ಭಾರತ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾದ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬರ್ಮಿಂಗ್ ಹ್ಯಾಮ್ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ, ಸರಣಿಯಲ್ಲಿ ಮೊದಲ ಜಯ ಸಾಧಿಸಿದೆ. ಆದರೆ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 22 ರನ್ ಸೋಲು ಕಂಡಿತ್ತು. ಈಗ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ವೇಳೆ ಟೀಮ್ ಇಂಡಿಯಾಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಮೂರೇ ಟೆಸ್ಟ್ ಪಂದ್ಯಗಳನ್ನು ಆಡುವುದಾಗಿ ತವರಿನಲ್ಲಿ ತಿಳಿಸಿದ್ದ ಜಸ್ಪ್ರೀತ್ ಬುಮ್ರಾ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ. ಹೀಗಾಗಿ ಇವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದೇ ವೇಳೆ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇವರ ಎಡಗೈಗೆ ಗಾಯವಾಗಿದ್ದರಿಂದ ಇವರು ಪದಾರ್ಪಣೆ ಮಾಡುವ ಅವಕಾಶ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ.

ಅರ್ಷದೀಪ್ ಸಿಂಗ್ ಅವರು ಗಾಯಕ್ಕೆ ತುತ್ತಾದ ಬೆನ್ನಲ್ಲೆ ಟೀಮ್ ಇಂಡಿಯಾದ ಇನ್ನೊಬ್ಬ ವೇಗಿ ಸಹ ಗಾಯಕ್ಕೆ ತುತ್ತಾಗಿದ್ದಾರೆ. ಈ ವೇಗಿ ಈಗಾಗಲೇ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದ್ದರು. ಅಲ್ಲದೆ ಲಾರ್ಡ್ಸ್ ಮೈದಾನದಲ್ಲಿ ಕಣಕ್ಕೆ ಇಳಿದಿದ್ದು, ವಿಕೆಟ್ ಪಡೆಯಲು ಪರದಾಟ ನಡೆಸಿದ್ದರು. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಆಕಾಶ್ ದೀಪ್ ತಂಡವನ್ನು ಮುನ್ನಡೆಸುತ್ತಾರೇ ಎಂಬ ಭರವಸೆ ಮೂಡಿಸಿತ್ತು.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇವರು ಬೌಲಿಂಗ್ ನಡೆಸುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇನಿಂಗ್ಸ್‌ನ 30ನೇ ಓವರ್‌ನಲ್ಲಿ ಅರ್ಷದೀಪ್ ಬೌಲಿಂಗ್ ಮಾಡುವಾಗ ಸಮಸ್ಯೆಯನ್ನು ಎದುರಿಸಿದ್ದರು. ಹೀಗಾಗಿ ಇವರು ಮೈದಾನದಿಂದ ಹೊರ ನಡೆದಿದ್ದರು. ಆದರೆ ಆ ಬಳಿಕ ಕೆಲವೇ ಓವರ್‌ಗಳನ್ನು ಎಸೆದಿದ್ದರು. ಆದರೆ ಈ ವೇಳೆ ಇವರ ಬೌಲಿಂಗ್‌ನಲ್ಲಿ ಶಿಸ್ತು ಕಂಡು ಬಾರಲಿಲ್ಲ. ಆಕಾಶ್ ದೀಪ್ ಗಾಯವು ಭಾರತಕ್ಕೆ ಹಿನ್ನಡೆ ಆಗಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಇವರು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಂಡದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದ ಆಕಾಶ್ ದೀಪ್, ಎರಡನೇ ಟೆಸ್ಟ್ ಹಾಗೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ್ ಪಡೆದಿದ್ದಾರೆ. ಆದರೆ ಇವರು ತೊಡೆ ಸಂದು ಗಾಯದಿಂದ ಬಳಲುತ್ತಿದ್ದು ಇವರು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಡೌಟ್ ಎನ್ನಲಾಗಿದೆ. ಇವರು ಬರ್ಮಿಂಗ್ ಹ್ಯಾಮ್ ಟೆಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಬ್ಯಾಟರ್ ಗಳನ್ನು ಕಾಡಿದ್ದರು. ಅರ್ಷದೀಪ್ ಈಗಾಗಲೇ ಭಾರತದ ಪರ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು 26 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಇವರು ತಮ್ಮ ವಿಭಿನ್ನ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡುವ ಕ್ಷಮತೆ ಹೊಂದಿದ್ದಾರೆ.