Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಹೊಸ ಅಂಕಪದ್ದತಿ: ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ ಭಾರತ

Team India Falls To No. 2 in World Test Championship Points Table as Per New ICC Rules

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಗೆ ಸಂಬಂಧಪಟ್ಟಂತೆ ಹೊಸ ನಿಯಮವನ್ನು ಐಸಿಸಿ ಅಳವಡಿಸಿಕೊಂಡಿದೆ.

ಈ ಅಂಕಪಟ್ಟಿ ನಿಯಮದ ಪ್ರಕಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ನಿಯಮಕ್ಕೂ ಮೊದಲು ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಈಗ ಈ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ಕೊರೊನಾ ವೈರಸ್‌ನಿಂದಾಗಿ ಅಂದುಕೊಂಡಂತೆ ಟೆಸ್ಟ್ ಸರಣಿಗಳನ್ನು ಆಯೋಜಿಸಲು ಸಾಧ್ಯವಾಗದ ಕಾರಣ ಈ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಐಸಿಸಿ ನಿರ್ಧಾರ ಮಾಡಿದೆ. ಭಾರತದ ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಆಡಳಿತ ಮಂಡಳಿಗೆ ಈ ತಿದ್ದುಪಡಿಯನ್ನು ಪ್ರಸ್ತಾಪಿಸಿತ್ತು. ಕೊರೊನಾ ವೈರಸ್ ಜಾಗತಿಕವಾಗಿ ಕ್ರಿಕೆಟ್ ಕ್ಯಾಲೆಂಡರ್‌ಗಳಲ್ಲಿ ದೊಡ್ಡ ಅಡ್ಡಿ ಉಂಟುಮಾಡಿದೆ.

ಹೊಸ ನಿಯಮದ ಪ್ರಕಾರ ತಾವು ಪಾಲ್ಗೊಂಡ ಸರಣಿಗಳಲ್ಲಿನ ಅಂಕಗಳ ಪ್ರತಶತದ ಆಧಾರದಲ್ಲಿದೆ. ಇದರಲ್ಲಿ ಭಾರತಕ್ಕಿ ಆಸ್ಟ್ರೇಲಿಯಾ ಮುನ್ನಡೆಯಲ್ಲಿದ್ದು ಆಸ್ಟ್ರೇಲಿಯಾ ಸದ್ಯ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ.

"ಕ್ರಿಕೆಟ್ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಮಿತಿ ಎರಡು ಕೂಡ ಪೂರ್ಣಗೊಂಡ ಪಂದ್ಯಗಳು ಮತ್ತು ಗಳಿಸಿದ ಅಂಕಗಳ ಆಧಾರದ ಮೇಲೆ ತಂಡಗಳ ಶ್ರೇಯಾಂಕ ವಿಧಾನವನ್ನು ಬೆಂಬಲಿಸಿದೆ. ಇದು ಅವರ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ತಮ್ಮದಲ್ಲದ ತಪ್ಪಿನಿಂದ ನಿಗದಿತ ಪಂದ್ಯಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗದ ತಂಡಗಳಿಗೂ ಇದರಿಂದ ಅನನುಕೂಲವಾಗಲಾರದು" ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾಹ್‌ನೇಯ್ ಹೇಳಿದ್ದಾರೆ.

Story first published: Friday, November 20, 2020, 14:37 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+