ಇತ್ತೀಚೆಗಷ್ಟೇ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತು ಟೀಮ್ ಇಂಡಿಯಾ ಆಘಾತಕಾರಿಯಾಗಿ ಸೋತು ನಿರಾಸೆ ಅನುಭವಿಸಿದೆ. ಪದ್ಏ ಪದೇ ಭಾರತ ಐಸಿಸಿ ಟ್ರೋಪಿ ಗೆಲುವಿನ ಸನಿಹಕ್ಕೆ ಬಂದರೂ ಟೀಮ್ ಇಂಡಿಯಾಗೆ ಟ್ರೋಫಿ ಎತ್ತಿ ಹೊಡುಯಲು ಸಾಧ್ಯವಾಗುತ್ತಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಸೋತು ದಿನಗಳು ಉರುಳಿದರೂ ಭಾರತೀಯ ಅಭಿಮಾನಿಗಳಿಗೆ ಈ ಸೋಲಿನ ನೋವು ಕಾಡುತ್ತಲೇ ಇದೆ.
ಅದೆಷ್ಟೋ ದಿನಗಳ ಬಳಿಕ ಐಸಿಸಿ ಟ್ರೋಫಿ ಗೆದ್ದು ಬೀಗಬೇಕನ್ನೋ ಟೀಮ್ ಇಂಡಿಯಾದ ಕನಸಿಗೆ ಆಸ್ಟ್ರೇಲಿಯಾ ಕೊಳ್ಳಿಯಿಟ್ಟಿದೆ. ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ನಡೆದ WTC ಫೈನಲ್ನಲ್ಲಿ ಕಾಂಗರೂ ಪಡೆ ವಿರುದ್ಧ 209 ರನ್ಗಳಿಂದ ಮುಗ್ಗರಿಸಿರುವ ರೋಹಿತ್ ಶರ್ಮಾ ಪಡೆ ತೀರಾ ನಿರಾಸೆ, ಹತಾಶೆ ಅನುಭವಿದೆ. ಹಾಗಾದ್ರೆ, ಭಾರತೀಯ ತಂಡ ಕೊನೇ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿದ್ದು ಯಾವಾಗ? ಅಲ್ಲಿಂದ ಇಲ್ಲೀವರೆಗೆ ಅದೆಷ್ಟು ಬಾರಿ ಭಾರತ, ಐಸಿಸಿ ಟ್ರೋಫಿ ಸೋತಿದೆ? ಇಲ್ಲಿದೆ ಆ ಬಗ್ಗೆ ಮಾಹಿತಿ

ಟೀಮ್ ಇಂಡಿಯಾ ಕೊನೇ ಐಸಿಸಿ ಟ್ರೋಫಿ ಗೆದ್ದಿದ್ದು ಯಾವಾಗ?
ಭಾರತೀಯ ಕ್ರಿಕೆಟ್ ತಂಡ ಕೊನೇ ಬಾರಿಗೆ ಪ್ರತಿಷ್ಠಿತ ಐಸಿಸಿ ಟ್ರೋಫಿ ಗೆದ್ದು ಒಂದು ದಶಕವೇ ಕಳೆದುಹೋಗಿದೆ. ಅಲ್ಲಿಂದ ಇಲ್ಲೀವರೆಗೂ ಟೀಮ್ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಕೂಡ ಗೆದ್ದಿಲ್ಲ. ಟ್ರೊಫಿ ಗೆಲುವಿನ ಸಮೀಪಕ್ಕೆ ತೆರಳಿದರು ಕೂಡ ಫೈನಲ್ನಲ್ಲಿ ಸೋತು ನಿರಾಸೆ ಅನುಭವಿಸಿದ್ದೇ ಹೆಚ್ಚು. ಅಂದಹಾಗೆ ಟೀಮ್ ಇಂಡಿಯಾ ಕೊನೇ ಐಸಿಸಿ ಟ್ರೋಫಿ ಗೆದ್ದಿದ್ದು ಯಾವಾಗ ಗೊತ್ತಾ? 2013ರಲ್ಲಿ. ಅಂದು ಇಂಗ್ಲೆಂಡ್ನ ಎಜ್ಬಾಸ್ಟನ್ನಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ, ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾ, ಬಲಿಷ್ಠ ಇಂಗ್ಲೆಂಡ್ ವಿರುದ್ಧ ರೋಚಕ 5 ರನ್ನಿಂದ ಗೆಲುವಿನ ಕೇಕೆ ಹಾಕಿತ್ತು..
ಸತತ 9 ಐಸಿಸಿ ಟ್ರೋಫಿಗಳನ್ನು ಕೈ ಚೆಲ್ಲಿದೆ ಟೀಮ್ ಇಂಡಿಯಾ!
2013ರಲ್ಲಿ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು ಬೀಗಿದ್ದೇ ಕೊನೆ. ಅಲ್ಲಿಂದ 9 ಐಸಿಸಿ ಟೂರ್ನಿಗಳನ್ನಾಡಿರುವ ಭಾರತೀಯ ತಂಡಕ್ಕೆ ಒಂದೇ ಒಂದು ಕಪ್ ಕೂಡ ಒಲಿದಿಲ್ಲ. 2014ರ ಐಸಿಸಿ ಟ್ವೆಂಟಿ ಟ್ವೆಂಟಿ, 2015ರ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್, 2016ರ ಐಸಿಸಿ ಟ್ವೆಂಟಿ ಟ್ವೆಂಟಿ, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2019ರ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್, 2021ರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್, 2021ರ ಟಿ20 ವರ್ಲ್ಡ್ ಕಪ್, 2022ರ ಟಿ20 ವರ್ಲ್ಡ್ಕಪ್, 2023ರ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಹೀಗೆ ಸತತ 9 ಐಸಿಸಿ ಟೂರ್ನಿಗಳಲ್ಲಿ ಭಾರತೀಯ ತಂಡ ಟ್ರೋಫಿ ಗೆಲ್ಲದೆ ಆಘಾತ ಅನುಭವಿಸಿದೆ..
ಭಾರತೀಯ ಕ್ರಿಕೆಟ್ ತಂಡ ಆಡಿರುವ ಐಸಿಸಿ 9 ಟೂರ್ನಿಗಳಲ್ಲಿ 4ರಲ್ಲಿ ಫೈನಲ್ಗೆ ಪ್ರವೇಸಿಸುವ ಮೂಲಕ ಟ್ರೋಫಿ ಕನಸಿಗೆ ತೀರಾ ಹತ್ತಿರ ಹೋಗಿತ್ತು. ಆದ್ರೆ 4 ಬಾರಿಯೂ ಭಾರತೀಯರಿಗೆ ಗೆಲುವು ಒಲಿಯಲೇ ಇಲ್ಲ. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆದ್ರೆ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಟ್ರೋಫಿಯ ಬರ ಮುಂದುವರೆಯುತ್ತಲೇ ಸಾಗಿದೆ..