KL Rahul: ಮಗುವಿನ ನಿರೀಕ್ಷೆಯಲ್ಲಿ ರಾಹುಲ್, ಅಥಿಯಾ ದಂಪತಿ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ಚಿಂತೆಯ ಗೆರೆಗಳು ಮೂಡುವಂತೆ ಮಾಡಿವೆ. ಆದರೆ ಈ ಚಿಂತೆಯ ಗೆರೆಗಳ ಮಧ್ಯದಲ್ಲೇ ಭವಿಷ್ಯದ ಆಷಾ ಕಿರಣ ಸಹ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತದ ಭರವಸೆಯ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ಸ್ವತಃ ರಾಹುಲ್ ಪತ್ನಿ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ.
ಅಥಿಯಾ ಶೆಟ್ಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂದು ಅವರು ಶುಕ್ರವಾರ ಬಹಿರಂಗ ಪಡಿಸಿದ್ದಾರೆ. ಅವರ ಮನೆಗೆ ಪುಟ್ಟ ಅತಿಥಿ ಆಗಮನವಾಗಲಿದೆ. ಈ ಮಾಹಿತಿಯನ್ನು ರಾಹುಲ್ ತಮ್ಮ ಇನ್‌ಸ್ಟಾ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. ನಮ್ಮ ಕನಸು 2025ರಲ್ಲಿ ಭೂಮಿಗೆ ಬರಲಿದೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ 23 ಜನವರಿ 2023 ರಂದು ವಿವಾಹವಾದರು. ಇವರಿಬ್ಬರ ವಿವಾಹವು ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ನಡೆದಿತ್ತು. ಈಗ ಆಸ್ಟ್ರೇಲಿಯಾ ಸರಣಿಗೂ ಮುನ್ನ ಮಗು ಜನನದ ಖುಷಿ ಸುದ್ದಿಯನ್ನು ರಾಹುಲ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ರಾಹುಲ್ ಮದುವೆಯೂ ನಡೆದಿತ್ತು. ಇದೀಗ ಆಸ್ಟ್ರೇಲಿಯಾ ಸರಣಿಗೂ ಮುನ್ನ ತಮ್ಮ ಮೊದಲ ಮಗುವಿನ ಜನನದ ಸಂತಸವನ್ನೂ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವು ಪ್ರತಿಕ್ರಿಯೆಗಳನ್ನು ಬಾಲಿವುಡ್ ಜನ ನೀಡಿದ್ದಾರೆ. ಇನ್ನು ದಂಪತಿಗಳಿಗೆ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಅಭಿನಂದನೆಗಳ ಮೂಲಕ ನೀಡುತ್ತಿದ್ದಾರೆ. ಅನೇಕ ಬಳಕೆದಾರರು ದಂಪತಿಯನ್ನು ಅಭಿನಂದಿಸುವ ಹೃದಯ ಎಮೋಜಿಗಳನ್ನು ಹಾಕಿದ್ದಾರೆ.
ಕೆಎಲ್ ರಾಹುಲ್ ಟೀಮ್ ಇಂಡಿಯಾದ ರಾಹುಲ್ ಹಾಗೂ ಅಥೀಯಾ ಶೆಟ್ಟಿ ಜೋಡಿಯ ಬಗ್ಗೆ 2019ರಲ್ಲಿ ಮೊದಲ ಬಾರಿಗೆ ಊಹಾಪೋಹಗಳು ಆರಂಭವಾದವು. ಈ ಜೋಡಿ ಕೆಲವು ವರ್ಷಗಳ ಕಾಲ ತಿರುಗಾಡಿತು. ಈ ವೇಳೆ ಹಲವು ಕ್ಯಾಮೆರಾಗಳಲ್ಲಿ ಕಾಣಿಸಿಕೊಂಡ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ಸ್ಟಾರ್ ಸೆಲಬ್ರಿಟಿಗಳು ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಇಬ್ಬರೂ ಬರ್ತಡೆ ಶುಭಾಷಯಗಳನ್ನು ವಿಶೇಷ ರೀತಿಯಲ್ಲಿ ನೀಡುವುದ ಕಾಮನ್ ಆಗಿತ್ತು. ಕೊನೆಗೆ ಈ ಇಬ್ಬರ ಪ್ರೀತಿಗೆ ಹಿರಿಯ ಒಪ್ಪಿಗೆಯ ಮುದ್ರೆ ಬಿದ್ದು, ದಾಂಪತ್ಯ ಎಂಬ ಧೋಣಿಯಲ್ಲಿ ಇಬ್ಬರೂ ಪ್ರಯಾಣಿಸುವಂತೆ ಆಯಿತು.
ಆಸೀಸ್ ಪ್ರವಾಸದಲ್ಲಿ ರಾಹುಲ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಭಾರತ ಎ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಆದರೆ ಎರಡನೇ ಅನಧಿಕೃತ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲೂ ಕೆಎಲ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಆದರೂ ಸಹ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳೆ ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯಬಹುದು. ಇವರು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಸೇರುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications