IND vs ENG: ಭಾರತ ಕೇವಲ ಸೆಮಿಫೈನಲ್ ಗೆದ್ದಿಲ್ಲ; ಅರ್ಧ ಡಜನ್ ದಾಖಲೆ ಸೃಷ್ಟಿಸಿದ ರೋಹಿತ್ ಪಡೆ
ಜೂನ್ 28 ಶುಕ್ರವಾರ, ಟಿ20 ವಿಶ್ವಕಪ್ 2024ರ ಎರಡನೇ ಸೆಮಿನಫೈಲ್‌ನಲ್ಲಿ ಭಾರತ ತಂಡವು 68 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾದ ಆಲ್ ರೌಂಡ್ ಪ್ರದರ್ಶನವು ಆಂಗ್ಲರನ್ನು ಬಗ್ಗು ಬಡಿದು 2022ರ ಟಿ 20 ವಿಶ್ವಕಪ್ ಸೆಮಿಫೈನಲ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ಫೈನಲ್ ತಲುಪಿದ್ದಲ್ಲದೆ, ಹಲವು ದಾಖಲೆಗಳನ್ನೂ ನಿರ್ಮಿಸಿದೆ.

1) ಟಿ20 ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಅತಿಹೆಚ್ಚು ರನ್‌ಗಳಿಂದ ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದಕ್ಕೂ ಮುನ್ನ ಮಿರ್‌ಪುರದಲ್ಲಿ ನಡೆದ 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ ತಂಡವು 27 ರನ್‌ಗಳಿಂದ (ಡಿಎಲ್‌ಎಸ್) ಜಯ ಸಾಧಿಸಿತ್ತು.
ಇದಾದ ಬಳಿಕ ಯಾವ ತಂಡ ಕೂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರೀ ಅಂತರದಿಂದ ನಾಕೌಟ್ ಪಂದ್ಯ ಗೆದ್ದಿಲ್ಲ.
2) ಟಿ20 ವಿಶ್ವಕಪ್‌ನಲ್ಲಿ ಸಾವಿರ ರನ್ ಗಡಿದಾಟಿದ ಬ್ಯಾಟರ್‌ಗಳು
ಸೆಮಿಫೈನಲ್ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅದ್ಭುತ ಅರ್ಧಶತಕ ಸಿಡಿಸಿ ಮಿಂಚಿದರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು.
ಈ ರನ್‌ಗಳೊಂದಿಗೆ ರೋಹಿತ್ ಶರ್ಮಾ ಎಲ್ಲಾ ಸ್ವರೂಪಗಳಲ್ಲಿ ಭಾರತದ ನಾಯಕನಾಗಿ 5000 ರನ್ ಪೂರೈಸಿದರು. ಈ ಮೂಲಕ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಕ್ಲಬ್‌ಗೆ ಸೇರಿಕೊಂಡರು.
ಇದಲ್ಲದೆ, ರೋಹಿತ್ ಶರ್ಮಾ ಟಿ 20 ವಿಶ್ವಕಪ್‌ನಲ್ಲಿ 1200 ರನ್ ಪೂರೈಸಿದರು. ವಿರಾಟ್ ಕೊಹ್ಲಿ ನಂತರ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎನಿಸಿಕೊಂಡರು.
ವಿರಾಟ್ ಕೊಹ್ಲಿ- 1216 ರನ್ (ಸ್ಟ್ರೈಕ್ ರೇಟ್: 128.81)
ರೋಹಿತ್ ಶರ್ಮಾ- 1211 ರನ್ (ಸ್ಟ್ರೈಕ್ ರೇಟ್: 132.78)
ಮಹೇಲಾ ಜಯವರ್ಧನೆ- 1016 ರನ್ (ಸ್ಟ್ರೈಕ್ ರೇಟ್: 134.74)
ಜೋಸ್ ಬಟ್ಲರ್- 1013 ರನ್ (ಸ್ಟ್ರೈಕ್ ರೇಟ್: 147.23)
3) ಟಿ20 ವಿಶ್ವಕಪ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು ಗೆಲುವುಗಳು
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇದು 7ನೇ ಗೆಲುವು. ಇದರೊಂದಿಗೆ ಒಂದೇ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ಎರಡನೇ ತಂಡ ಎಂಬ ಸಾಧನೆಯನ್ನು ಟೀಮ್ ಇಂಡಿಯಾ ಮಾಡಿದೆ. ಇದೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ 8 ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ (2024)- 8* ಗೆಲುವು
ಭಾರತ (2024)- 7* ಗೆಲುವು
ಶ್ರೀಲಂಕಾ (2009)- 6 ಗೆಲುವು
ಆಸ್ಟ್ರೇಲಿಯಾ (2010)- 6 ಗೆಲುವು
ಆಸ್ಟ್ರೇಲಿಯಾ (2021)- 6 ಗೆಲುವು
4) ಭಾರತದ ಪರ ಒಂದೇ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ. ಈ ಇಬ್ಬರು ವೇಗದ ಬೌಲರ್‌ಗಳು ಒಟ್ಟು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಭಾರತ ಪರ ಒಂದೇ ಟಿ20 ವಿಶ್ವಕಪ್ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆರ್ಷದೀಪ್ ಸಿಂಗ್ (15 ವಿಕೆಟ್) ಮೊದಲ ಸ್ಥಾನದಲ್ಲಿದ್ದು, ಬುಮ್ರಾ (13 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.
ಅರ್ಷದೀಪ್ ಸಿಂಗ್ (2024)- 15 ವಿಕೆಟ್
ಜಸ್ಪ್ರೀತ್ ಬುಮ್ರಾ (2024)- 13 ವಿಕೆಟ್
ಆರ್‌ಪಿ ಸಿಂಗ್ (2007)- 12 ವಿಕೆಟ್
ರವಿಚಂದ್ರನ್ ಅಶ್ವಿನ್ (2014)- 11 ವಿಕೆಟ್
5) ಟಿ20 ವಿಶ್ವಕಪ್‌ನಲ್ಲಿ ಭಾರತದ ಅತಿದೊಡ್ಡ (ರನ್‌ಗಳಲ್ಲಿ) ಗೆಲುವು
ಇಂಗ್ಲೆಂಡ್ ವಿರುದ್ಧ 90 ರನ್, ಕೊಲಂಬೊ, 2012
ಆಸ್ಟ್ರೇಲಿಯಾ ವಿರುದ್ಧ 73 ರನ್, ಮೀರ್ಪುರ್, 2014
ಜಿಂಬಾಬ್ವೆ ವಿರುದ್ಧ 71 ರನ್, ಮೆಲ್ಬೋರ್ನ್, 2022
ಇಂಗ್ಲೆಂಡ್ ವಿರುದ್ಧ 68 ರನ್, ಪ್ರಾವಿಡೆನ್ಸ್, 2024
ಆಫ್ರಿಕಾ ವಿರುದ್ಧ 66 ರನ್, ಅಬುಧಾಬಿ, 2021
ವೆಸ್ಟ್ ಇಂಡೀಸ್ ವಿರುದ್ಧ 74 ರನ್ , ಆಸ್ಟ್ರೇಲಿಯಾ,
6) ಟಿ20 ವಿಶ್ವಕಪ್ ನಾಕೌಟ್‌ನಲ್ಲಿ ಅತಿದೊಡ್ಡ (ರನ್‌ಗಳಲ್ಲಿ) ಗೆಲುವು
ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ 74 ರನ್, ಕೊಲಂಬೊ , 2012ರ ಸೆಮಿಫೈನಲ್
ಇಂಗ್ಲೆಂಡ್ ವಿರುದ್ಧ ಭಾರತ 68 ರನ್ , ಪ್ರಾವಿಡೆನ್ಸ್, 2024ರ ಸೆಮಿಫೈನಲ್
ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ 57 ರನ್, ದಿ ಓವಲ್, 2009ರ ಸೆಮಿಫೈನಲ್
ಶ್ರೀಲಂಕಾ ವಿರುದ್ಧ ವೆಸ್ಟ್ ಇಂಡೀಸ್ 36 ರನ್, ಕೊಲಂಬೊ , 2012ರ ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications