Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಲವು ದಾಖಲೆಗಳನ್ನು ನಿರ್ಮಿಸಿದ ಶುಭಮನ್‌ ಗಿಲ್‌, ರಿಷಭ್‌ ಪಂತ್‌

ಮುಂಬೈನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ನ್ಯೂಜಿಲೆಂಡ್‌ ಸರಣಿಯಲ್ಲಿ ಅಮೋಗ ಪ್ರದರ್ಶನ ನೀಡಿದರೂ, ಮೂರನೇ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಮೂರನೇ ದಿನದಾಟದಲ್ಲಿ ರೋಹಿತ್‌ ಪಡೆ ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.

ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಈ ವೇಳೆ ಭಾರತದ ಭರವಸೆಯ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌ ಹಾಗೂ ರಿಷಭ್‌ ಪಂತ್‌ ಅವರು ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಈ ವೇಳೆ ಇಬ್ಬರೂ ಆಟಗಾರರು ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.

Team India Eyes Victory in Mumbai Test as Rishabh Pant and Shubman Gill Break Records

ವೇಗದ ಅರ್ಧಶತಕದ ದಾಖಲೆ

ರಿಷಭ್ ಪಂತ್ ಮೊದಲ ಇನಿಂಗ್ಸ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಇವರು ನ್ಯೂಜಿಲೆಂಡ್ ವಿರುದ್ಧ ಭಾರತದ ಬ್ಯಾಟರ್‌ ಒಬ್ಬ ವೇಗವಾಗಿ ಅರ್ಧಶತಕ ಬಾರಿಸಿದ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಂತ್ ಕೇವಲ 36 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು ಈ ಮೂಲಕ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಂತ್‌ ಅವರ 7ನೇ ಅರ್ಧಶತಕವಾಗಿದೆ.

ಈ ಮೂಲಕ ಪಂತ್ ಯಶಸ್ವಿ ಜೈಸ್ವಾಲ್ ದಾಖಲೆ ಮುರಿದಿದ್ದಾರೆ. ಈ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಜೈಸ್ವಾಲ್ ಕೇವಲ 41 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

Team India Eyes Victory in Mumbai Test as Rishabh Pant and Shubman Gill Break Records

ಈ ಅರ್ಧಶತಕದೊಂದಿಗೆ ಪಂತ್ ಮಹೇಂದ್ರ ಸಿಂಗ್ ಧೋನಿ ಅವರ ದೊಡ್ಡ ದಾಖಲೆಯನ್ನು ಮುರಿದರು. ಪಂತ್ ಟೆಸ್ಟ್ ಪಂದ್ಯಗಳಲ್ಲಿ 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 50ಕ್ಕೂ ಅಧಿಕ ರನ್‌ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಕ್ರಿಕೆಟ್‌ನ ಲಾಂಗರ್‌ ಫಾರ್ಮೆಟ್‌ನಲ್ಲಿ ಪಂತ್‌ ಐದು ಬಾರಿ ನೂರಕ್ಕೂ ಹೆಚ್ಚು ಸ್ಟ್ರೈಕ್‌ ರೇಟ್‌ನಲ್ಲಿ ಅರ್ಧಶತಕ ಅಥವಾ ಅದಕ್ಕಿಂತ ದೊಡ್ಡ ರನ್‌ ಕಲೆ ಹಾಕಿದ್ದಾರೆ.

ಗಿಲ್‌ ದಾಖಲೆ

ಶುಭಮನ್‌ ಗಿಲ್‌ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 90 ರನ್‌ ಸಿಡಿಸಿದರು. ಇವರು ಶತಕ ಬಾರಿಸುವಲ್ಲಿ ವಿಫಲರಾದರೂ, ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಗಿಲ್‌ 25ನೇ ವಯಸ್ಸಿನಲ್ಲಿ ನರ್ವಸ್ 90ಗೆ ನಾಲ್ಕನೇ ಬಾರಿ ಬಲಿಯಾಗಿದ್ದಾರೆ. ಇಷ್ಟೇ ವಯಸ್ಸಿನಲ್ಲಿ 90 ರನ್‌ಗಳಿಗೆ ಅತಿ ಹೆಚ್ಚು ಬಾರಿ ಔಟ್ ಆದ ಕೀರ್ತಿ ರಿಷಭ್‌ ಪಂತ್‌ ಅವರಿಗೆ ಸಲ್ಲುತ್ತದೆ. ಇವರು 6 ಬಾರಿ 90 ಕ್ಕೂ ಹೆಚ್ಚು ರನ್‌ಗಳಿಗೆ ಔಟ್ ಆಗಿದ್ದಾರೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚು ರನ್ ಗಳಿಸುವ ವಿಷಯದಲ್ಲಿ ಶುಭ್‌ಮನ್ ಗಿಲ್ ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಗಿಲ್ ಈಗ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಗಿಲ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ರೋಹಿತ್ ಶರ್ಮಾ, ಸೌದ್ ಶಕೀಲ್, ಬೆನ್ ಸ್ಟೋಕ್ಸ್, ರಚಿನ್ ರವೀಂದ್ರ ಮತ್ತು ಧನಂಜಯ್ ಡಿ ಸಿಲ್ವಾ ಅವರನ್ನು ಹಿಂದಿಕ್ಕಿದ್ದಾರೆ.

Story first published: Saturday, November 2, 2024, 19:34 [IST]
Other articles published on Nov 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+