For Quick Alerts
ALLOW NOTIFICATIONS  
For Daily Alerts
 

ಪ್ರಯೋಗ ಮಾಡಿ ಕೈ ಸುಟ್ಟುಕೊಂಡ ಭಾರತ

ವಿಶಾಖಪಟ್ಟಣಂ: ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದೆ. 5 ಪಂದ್ಯಗಳ ಟಿ20 ಸರಣಿಯ 4ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಭಾರತದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಟೀಮ್ ಇಂಡಿಯಾ ಚುಟುಕು ಸರಣಿಯಲ್ಲಿ ಮೊದಲ ಸೋಲಿನ ಕಹಿಯನ್ನು ಕಂಡಿದೆ. ಪ್ರವಾಸಿ ತಂಡ ಮೊದಲ ಗೆಲುವಿನ ನಗೆ ಬೀರಿದೆ.

216 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ಮೊದಲ ಎಸೆತದಲ್ಲಿ ದೊಡ್ಡ ಸಿಕ್ಸರ್ ಬಾರಿಸಲು ಹೋಗಿ ಮ್ಯಾಟ್‌ ಹೆನ್ರಿ ಎಸೆತದಲ್ಲಿ ಕಾನ್ವೇ ಅವರು ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. ಭರ್ಜರಿ ಟಚ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ ಜಾಕೋಬ್ ಡಫಿ ಅವರು ಹಿಡಿದ ಭರ್ಜರಿ ಕ್ಯಾಚ್‌ಗೆ ಬಲಿಯಾದರು.

Team India

ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಇವರು 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್‌ ಬಾರಿಸಿ ಸ್ಯಾಂಟ್ನರ್‌ಗೆ ವಿಕೆಟ್‌ ಒಪ್ಪಿಸಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರಿಂಕು ಸಿಂಗ್‌ ಅಬ್ಬರಿಸುವಲ್ಲಿ ವಿಫಲರಾದರು. ಇವರು 30 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್‌ ಬಾರಿಸಿ ಔಟ್ ಆದರು.

ಶಿವಂ ದುಬೆ ವೇಗದ ಅರ್ಧಶತಕ

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶಿವಂ ದುಬೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು 15 ಎಸೆತಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಇವರು ಬ್ಯಾಟಿಂಗ್ ಮಾಡುವಾಗ ಟೀಮ್ ಇಂಡಿಯಾ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಇವರ ದುರಾದೃಷ್ಟವಶಾತ್ ಔಟ್ ಆದರು. ದುಬೆ 23 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ ನೆರವಿನಿಂದ 65 ರನ್‌ ಬಾರಿಸಿದರು. ಇವರು ರನ್‌ ಔಟ್ ಆಗಿ ಬಲಿಯಾದರು.

ನ್ಯೂಜಿಲೆಂಡ್ ಉತ್ತಮ ಆರಂಭ

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಮೊದಲು ಬ್ಯಾಟ್ ಮಾಡಿತು. ಕಿವೀಸ್ ತಂಡದ ಪರ ಡೆವೊನ್ ಕಾನ್ವೇ (44) ಹಾಗೂ ಟಿಮ್ ಸೀಫರ್ಟ್ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಜೋಡಿ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 100 ರನ್‌ ಸೇರಿಸಿದರು. ಆರಂಭಿಕ ಟಿಮ್ ಸೀಫರ್ಟ್ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 62 ರನ್‌ ಬಾರಿಸಿ ಔಟ್ ಆದರು. ಕಿವೀಸ್‌ ಪರ ಗ್ಲೆನ್ ಫಿಲಿಪ್ಸ್‌ 24, ಡ್ಯಾರಿಲ್ ಮಿಚೆಲ್ 39, ನಾಯಕ ಮಿಚೆಲ್ ಸ್ಯಾಂಟ್ನರ್‌ 11 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 215 ರನ್‌ ಸೇರಿಸಿತು.

ಹರ್ಷಿತ್ ರಾಣಾ (9), ರವಿ ಬಿಷ್ಣೋಯಿ ( ಅಜೇಯ 10), ಅರ್ಷದೀಪ್‌ ಸಿಂಗ್ (0), ಜಸ್ಪ್ರೀತ್ ಬುಮ್ರಾ (4), ಕುಲ್‌ದೀಪ್ ಯಾದವ್ (1) ರನ್‌ ಕಲೆ ಹಾಕಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ತಂಡದ ಪರ ಮಿಚೆಲ್ ಸ್ಯಾಂಟ್ನರ್‌ 3, ಇಶ್ ಸೋಧಿ, ಜಾಕೋಬ್ ಡಫಿ ತಲಾ 2 ವಿಕೆಟ್‌ ಪಡೆದರು. ಐದು ಪಂದ್ಯಗಳ ಟಿ20 ಸರಣಿಯ ಐದನೇ ಪಂದ್ಯ ತಿರುವನಂತಪುರಂನಲ್ಲಿ ಶನಿವಾರ ನಡೆಯಲಿದೆ. ಟೀಮ್ ಇಂಡಿಯಾ ಸರಣಿಯಲ್ಲಿ 3-1 ರಿಂದ ಮುನ್ನಡೆ ಸಾಧಿಸಿದೆ.

Story first published: Wednesday, January 28, 2026, 22:40 [IST]
Other articles published on Jan 28, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+