Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳೆಯರೊಟ್ಟಿಗೆ ಪೋಸ್‌ ನೀಡಿದ ಭಾರತದ ಕೋಚ್‌ ರವಿ ಶಾಸ್ತ್ರಿ ಟ್ರೋಲ್‌!

Team India coach Ravi Shastri trolled over pic with two women

ಲಂಡನ್‌, ಜೂನ್‌ 04: ವಿಶ್ವ ಕಪ್‌ ಟೂರ್ನಿಯಲ್ಲಿ ಈಗಾಗಲೇ ಎಲ್ಲ ತಂಡಗಳು ಕನಿಷ್ಠ ಒಂದು ಪಂದ್ಯವನ್ನಾಡಿ ಮೈಚಳಿ ಬಿಡಿಸಿಕೊಂಡಿವೆ. ಆದರೆ, ಟೀಮ್‌ ಇಂಡಿಯಾ ಮಾತ್ರ ಇನ್ನೂ ಕಣಕ್ಕಿಳಿದಿಲ್ಲ. ಅಂದಹಾಗೆ ಭಾರತ ತಂಡದ ಮೊದಲ ಪಂದ್ಯದಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಸೌತ್‌ಹ್ಯಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ಪೈಪೋಟಿ ನಡೆಸಲು ಸಜ್ಜಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಅಂದಹಾಗೆ ಟೀಮ್‌ ಇಂಡಿಯಾದ ಈ ಬಹು ನಿರೀಕ್ಷಿತ ಪಂದ್ಯ ಆರಂಭಕ್ಕೂ ಮುನ್ನ ತಂಡದ ಮುಖ್ಯ ಕೋಚ್‌ ರವಿ ಶಾಸ್ತ್ರಿ ನೆಟ್ಟಿಗರಿಂದ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇಬ್ಬರು ಮಹಿಳೆಯರೊಟ್ಟಿಗೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಹಾಗೂ ಹಾಲಿ ಮುಖ್ಯ ಕೋಚ್‌ 'ಹ್ಯಾಂಡ್ಸಮ್‌ ಹಂಕ್‌' ರೀತಿಯಲ್ಲಿ ಪೋಸ್‌ ನೀಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಅಭಿಮಾನಿಯೊಬ್ಬ ಮತ್ತು ಆಸ್ಟ್ರೇಲಿಯಾದ ಟ್ವಿಟರ್‌ ಜನಪ್ರಿಯ ವ್ಯಕ್ತಿ ಡೆನಿಸ್‌ ಫ್ರೀಡ್ಮನ್‌ ರವಿ ಶಾಸ್ತ್ರಿ ಫೋಟೊ ಶೇರ್‌ ಮಾಡುವ ಮೂಲಕ 'ಟೀಮ್‌ ಇಂಡಿಯಾದ ವಿಶ್ವಕಪ್‌ ಪೂರ್ವಾಭ್ಯಾಸ ಭರ್ಜರಿಯಾಗೇ ಸಾಗಿದೆ' ಎಂದು ಟ್ರೋಲ್‌ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡಲೇ ಪ್ರತಿಕ್ರಿಯೆ ನಿಡಿದ್ದು, 'ಫೀಲ್ಡಿಂಗ್‌ ಅಟ್‌ ಫೈನ್‌ ಲೆಗ್‌', 'ತಂಡವು ಆನ್‌ಫೀಲ್ಡ್‌ ಮತ್ತು ಆಫ್‌ಫೀಲ್ಡ್‌ ಎಲ್ಲೆಡೆಯೂ ಆಡಲಿದೆ' ಎಂದೆಲ್ಲಾ ಟ್ವೀಟ್‌ ಮೂಲಕ ಟ್ರೋಲ್‌ ಮಾಡಲಾಗಿದೆ.

ಇನ್ನು ಪಾಕಿಸ್ತಾನ ತಂಡ ಅಭಿಮಾನಿಯೊಬ್ಬ 'ಹುಡುಗಿಯರೇ ರವಿ ಶಾಸ್ತ್ರಿ ಬಗ್ಗೆ ನೈಜ ಸತ್ಯ ತಿಳಿಯಬೇಕಾದರೆ ಅಝರ್‌ ಸಿನಿಮಾ ನೋಡಿ' ಎಂದು ವ್ಯಂಗ್ಯವಾಡಿದ್ದಾರೆ. ಫೇಸ್‌ಬುಲ್‌ನಲ್ಲೂ ಡೆನಿಸ್‌ ಫ್ರೀಡ್ಮನ್‌ ಶೇರ್‌ ಮಾಡಿರುವ ಫೋಟೊಗೆ ಶಾಸ್ತ್ರಿ ಅವರನ್ನು ಟ್ರೋಲ್‌ ಮಾಡಿರುವ ಹಲವು ಕಾಮೆಂಟ್‌ಗಳು ಹರಿದು ಬಂದಿವೆ.

ಇದಕ್ಕೂ ಮುನ್ನ ಭಾರತ ತಂಡ ಪತ್ರಿಕಾಗೋಷ್ಠಿಗೆ ನೆಟ್‌ ಬೌಲರ್‌ಗಳನ್ನು ಕಳುಹಿಸುವ ಮೂಲಕ ಕೊಂಚ ಗೊಂದಲ ಎದುರಾಗಿತ್ತು. ಪ್ರಮುಖ ಆಟಗಾರರು ಬರದೇ ಇದ್ದ ಕಾರಣಕ್ಕೆ ಮಾಧ್ಯಮದವರು ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ ಘಟನೆ ನಡೆದಿದೆ.

Story first published: Tuesday, June 4, 2019, 20:45 [IST]
Other articles published on Jun 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+