ವಿರಾಟ್ ಕೊಹ್ಲಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು

ಮೊದಲ ಟಿಟ್ವೆಂಟಿ ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಅಬ್ಬರದ ಆಟವಾಡಿದ ಕೊಹ್ಲಿ ಭರ್ಜರಿಯಾಗಿ ಗೆದ್ದುಕೊಂಡರು. ಮೊದಲ ಪಂದ್ಯದಲ್ಲಿ ನಾಯಕ ಕೊಹ್ಲಿ ಬ್ಯಾಟಿಂಗ್ ಮಾತ್ರವಲ್ಲ ಆತನ ಅಗ್ರೆಸ್ಸಿವ್ ಆಟಿಟ್ಯೂಡ್ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಇಷ್ಟವಾಗಿದೆ.
ಅದರಲ್ಲೂ ವಿಂಡಿಸ್ ಬೌಲರ್ ಕ್ರೆಸಿಕ್ ವಿಲಿಯನ್ಸ್‌ಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದು ಸಾಕಷ್ಟು ವೈರಲ್ ಆಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್ ಆಗಿದ್ದ ಈ ಶೈಲಿಯನ್ನು ನಮ್ಮ ಕನ್ನಡಿಗರು ತಮ್ಮದೇ ಶೈಲಿಗಳಲ್ಲಿ ಟ್ರೋಲ್ ಮಾಡಿದ್ದಾರೆ.
ಸಕಾರಾತ್ಮಕ ಮೆಮೆಗಳನ್ನು ಸೃಷ್ಟಿಸಿ ತಮ್ಮ ಕ್ರಿಯೇಟಿವಿಟಿಯನ್ನು ತೋರಿಸುವಲ್ಲಿ ಯಶಸ್ವಿಯಯಾಗಿದ್ದಾರೆ ಟ್ರೋಲಿಗರು. ವಿಲಿಯಮ್ಸ್‌ಗೆ ಅಣಕಿಸಿದ ಸಂದರ್ಭದ ಚಿತ್ರವನ್ನು ಬಳಸಿಕೊಂಡ ಹಲವರು ಅದನ್ನು ಹಲವು ದೃಷ್ಟಿಕೋನದಿಂದ ನೋಡುವಂತೆ ಮಾಡಿ ನಗುತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಾ ಒಂದಷ್ಟು ಮೆಮೆಗಳನ್ನು ಬನ್ನಿ ನೋಡೋಣ;

ಚೆಂಡು ಹೂ ಮಾರಿದ ಕೊಹ್ಲಿ;
ಕೊಹ್ಲಿ ಮೈದಾನದಲ್ಲಿ ಅಗ್ರೆಸಿವ್ ಆಗಿ ಎದುರಾಳಿಗೆ ಪ್ರತ್ಯುತ್ತರ ನೀಡಿದರೆ ಈ ಫೋಟೋ ನಮ್ಮ ನೆಟ್ಟಿಗರಿಗೆ ಹೇಗೆ ಕಾಣಿಸಿದೆ ನೋಡಿ. ಸಿಗ್ನೇಚರ್ ಮಾಡಿದ ಕೋಹ್ಲಿ ಕೈಗೆ ಚೆಂಡು ಹೂವನ್ನು ಕೊಟ್ಟಿದ್ದಾರೆ. ಎಂತವರ ಮುಖದಲ್ಲೂ ಒಂದು ಕ್ಷಣ ನಗುವನ್ನು ತರಿಸದೆ ಇರದು ಈ ಚಿತ್ರ.

ಟೀ ಶಾಪ್ ನಲ್ಲಿ ಕೊಹ್ಲಿ;
ಇದೇ ಚಿತ್ರ ಮತ್ತೊಂದೆಡೆ ಹೇಗೆ ಮಾಡಲಾಗಿದೆ ನೋಡಿ. ಈ ಚಿತ್ರದಲ್ಲಿ ಕೊಹ್ಲಿ ಕೈಯಲ್ಲಿ ಟೀ ಪಾತ್ರೆಯನ್ನು ಕೊಟ್ಟುಬಿಟ್ಟಿದ್ದಾರೆ. ಸ್ಥಳೀಯ ಶೈಲಿಯಲ್ಲಿ ಟೀ ಮಾಡೋ ರೀತಿಯಿರುವ ಈ ಪೋಸ್ಟ್ ಸಕತ್ ಮಜವಾಗಿದೆ.
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!

ಎಳ್ನೀರು ಕಡಿದುಕೊಟ್ಟ ಕ್ಯಾಪ್ಟನ್;
ಬ್ಯಾಟ್ ಹಿಡಿಯೋ ಕೈಯಲ್ಲಿ ಎಳ್ನೀರು! ಈ ಯೋಚನೆಯೇ ನಗು ತರಿಸುತ್ತಿದೆ. ಕೊಹ್ಲಿ ಎದುರಾಳಿಯನ್ನು ಅಣಕಿಸಿದ ಆ ಚಿತ್ರಕ್ಕೆ ಈ ರೀತಿ ಎಡಿಟ್ ಮಾಡಿ ಎಳ್ನೀರು ಕೊಟ್ಟಿದ್ದಾರೆ.

ಕಾಸು ಚೆಲ್ಲಿದ ನಾಯಕ!;
ಪಬ್ ಬಾರ್‌ಗಳಲ್ಲಿ ಅಥವಾ ಸಂತಸದ ಕೂಟಗಳಲ್ಲಿ ಸಂಭ್ರಮಿಸುವ ಸಂದರ್ಭದಲ್ಲಿ ಕೈಯಿಂದ ಹಣ ಚೆಲ್ಲಿ ಹುರಿದುಂಬಿಸುವ ದೃಶ್ಯಗಳನ್ನು ನೈಜವಾಗಿ ಅಲ್ಲದಿದ್ದರೂ ವೀಡಿಯೋಗಳಲ್ಲಿ, ಚಲನಚಿತ್ರಗಳ್ಲಲಿ ನೋಡಿರುತ್ತೀರಿ. ಇಲ್ಲಿ ಕೊಹ್ಲಿ ಫೋಟೋವನ್ನೂ ಅದೇ ರೀತಿ ಮಾಡಿ ನಗಿಸುವಂತೆ ಮಾಡಿದ್ದಾರೆ.
ಗದ್ದೆಗಿಳಿದ ಕೊಹ್ಲಿ ಮಾಡಿದ್ದೇನು?;
ಟೀಮ್ ಇಂಡಿಯಾ ನಾಯಕ ಕ್ರಿಕೆಟ್ ಆಡೋ ಜರ್ಸಿನಲ್ಲಿ ಗದ್ದೆಗೆ ಇಳಿದು ರಸಗೊಬ್ಬರ ಹರಡಿದರೆ ಹೇಗಿರಬಹುದು. ಈ ವೀಡಿಯೋ ನೋಡಿ ಹೇಗಿದೆ ಅಂತ ನಿಮಗೇ ಗೊತ್ತಾಗುತ್ತೆ.
ಈ ರೀತಿ ಯಾವುದೋ ಒಂದು ಸಂದರ್ಭವನ್ನು ಬಳಸಿಕೊಂಡು ನಗಿಸುವ ಪ್ರಯತ್ನಗಳು ಸಖತ್ ವೈರಲ್ ಆಗಿವೆ. ಅಂದ ಹಾಗೇ ಇದು ನಾಯಕ ವಿರಾಟ್ ಕೊಹ್ಲಿಗೆ ಮಾಡಿದ ಅವಮಾನ ಖಂಡಿತಾ ಅಲ್ಲ. ಸಂದರ್ಭವನ್ನು ಹಾಸ್ಯವಾಗಿ ಪರಿವರ್ತಿಸಿ ವೀಕ್ಷಕರನ್ನು ನಗಿಸಲು ನೆಟ್ಟಿಗರು ಮಾಡಿದ ಪ್ರಯತ್ನಗಳು. ಒಂದು ಸಂದರ್ಭವನ್ನು ಬಳಸಿಕೊಂಡು ಯಾವೆಲ್ಲಾ ರೀತಿಯಾಗಿ ನಗಿಸುವ ಪ್ರಯತ್ನಗಳನ್ನು ಮಾಡಬಹುದು ಅನ್ನೋದು ಈ ಚಿತ್ರಗಳನ್ನು ನೋಡಿ ತಿಳಿದುಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications