Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್ನೂ ಟೀಮ್ ಇಂಡಿಯಾಕ್ಕೆ ಇದೆ ಬೆಂಗಳೂರು ಟೆಸ್ಟ್‌ ಗೆಲ್ಲುವ ಅವಕಾಶ

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಯಿತು. ಈ ಪ್ರದರ್ಶನವನ್ನು ಕಂಡು ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ ಒಂದೇ ಈ ಟೆಸ್ಟ್‌ ಪಂದ್ಯವನ್ನು ಟೀಮ್ ಇಂಡಿಯಾ ಈ ಟೆಸ್ಟ್‌ ಗೆಲ್ಲಬಹುದಾ?

ಬೆಂಗಳೂರು ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 46 ರನ್‌ ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 180 ರನ್‌ ಸೇರಿಸಿದೆ. ಅಲ್ಲದೆ 134 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಇನ್ನು ಮೂರನೇ ದಿನದಾಟದಲ್ಲಿ ನ್ಯೂಜಿಲೆಂಡ್ ತನ್ನ ಮುನ್ನಡೆಯನ್ನು ಹಿಗ್ಗಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.

Team India Eyes Comeback in Bangalore Test Despite Early Setback

ಆಕ್ರಮಣಕಾರಿ ಆಟ

ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲೂ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದೆ. ಇದರಿಂದ ತಂಡದ ಮನೋಬಲದ ಮೇಲೆ ಪರಿಣಾಮ ಬಿದ್ದಿದೆ. ಎಲ್ಲ ಆಟಗಾರರ ಪ್ರದರ್ಶನದಲ್ಲೂ ಸ್ಥಿರತೆ ಕಂಡು ಬಂದಿದೆ. ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ತಂಡಕ್ಕೆ ರನ್‌ ಬಾರಿಸಿ ನೆರವಾಗುತ್ತಿದ್ದಾರೆ. ಇದಕ್ಕೆ ಕಾರಣ ತಂಡದ ಅಪ್ರೋಚ್‌. ನೂತನ ಕೋಚ್‌ ಗೌತಮ್‌ ಗಂಭೀರ್‌ ಆಗಮನದಿಂದ ಟೀಮ್ ಇಂಡಿಯಾ ಅಗ್ರೇಸಿವ್‌ ಅಪ್ರೋಚ್‌ ತನ್ನದಾಗಿಸಿಕೊಂಡಿದೆ. ಟೀಮ್ ಇಂಡಿಯಾ ಮೈದಾನದಲ್ಲಿ ಅಷ್ಟೇ ಅಲ್ಲ, ಮೈದಾನದ ಹೊರಗೂ ರಣ ತಂತ್ರಗಳನ್ನು ಹೆಣೆಯುವುದರಲ್ಲಿ ಪರಿಣಿತಿ ಪಡೆದಿದೆ.

ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್ ಜೊತೆಗೆ ತಂಡವನ್ನು ಆಕ್ರಮಣಕಾರಿ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವೇ ಸಾಕ್ಷಿ. ಕಾನ್ಪುರನಲ್ಲಿ ನಡೆದ ಟೆಸ್ಟ್‌ ಪಂದ್ಯ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ.

Team India Eyes Comeback in Bangalore Test Despite Early Setback

ಕಾನ್ಪುರ ಟೆಸ್ಟ್‌

ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯಕ್ಕೂ ಮಳೆ ಕಾಟ ನೀಡಿತ್ತು. ಈ ಪಂದ್ಯಕ್ಕೆ ಮೂರು ದಿನ ಮಳೆ ಕಾಟ ನೀಡಿತ್ತು. ಕೊನೆಯ ಎರಡೇ ದಿನದಲ್ಲಿ ಪಂದ್ಯ ಏನು ಮುಗಿಯುತ್ತದೆ ಡ್ರಾದತ್ತ ಮುಖ ಮಾಡಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರೋಹಿತ್ ಶರ್ಮಾ ಆಡಿದ ಧಾಟಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತ್ತು. ಅಟ್ಯಾಕಿಂಗ್ ಕ್ರಿಕೆಟ್ ಆಡಿದ ರೋಹಿತ್ ಶರ್ಮಾ ಪಡೆ ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಭಾರತ ತಂಡವು ಇದೇ ರೀತಿಯ ಆಟ ಪ್ರದರ್ಶಿಸಿದರೆ, ನ್ಯೂಜಿಲೆಂಡ್ ಅನ್ನು ಸೋಲಿಸಬಹುದು.

ಟೀಮ್ ಇಂಡಿಯಾದಲ್ಲಿ ನುರಿತ ಬೌಲಿಂಗ್ ಪಡೆ ಇದೆ. ಈ ಪಡೆ ಎದುರಾಳಿ ಬ್ಯಾಟರ್‌ಗಳ ನಿದ್ದೆ ಗೆಡಿಸಬಲ್ಲದು. ಯಾರ್ಕರ್‌ ಸ್ಪೇಷಲಿಸ್ಟ್‌ ಖ್ಯಾತಿಯ ಬುಮ್ರಾ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇವರಿಗೆ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಒಂದೇ ಒಂದು ವಿಕೆಟ್‌ ಪಡೆಯಲು ಸಾಧ್ಯವಾಗಿಲ್ಲ. ಇನ್ನು ಈ ಪಿಚ್‌ನಲ್ಲಿ ಸಾಕಷ್ಟು ಆಡಿದ ಅನುಭವಿ ಸಿರಾಜ್‌ ತಂಡದಲ್ಲಿ ಇದ್ದಾರೆ. ಇವರು ಸಹ ತಮ್ಮ ಪರ್ಫೆಕ್ಟ್ ಹಾಗೂ ಲೈನ್‌ನಿಂದ ಎದುರಾಳಿಗಳಿಗೆ ಕಾಟ ನೀಡಬಲ್ಲರು.

ಟೀಮ್ ಇಂಡಿಯಾದಲ್ಲಿ ಅನುಭವಿ ಸ್ಪಿನ್‌ ಬೌಲರ್‌ಗಳು ಇದ್ದಾರೆ. ತವರಿನಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲ ಕ್ಲಾಸಿಕ್ ಸ್ಪಿನ್ ಬೌಲರ್‌ಗಳು ಇದ್ದಾರೆ. ಆಫ್‌ ಸ್ಪಿನ್‌ ಬೌಲರ್‌ ರವಿಚಂದ್ರನ್ ಅಶ್ವಿನ್‌ ಎದುರಾಳಿ ಬ್ಯಾಟರ್‌ಗಳ ನಿದ್ದೆ ಗೆಡಿಸಬಲ್ಲ ಬೌಲರ್. ಇನ್ನು ತಮ್ಮ ಸರಿಯಾದ ಲೈನ್‌ ಲೆಂಥ್‌ನಿಂದಲೇ ಹೆಸರುವಾಸಿಯಾಗಿರುವ ರವೀಂದ್ರ ಜಡೇಜಾ ಹಾಗೂ ರಿಸ್ಟ್‌ ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್ ಕರಾರುವಕ್ ದಾಳಿಯನ್ನು ನಡೆಸಿ ವಿಕೆಟ್ ಬೇಟೆ ನಡೆಸಬಲ್ಲರು.

Story first published: Friday, October 18, 2024, 9:40 [IST]
Other articles published on Oct 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+