ಸಮರಾಭ್ಯಾಸದಲ್ಲಿ ಅಬ್ಬರಿಸಿದ ಸೂರ್ಯ ಪಡೆ; ಇಶಾನ್ 265 ಸ್ಟ್ರೈಕ್ ರೇಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್
ಮುಂಬೈ: ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾ ಟಿ20 ವಿಶ್ವಕಪ್ ಆಯೋಜಿಸಲಿವೆ. ಈ ಟೂರ್ನಿ ಆರಂಭಕ್ಕೂ ಮುನ್ನವೇ ಎಲ್ಲ ತಂಡಗಳು ಅಭ್ಯಾಸ ಪಂದ್ಯವನ್ನು ಆಡುತ್ತಿವೆ. ಭಾರತ ಸಹ ಬುಧವಾರ, ದಕ್ಷಿಣ ಆಫ್ರಿಕಾ ವಿರುದ್ಧ ಸಮರಾಭ್ಯಾಸ ನಡೆಸಿತು. ಈ ವೇಳೆ ಸಂಘಟಿತ ಆಟದ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಪಡೆ 30 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಅಬ್ಬರಿಸಿದೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕೆ ಇಳಿದರು. ಇವರು ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಆರಂಭವನ್ನು ನೀಡಿತು.

ಮೊದಲ ವಿಕೆಟ್‌ಗೆ ಇಶಾನ್, ಅಭಿಷೇಕ್ ಜೋಡಿ 5.4 ಓವರ್‌ಗಳಲ್ಲಿ 80 ರನ್ ಸಿಡಿಸಿತು. ಈ ವೇಳೆ ಇಶಾನ್ ಕಿಶನ್ 265ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದರು. ಇವರು ಆಡಿದ ಕೇವಲ 20 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರು. ಅಭಿಷೇಕ್ ಶರ್ಮಾ 24 ರನ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು.
ಸಂಘಟಿತ ಬ್ಯಾಟಿಂಗ್
ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳಿರುವ ತಿಲಕ್ ವರ್ಮಾ ಸೊಗಸಾಗಿ ಬ್ಯಾಟಿಂಗ್ ನಡೆಸಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟ್ ಆದರು. ನಾಯಕ ಸೂರ್ಯಕುಮಾರ್ ಯಾದವ್ 2 ಸಿಕ್ಸರ್ ಸೇರಿದಂತೆ 30 ರನ್ ಬಾರಿಸಿ ಮಿಂಚಿದರು. ಅಕ್ಷರ್ ಪಟೇಲ್ ಅಜೇಯ 35, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 30 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 240 ರನ್ ಸಿಡಿಸಿತು.
ಕಳಪೆ ಆರಂಭ
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಜಾರ್ಜ್ ಲಿಂಡೆ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ನಾಯಕ ಐಡನ್ ಮಾರ್ಕ್ರಮ್ ಹಾಗೂ ರಿಯಾನ್ ರಿಕಲ್ಟನ್ ಜೊಡಿ 65 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ ನಾಯಕ 38 ರನ್ ಬಾರಿಸಿ ಔಟ್ ಆದರು. ರಿಕಲ್ಟನ್ 44 ರನ್ ಗಳಿಗೆ ಸುಸ್ತಾದರು. ಮಧ್ಯಮ ಕ್ರಮಾಂಕದಲ್ಲಿ ಜಾಸನ್ ಸ್ಮಿತ್ 35, ಟ್ರಿಸ್ಟನ್ ಸ್ಟಬ್ಸ್ 45, ಆಲ್‌ರೌಂಡರ್ ಮಾರ್ಕೊ ಜಾನ್ಸನ್ 16 ಎಸೆತಗಳಲ್ಲಿ 31 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 210 ರನ್ ಸೇರಿಸಿತು. ಭಾರತದ ಪರ ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದರು. ಟಿ20 ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾದ ಪ್ರದರ್ಶನ ಬೂಸ್ಟ್ ನೀಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications