For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ 19 ರನ್‌ ಸೋಲು

ಕ್ಯಾನ್‌ಬೆರಾ: ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್‌ ಅವರು ಬಾರಿಸಿದ 88 ರನ್‌ಗಳ ಬಲದಿಂದ ಆಸ್ಟ್ರೇಲಿಯಾ ವನಿತೆಯರ ತಂಡ 19 ರನ್‌ಗಳಿಂದ ಭಾರತ ಮಹಿಳಾ ತಂಡವನ್ನು ಮೂರು ಪಂದ್ಯಗಳ ಟಿ20 ಸರಣಿಯ, ಎರಡನೇ ಪಂದ್ಯದಲ್ಲಿ ಮಣಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಜಾರ್ಜಿಯಾ ವೋಲ್ ಹಾಗೂ ಬೆತ್ ಮೂನಿ ಸೊಗಸಾದ ಆಟದ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಅಬ್ಬರದ ಜೊತೆಯಾಟವನ್ನು ನೀಡಿತು. ಈ ಜೋಡಿ 14.5 ಓವರ್‌ಗಳಲ್ಲಿ 128 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಹಂತದಲ್ಲಿ ಅರ್ಧಶತಕದತ್ತ ದಾಪಗಾಲು ಇಟ್ಟಿದ್ದ ಬೆತ್‌ ಮುನಿ 46 ರನ್ ಬಾರಿಸಿ ಔಟ್ ಆದರು.

Team India

ಮಧ್ಯಮ ಕ್ರಮಾಂಕದಲ್ಲಿ ಫೋಬೆ ಲಿಚ್‌ಫೀಲ್ಡ್ (6), ಎಲ್ಲಿಸ್ ಪೆರ್ರಿ (7), ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್‌ ಅಬ್ಬರಿಸಿದರು.ಇವರು 57 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 88 ರನ್‌ ಸಿಡಿಸಿದರು. ಇವರ ಉತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್‌ ಕಲೆ ಹಾಕಿತು. ಭಾರತದ ಪರ ಅರುಂಧತಿ ರೆಡ್ಡಿ 2 ವಿಕೆಟ್‌ ಕಬಳಿಸಿದರು.

ಉತ್ತಮ ಆರಂಭ

ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ವೇಳೆ ಶಫಾಲಿ ವರ್ಮಾ 5 ಬೌಂಡರಿ ನೆರವಿನಿಂದ 29 ರನ್‌ ಸಿಡಿಸಿದರೆ, ಸ್ಮೃತಿ 24 ಎಸೆತಗಳಲ್ಲಿ 31 ರನ್‌ ಬಾರಿಸಿ ಔಟ್ ಆದರು. ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ (4) ರನ್‌ ಬರ ಅನುಭವಿಸಿದರು.

ನಾಯಕಿ ಹರ್ಮನ್ ಪ್ರೀತ್ ಕೌರ್‌ 30 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 36 ರನ್‌ ಸಿಡಿಸಿದರೆ, ರಿಚಾ ಘೋಷ್ (19) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಅಂತಿಮವಾಗಿ ಭಾರತದ ಕೆಳ ಕ್ರಮಾಂಕದ ಆಟಗಾರ್ತಿಯರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 144 ರನ್‌ ಸೇರಿಸಿತು. ಆಸ್ಟ್ರೇಲಿಯಾ ಪರ ಆಶ್ಲೀ ಗಾರ್ಡ್ನರ್ 3, ಕಿಮ್ ಗಾರ್ತ್, ಅನ್ನಾಬೆಲ್ ಸದರ್ಲ್ಯಾಂಡ್, ಸೋಫಿ ಮೋಲಿನೆಕ್ಸ್ ತಲಾ 2 ವಿಕೆಟ್‌ ಉರುಳಿಸಿದರು.

Story first published: Thursday, February 19, 2026, 20:04 [IST]
Other articles published on Feb 19, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+