For Quick Alerts
ALLOW NOTIFICATIONS  
For Daily Alerts
 

IND vs ENG 5Th Test: ಓವಲ್‌ನಲ್ಲಿ ಗಿಲ್‌ ಪಡೆ ಕಮಾಲ್‌: ಸರಣಿಯಲ್ಲಿ ಸಮಬಲ ಸಾಧಿಸಿದ ಭಾರತ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ ಅಬ್ಬರಿಸಿದೆ. ಆತಿಥೇಯ ತಂಡ ಪಂದ್ಯ ಗೆಲ್ಲಲು 35 ರನ್‌ಗಳ ಅವಶ್ಯಕತೆ ಇತ್ತು. ಆದರೆ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್‌ಗಳ ಅಮೋಘ ಬಿಗುವಿನ ದಾಳಿಯ ಪರಿಣಾಮ ಭರ್ಜರಿ ಜಯ ದಾಖಲಿಸಿದೆ. ಭಾರತ ಕೊನೆಯ ಟೆಸ್ಟ್‌ ಪಂದ್ಯವನ್ನು 6 ರನ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮೂಲಕ ಟೀಮ್ ಇಂಡಿಯಾ ಆಂಡರ್ಸನ್‌ ಹಾಗೂ ತೆಂಡುಲ್ಕರ್‌ ಸರಣಿಯಲ್ಲಿ ಸಮಬಲ ಸಾಧಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-2 ರಿಂದ ಸಮಬಲ ಸಾಧಿಸಿದೆ.

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಕೊನೆಯ ದಿನದಾಟದಂದು ಕಮಾಲ್ ಪ್ರದರ್ಶನ ನೀಡಿದರು. ಇವರ ಬೆಂಕಿಯಂತೆ ಬರುತ್ತಿದ್ದ ಎಸೆತಗಳನ್ನು ಎದುರಿಸುವಲ್ಲಿ ಇಂಗ್ಲೆಂಡ್‌ ಬ್ಯಾಟರ್‌ಗಳು ವಿಫಲರಾದರು. 35 ರನ್‌ ಗಳ ಮೊತ್ತ ಆತಿಥೇಯ ತಂಡಕ್ಕೆ ದೊಡ್ಡ ಬೆಟ್ಟದಂತೆ ಕಾಣಲು ಆರಂಭಿಸಿತು. ಈ ವೇಳೆ ಸಿರಾಜ್‌ ತಮ್ಮ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿ, ಐದು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

Team India Dominates England in Fifth Test Secures Resounding Victory

ಇಂಗ್ಲೆಂಡ್‌ ತಂಡ ಐದನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 339 ರನ್‌ ಆಟ ಮುಂದುವರೆಸಿತು. ಮೊದಲ ಓವರ್‌ ಪ್ರಸಿದ್ಧ ಕೃಷ್ಣಾ ಬೌಲ್ ಮಾಡಿದರು. ಈ ವೇಳೆ ಜೇಮಿ ಓವರ್ಟನ್‌ ಎರಡು ಬೌಂಡರಿ ಬಾರಿಸಿ ಅಬ್ಬರಿಸಿದರು. ಆದರೆ ಇನ್ನೊಂದು ತುದಿಯಿಂದ ಬೌಲಿಂಗ್ ಮಾಡಿದ ಸಿರಾಜ್‌ ಬಿಗುವಿನ ದಾಳಿ ನಡೆಸಿದರು. ಇವರು ಜೇಮಿ ಸ್ಮಿತ್‌ಗೆ ಹಾಫ್ ಸ್ಟಂಪ್ ಆಚೆಗೆ ಸತತ ಎಸೆತಗಳನ್ನು ಹಾಕಿ ಪ್ರಶ್ನೆಗಳ್ನು ಕೇಳಿದರು. ಆದರೆ ಸ್ಮಿತ್‌ ಮೂರನೇ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಧ್ರುವ ಜುರೇಲ್‌ಗೆ ಕ್ಯಾಚ್‌ ನೀಡಿದರು.

ಸ್ಮಿತ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಗಸ್ ಅಟ್ಕಿನ್ಸನ್ ಸಿರಾಜ್‌ ಅವರ ಎಸೆತವನ್ನು ತಪ್ಪಾಗಿ ಕಟ್ ಮಾಡಿದರು. ಚೆಂಡು ರಾಹುಲ್‌ ಅವರ ಮುಂದೆ ಬಿದ್ದಿದ್ದರಿಂದ ಬಚಾವ್ ಆದರು. ಟೀಮ್ ಇಂಡಿಯಾದ ಬೌಲರ್‌ಗಳು ಈ ಹಂತದಲ್ಲಿ ಬಿಗುವಿನ ದಾಳಿ ನಡೆಸಿದರು. ಜೇಮಿ ಓವರ್ಟನ್‌ ಅವರಿಗೆ ಮೊಹಮ್ಮದ್ ಸಿರಾಜ್ ತಮ್ಮ ಕೊನೆಯ ದಿನದಾಟದ ಎರಡನೇ ಓವರ್‌ನಲ್ಲಿ ಖೆಡ್ಡಾ ತೋಡಿದರು. ಈ ವೇಳೆ ಎಸೆತಗಳನ್ನು ಹೊರಗಡೆ ಹಾಕಿ, ನಂತರ ಐದನೇ ಎಸೆತವನ್ನು ಒಳಗೆ ತಂದರು. ಓವರ್ಟನ್‌ ಅವರಿಗೆ ಸಿರಾಜ್‌ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಸಿರಾಜ್‌ ಪಂಚ್

ಕೆಳ ಕ್ರಮಾಂಕದಲ್ಲಿ ಗಸ್ ಅಟ್ಕಿನ್ಸನ್ 17 ರನ್ ಬಾರಿಸಿದ್ದಾಗ ಮೊಹಮ್ಮದ್‌ ಸಿರಾಜ್‌ ಅವರು ತೋಡಿದ ಖೆಡ್ಡಾಗೆ ಬಲಿಯಾದರು.ಭಾರತ ಈ ಪಂದ್ಯವನ್ನು 6 ರನ್‌ಗಳಿಂದ ಪಂದ್ಯ ಗೆದ್ದ ಇತಿಹಾಸ ಸೃಷ್ಟಿಸಿತು. ಭಾರತದ ಪರ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್‌ 104 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಇನ್ನು ಕನ್ನಡಿಗ ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್‌ ಕಬಳಿಸಿದರು. ಟೀಮ್ ಇಂಡಿಯಾದ ವೇಗಿ ಸಿರಾಜ್‌ ಬಿಗುವಿನ ದಾಳಿಯ ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Monday, August 4, 2025, 16:26 [IST]
Other articles published on Aug 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+