For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2024: ಭಾರತದ ಆರಂಭಿಕ ಸ್ಥಾನದ ಮೇಲೆ ಐವರ ಕಣ್ಣು

ಏಕದಿನ ವಿಶ್ವಕಪ್ ಮುಗಿದಿದೆ. ಇನ್ನೇನಿದ್ದರೂ ಟಿ20 ವಿಶ್ವಕಪ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ದೃಷ್ಟಿಯಲ್ಲೇ ಎಲ್ಲ ತಂಡಗಳು ತಾಲೀಮು ನಡೆಸಿವೆ. ಹೇಗಾದರೂ ಮಾಡಿ ಒಳ್ಳೆಯ ತಂಡವನ್ನು ಕಟ್ಟಿ, ಟ್ರೋಫಿಗೆ ಮುತ್ತಿಡುವ ಆಸೆ ಎಲ್ಲ ತಂಡಗಳದ್ದಾಗಿದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿ, ಫೈನಲ್‌ನಲ್ಲಿ ಮುಗ್ಗರಿಸಿದ್ದ ಟೀಮ್ ಇಂಡಿಯಾ ಸಹ, ಟಿ20 ವಿಶ್ವಕಪ್ ದೃಷ್ಟಿಯಿಂದ ಹಲವು ಬದಲಾವಣೆಗಳನ್ನು ಮಾಡಿಕೊಂಡು ತಂಡ ಕಟ್ಟುವ ಕೆಲಸವನ್ನು ಮಾಡುತ್ತಿದೆ.

ಮುಂಬರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಉಳಿದಿವೆ ಮತ್ತು ಒಂದು ಐಪಿಎಲ್ ಆವೃತ್ತಿಯನ್ನು ಆಡಬೇಕಿದೆ. ಈ ಪಂದ್ಯಗಳು ಜೂನ್‌ನಲ್ಲಿ ಪ್ರಾರಂಭವಾಗುವ ಟಿ20 ವಿಶ್ವಕಪ್ 2024ಗಾಗಿ ತಂಡವನ್ನು ಕಟ್ಟಲು ಅನುಕೂಲವಾಗುತ್ತವೆ. ಮುಂದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.

 Team India Faces New Challenge in T20 World Cup 2024 as 5 Players Eyes for Opening Position

ಈ ಇಬ್ಬರೂ ಆಟಗಾರರು ಕಳೆದ ಒಂದು ವರ್ಷದಿಂದ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ, ಆದರೆ ವಿಶ್ವಕಪ್ ತಂಡಕ್ಕೆ ಮರಳುವ ಬಗ್ಗೆ ಬಲವಾದ ಚರ್ಚೆ ನಡೆಯುತ್ತಿದೆ. ಈಗ ಆಯ್ಕೆಗಾರರು ಹೊಸ ಪ್ಲ್ಯಾನ್ ಮಾಡಿಕೊಂಡಂತೆ ಕಾಣುತ್ತದೆ. ಭಾರತ ತಂಡದಲ್ಲಿ ಆರಂಭಿಕ ಸ್ಲಾಟ್‌ಗೆ ಐವರು ಆಟಗಾರರು ಕಣ್ಣು ಇಟ್ಟಿದ್ದಾರೆ.

ಯಶಸ್ವಿ ಜೈಸ್ವಾಲ್ ಈ ವರ್ಷದ ಆಗಸ್ಟ್‌ನಲ್ಲಿ ಭಾರತದ ಪರ ಟಿ20 ಪಂದ್ಯಗಳಿಗೆ ಪದಾರ್ಪಣೆ ಮಾಡಿದರು ಮತ್ತು ಅಂದಿನಿಂದ ತಂಡದ ಭಾಗವಾಗಿದ್ದಾರೆ. ಅವರು ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಮೊದಲ ಎಸೆತದಿಂದಲೇ ಆರ್ಭಟಿಸುವ ಸಾಮರ್ಥ್ಯ ಅವರಿಗಿದೆ.

ಕಳೆದ ಟಿ20 ವಿಶ್ವಕಪ್‌ನಿಂದ, ಇಲ್ಲಿಯವರೆಗೆ ವಿಶ್ವದ ಬೇರೆ ಬೇರೆ ತಂಡಗಳಿಗೆ 132 ಆಟಗಾರರು ಆರಂಭಿಕರಾಗಿ ಕಣಕ್ಕೆ ಇಳಿದಿದ್ದಾರೆ. ಅದರಲ್ಲಿ ಯಶಸ್ವಿ ಜೈಸ್ವಾಲ್ ಅವರ ಮೊದಲ 10 ಎಸೆತಗಳಲ್ಲಿ ಸ್ಟ್ರೈಕ್ ರೇಟ್ ಉತ್ತಮವಾಗಿದೆ.

 Team India Faces New Challenge in T20 World Cup 2024 as 5 Players Eyes for Opening Position

ಆರಂಭಿಕ ಆಟಗಾರರಲ್ಲಿ ಇಶಾನ್ ಕಿಶನ್ ಏಕೈಕ ವಿಕೆಟ್ ಕೀಪರ್. ಕೆಎಲ್ ರಾಹುಲ್ ಹೊರತುಪಡಿಸಿ, ವಿಶ್ವಕಪ್ ತಂಡದಲ್ಲಿ ಇಶಾನ್ ಮಾತ್ರ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಬಹುದು. ಅವರು ಆರಂಭಿಕ ಮತ್ತು ವಿಕೆಟ್ ಕೀಪಿಂಗ್ ಸ್ಲಾಟ್‌ಗಳನ್ನು ತುಂಬಬಲ್ಲರು. ಕಳೆದ ವಿಶ್ವಕಪ್‌ನಿಂದ 13 ಪಂದ್ಯಗಳಲ್ಲಿ ಅವರ ಸರಾಸರಿ 19.46 ಮತ್ತು ಸ್ಟ್ರೈಕ್ ರೇಟ್ 111.94 ಆಗಿದೆ.

ವೆಸ್ಟ್ ಇಂಡೀಸ್ ಪಿಚ್‌ಗಳಿಗೆ ಪ್ರಮುಖ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್

ರುತುರಾಜ್ ಗಾಯಕ್ವಾಡ್ ಟಿ20 ಮಾದರಿಯಲ್ಲಿ ಸ್ಪಿನ್ ಬೌಲಿಂಗ್‌ ವಿರುದ್ಧ ರನ್ ಮಳೆ ಸುರಿಸಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಿಂದ ಇಲ್ಲಿಯವರೆಗೆ, ಅವರು ಸ್ಪಿನ್ ವಿರುದ್ಧ 47ರ ಸರಾಸರಿಯಲ್ಲಿ ಮತ್ತು 166ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಆರಂಭದಲ್ಲಿ ಅವರ ನಿಧಾನಗತಿಯ ಸ್ಟ್ರೈಕ್ ರೇಟ್ ಸಹ ಕಳವಳದ ವಿಷಯವಾಗಿದೆ.

ರೋಹಿತ್ ಶರ್ಮಾ 2022ರ ನವೆಂಬರ್‌ನಲ್ಲಿ ಕೊನೆಯ ಟಿ20 ಆಡಿದ್ದು, ತಂಡಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ. ನಿಸ್ಸಂಶಯವಾಗಿ, ಅವರು ಆಡಿದರೆ, ಮುಖ್ಯ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ಏಕದಿನ ವಿಶ್ವಕಪ್‌ನಲ್ಲಿ 126ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದರಿಂದ ಚುಟುಕು ಫಾರ್ಮೆಟ್‌ನಲ್ಲೂ ಇದೇ ಫಾರ್ಮ್‌ ಮುಂದುವರೆಸುವ ಸಾಧ್ಯತೆ ಇದೆ.

ಶುಭ್ಮನ್ ಗಿಲ್ ಟಿ20 ಮಾದರಿಯ ಆರಂಭಿಕ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಗಿಲ್ ಐಪಿಎಲ್ 2023ರಲ್ಲಿ 890 ರನ್ ಗಳಿಸಿದ್ದರು. ಆದರೆ, ರೋಹಿತ್ ಶರ್ಮಾ ಮರಳಿ ಬಂದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟ.

Story first published: Saturday, December 2, 2023, 19:14 [IST]
Other articles published on Dec 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+