ಟೀಮ್ ಇಂಡಿಯಾಕ್ಕೆ ಶುರುವಾಯಿತು ಡಬಲ್ ಟೆನ್ಷನ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪರ್ತ್‌ನಲ್ಲಿ ನವೆಂಬರ್ 22 ರಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಪೂರ್ಣ ತಯಾರಿ ನಡೆಸಿದೆ. ಆದರೆ ಟೀಮ್ ಮ್ಯಾನೇಜ್ಮೆಂಟ್‌ಗೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಗಾಯಾಳುಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಟೆನ್ಷನ್ ನಿಜಕ್ಕೂ ಹೆಚ್ಚಾಗುತ್ತಿದೆ. ಮೊದಲ ಆರಂಭಿಕರಾಗಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಚಿಂತೆ ಇತ್ತು ಆದರೆ ಈಗ ಭಾರತ ತಂಡಕ್ಕೆ ಡಬಲ್ ಟೆನ್ಷನ್ ಆರಂಭವಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಪರ್ತ್ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಯುವುದು ಡೌಟ್. ಇವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಜಸ್ಪ್ರಿತ್ ಬುಮ್ರಾ ಅವರು ಮುನ್ನಡೆಸುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು ಎಂಬ ಚಿಂತೆ ತಂಡದ ಮ್ಯಾನೇಜ್ಮೆಂಟ್ ಮುಂದೆ ಇದ್ದಾಗಲೇ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ.

ಎರಡನೇ ಟೆಸ್ಟ್‌ಗೆ ಗಿಲ್ ಫಿಟ್?
ಭಾರತ ಅಭ್ಯಾಸ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ಸ್ಲಿಪ್‌ನಲ್ಲಿ ಕ್ಯಾಚ್ ಪಡೆಯುವಾಗ ಹೆಬ್ಬೆರಳಿಗೆ ಗಾಯವಾಗಿದೆ. ಹೀಗಾಗಿ ಇವರು ಮೊದಲ ಟೆಸ್ಟ್ ಪಂದ್ಯದಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಕ್ರಿಕ್ ಇನ್ಫೋ ವರದಿಯ ಪ್ರಕಾರ ಗಿಲ್ ಡಿಸೆಂಬರ್ 6 ರಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯಬಹುದು. ಈ ನಿಟ್ಟಿನಲ್ಲಿ ಇವರು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಗಿಲ್ ಗಾಯಗೊಂಡ ನಂತರ ಟೀಂ ಇಂಡಿಯಾದ ಸಮಸ್ಯೆಗಳು ಹೆಚ್ಚಿವೆ. ಈಗ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಬೇಕಾಗಿದೆ.
ಇನಿಂಗ್ಸ್ ಆರಂಭಿಸುವುದು ಯಾರು?
ಟೀಂ ಇಂಡಿಯಾದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಆರಂಭಿಕ ಹಾಗೂ ಮೂರನೇ ಕ್ರಮಾಂಕ ಸದ್ಯ ಖಾಲಿ ಇದ್ದು ಈ ಸ್ಥಾನವನ್ನು ತುಂಬುವುದು ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆ ನೋವಾಗಿದೆ. ಟೀಮ್ ಇಂಡಿಯಾ ಪರ ಅಭಿಮನ್ಯು ಈಶ್ವರನ್ ಇನಿಂಗ್ಸ್ ಆರಂಭಿಸುವುದು ಎಂದು ಎಲ್ಲರೂ ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ಈ ಆಟಗಾರನಿಗೆ ಟೀಮ್ ಇಂಡಿಯಾ ಮಣೆ ಹಾಕಬಹುದು. ಆದರೆ ಆಸೀಸ್ ಪ್ರವಾಸದಲ್ಲಿ ಅನುಭವಿಗಳಿಗೆ ಮಣೆ ಹಾಕಲು ಮ್ಯಾನೇಜ್ಮೆಂಟ್ ಮನಸ್ಸು ಮಾಡಿದರೆ, ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಬಹುದು.
ಮೂರನೇ ಕ್ರಮಾಂಕದಲ್ಲಿ ಹೊಸ ಮುಖಕ್ಕೆ ಸಿಗುತ್ತಾ ಮನ್ನಣೆ
ಈ ಇಬ್ಬರಲ್ಲಿ ಒಬ್ಬರು ಇನಿಂಗ್ಸ್ ಆರಂಭಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಭಿಮನ್ಯು ಈಶ್ವರನ್ ಇನಿಂಗ್ಸ್ ಆರಂಭಿಸಿದರೆ, ಮೂರನೇ ಕ್ರಮಾಂಕಕ್ಕೂ ಕರ್ನಾಟಕದ ಸ್ಟಾರ್ ಆಟಗಾರ ರಾಹುಲ್ ಮೂರನೇ ಸ್ಥಾನಕ್ಕೂ ಸೂಟ್ ಆಗುವ ಆಟಗಾರ. ಇವರು ಈಗಾಗಲೇ ಭಾರತದ ಪರ ಮೂರು ಇನಿಂಗ್ಸ್‌ಗಳಲ್ಲಿ ಭಾರತದ ಪರ ಇನಿಂಗ್ಸ್ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications