು ಹಾಗೂ ನಿರಾಳರಾಗಿ ಆಡಬಲ್ಲರು. ಇದು ತಂಡಕ್ಕೆ ಉತ್ತಮವಾಗಿದ್ದು ಇದನ್ನು ಮುಂದುವರಿಸುವ ಆಶಾದಾಯವನ್ನು ಹೊಂದಿದ್ದೇವೆ. ವಿಶ್ವಕಪ್‌ನಲ್ಲಿಯೂ ಇದೇ ಫಾರ್ಮ್‌ಅನ್ನು ಮುಂದುವರಿಸುತ್ತೇವೆ" ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ

Story first published: Sunday, March 21, 2021, 20:42 [IST]
Other articles published on Mar 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+