Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ ಮುನ್ನವೇ ತಂಡ ಖರೀದಿಸಿ ಸುದ್ದಿಯಲಿರುವ ಟೀಮ್ ಇಂಡಿಯಾ ಚೇಸಿಂಗ್ ಸ್ಟಾರ್

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ ಗಾಗಿ ಭರ್ಜರಿ ತಾಲೀಮು ನಡೆಸುತ್ತಿದ್ದು, ವಿಶ್ವದ ಗಮನವೇ ಇವರ ಮೇಲೆ ನೆಟ್ಟಿದೆ. ಇದೇ ಸಮಯದಲ್ಲಿ ಅವರು ಬೇರೆ ಕ್ರೀಡೆಯಲ್ಲಿ ತಮ್ಮದೇ ಆದ ತಂಡವನ್ನು ಸಹ ಖರೀದಿಸಿದ್ದಾರೆ. ಈ ಮೂಲಕವೂ ಅವರು ಭಾರೀ ಸುದ್ದಿಯಲ್ಲಿದ್ದಾರೆ.

E1 ರೇಸ್‌ಬೋಟ್ ಚಾಂಪಿಯನ್‌ಶಿಪ್‌ನಲ್ಲಿ ಕೊಹ್ಲಿ ತಂಡವನ್ನು ಖರೀದಿಸಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ ಸ್ಟಾರ್ ಟೆನಿಸ್ ಆಟಗಾರರಾದ ರಾಫೆಲ್ ನಡಾಲ್ ಮತ್ತು ಟಾಮ್ ಬ್ರಾಡಿ ಕೂಡ ತಂಡವನ್ನು ಹೊಂದಿದ್ದಾರೆ.

Team India Chasing Star Virat Kohli Joins E1 Raceboat Championship

ವಿರಾಟ್ ಬೋಟಿಂಗ್ ಸ್ಪರ್ಧೆಗಾಗಿ 'ದಿ ಬ್ಲೂ ರೈಸಿಂಗ್ ಟೀಮ್' ಅನ್ನು ಖರೀದಿಸಿದ್ದಾರೆ, ಇದರ ಉದ್ದೇಶ ಸಮುದ್ರ ಸಂರಕ್ಷಣೆ ಮತ್ತು ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಉಂಟಾಗುವ ಅಪಾಯದ ಕಡೆಗೆ ಗಮನ ಸೆಳೆಯುವುದಾಗಿದೆ. "ನಾನು ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಲು, ಜನರನ್ನು ಪ್ರೇರೇಪಿಸಲು ಬಯಸುತ್ತೇನೆ".

"ಅಲ್ಲದೆ ಸುಸ್ಥಿರತೆಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಬಯಸುತ್ತೇನೆ. ನಾನು ಈ ಬಗ್ಗೆ ಹೆಚ್ಚು ಹೆಚ್ಚು ಉತ್ಸುಕನಾಗಿದ್ದೇನೆ. ನಮ್ಮ ಪುರುಷ ಮತ್ತು ಮಹಿಳಾ ಪೈಲಟ್‌ಗಳನ್ನು ಹುರಿದುಂಬಿಸಲು ನಾನು ಸಿದ್ಧನಾಗಿದ್ದೇನೆ" ಎಂದು ಕೊಹ್ಲಿ ತಿಳಿಸಿದ್ದಾರೆ.

ಟಾಮ್ ಬ್ರಾಡಿ, ರಾಫೆಲ್ ನಡಾಲ್, ಸೆರ್ಗಿಯೋ ಪೆರೆಜ್

ಟಾಮ್ ಬ್ರಾಡಿ, ರಾಫೆಲ್ ನಡಾಲ್, ಸೆರ್ಗಿಯೋ ಪೆರೆಜ್, ಸ್ಟೀವ್ ಅಕಿ ಮತ್ತು ಡಿಡಿಯರ್ ಡ್ರೋಗ್ಬಾ ಅವರ ತಂಡಗಳ ವಿರುದ್ಧ ಹೋರಾಡಲು ನಾನು ಎದುರು ನೋಡುತ್ತಿದ್ದೇನೆ. ನಾವು ನೀರಿನ ಮೇಲೆ ಹಾರಲಿದ್ದೇವೆ ಎಂದು ಕೊಹ್ಲಿ ಹೇಳಿದರು. ಬ್ಲೂ ರೈಸಿಂಗ್ ಗೆಲ್ಲಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕಾಗುತ್ತದೆ ಎಂದಿದ್ದಾರೆ.

E1 ರೇಸ್ ಎರಡು ದಿನಗಳವರೆಗೆ ನಡೆಯುತ್ತದೆ. ಮೊದಲ ದಿನ ಅಭ್ಯಾಸ ನಡೆಯಲಿದ್ದು, ಎರಡನೇ ದಿನ ಫೈನಲ್ ಪಂದ್ಯ ನಡೆಯಲಿದೆ. ಹೆಚ್ಚಿನ E1 ಈವೆಂಟ್‌ಗಳು ಶುಕ್ರವಾರ ಮತ್ತು ಶನಿವಾರದಂದು ನಡೆಯಲಿದೆ. ಈ ಸ್ಪರ್ಧೆಗಳನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ - ಅರ್ಹತೆ, ಕ್ವಾರ್ಟರ್-ಫೈನಲ್, ಸೆಮಿಫೈನಲ್ ಮತ್ತು ಫೈನಲ್. E1 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 12 ತಂಡಗಳು (ತಲಾ ಇಬ್ಬರು ಪೈಲಟ್‌ಗಳು) ಆಡಲಿವೆ. ಚಾಂಪಿಯನ್‌ಶಿಪ್‌ನ ಕೊನೆಯಲ್ಲಿ ವಿಜೇತರಿರು ಟ್ರೋಫಿ ಗೆಲ್ಲುತ್ತಾರೆ.

12 ತಂಡಗಳಲ್ಲಿ 7 ತಂಡಗಳು ದೃಢಪಟ್ಟಿವೆ

ಒಟ್ಟು 12 ತಂಡಗಳಲ್ಲಿ 7 ತಂಡಗಳು ದೃಢಪಟ್ಟಿವೆ. ಟೀಮ್ ಬ್ಲೂ ರೈಸಿಂಗ್, ಅಕಿ ರೇಸಿಂಗ್ ಟೀಮ್, ಟೀಮ್ ಡ್ರೋಗ್ಬಾ, ಟೀಮ್ ನಡಾಲ್, ಟೀಮ್ ಪೆರೆಜ್, ವೆನಿಸ್ ರೇಸಿಂಗ್ ಟೀಮ್ ಮತ್ತು ಟೀಮ್ ಬ್ರಾಡಿ.

ಜೆಡ್ಡಾದಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ 1 ಮತ್ತು 2 ರ ಸುತ್ತುಗಳು ನಡೆಯಲಿವೆ. ವೆನಿಸ್ ನಲ್ಲಿ ಏಪ್ರಿಲ್ ಮತ್ತು ಮೇನಲ್ಲಿ 3 ಮತ್ತು 4 ರ ಸುತ್ತುಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಯುರೋಪ್, ಮೊನಾಕೊ ಮತ್ತು ರೋಟರ್‌ಡ್ಯಾಮ್ ಗಳಲ್ಲಿ 5, 6 ಹಾಗೂ ಏಳನೇ ಸುತ್ತು ಜೂನ್, ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

Story first published: Thursday, October 5, 2023, 12:34 [IST]
Other articles published on Oct 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+