For Quick Alerts
ALLOW NOTIFICATIONS  
For Daily Alerts
 

IND vs AUS Test: ಜಸ್ಪ್ರಿತ್ ಬುಮ್ರಾಗೆ ಕಾಡುತ್ತಿದ್ದ ತನ್ನ ಅನುಭವಿ ಜೊತೆಗಾರನ ಅನುಪಸ್ಥಿತಿ

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಆಡಿಲೇಡ್‌ನಲ್ಲಿ ನಡೆಯುತ್ತದೆ. ಈ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 180 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿಯಾಗಿ ಬ್ಯಾಟಿಂಗ್‌ ನಡೆಸಿತು. ನಿಜಕ್ಕೂ ಟೀಮ್ ಇಂಡಿಯಾಕ್ಕೆ ಈ ವೇಳೆ ಆ ಒಬ್ಬ ಪ್ಲೇಯರ್‌ ನೆನಪು ಬಹುವಾಗಿ ಕಾಡಿದೆ. ಹಾಗಿದ್ದರೆ ಟೀಮ್ ಇಂಡಿಯಾದ ಆ ವೇಗಿ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಆಡಿಲೇಡ್‌ನಲ್ಲಿ ನಡೆಯುತ್ತಿರುವ ಡೇ ಆಂಡ್‌ ನೈಟ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಈ ವೇಳೆ ಉತ್ಸಾಹದಿಂದಲೇ ಬೌಲಿಂಗ್ ದಾಳಿ ನಡೆಸಿದ ಟೀಮ್ ಇಂಡಿಯಾಕ್ಕೆ ಈ ವೇಳೆ ಟೀಮ್ ಇಂಡಿಯಾದ ಸ್ವಿಂಗ್ ಬೌಲರ್‌ ಮೊಹಮ್ಮದ್ ಶಮಿ ನೆನಪು ಬಹುವಾಗಿ ಕಾಡುತ್ತಿದೆ. ಶಮಿ ಅವರ ನೆನಪು ಟೀಮ್ ಇಂಡಿಯಾಕ್ಕೆ ಕಾರಣವಾಗಿದೆ.

Team India Feels Mohammad Shami s Absence in Adelaide Day-Night Test Against Australia

ಕಾಡುತ್ತಿದೆ ಸ್ವಿಂಗ್ ಬೌಲರ್‌ ಅನುಪಸ್ಥಿತಿ

ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 33 ಓವರ್‌ಗಳ ಬೌಲಿಂಗ್ ನಡೆಸಿತು. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಬೌಲರ್‌ ಜಸ್ಪ್ರಿತ್‌ ಬುಮ್ರಾ 11 ಓವರ್‌ ಬೌಲಿಂಗ್ ದಾಳಿ ಸಂಘಟಿಸಿದರು. ಮೊದಲ ದಿನ ಬುಮ್ರಾ ಉಸ್ಮಾನ್ ಖವಾಜಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಬುಮ್ರಾ ಅವರಿಗೆ ಯಾವೊಬ್ಬ ಬೌಲರ್ ಉತ್ತಮ ಸಾಥ್ ನೀಡಲಿಲ್ಲ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿದ್ದ ಹರ್ಷಿತ್ ರಾಣಾ, ಮೊಹಮ್ಮದ್‌ ಸಿರಾಜ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ ಆಡಿಲೇಡ್‌ನಲ್ಲಿ ಇವರ ತಂಡಕ್ಕೆ ಕೈ ಹಿಡಿಯಲಿಲ್ಲ. ಆಡಿಲೇಡ್‌ನಲ್ಲಿ ಬುಮ್ರಾ ಅವರ ವಿರುದ್ಧ ಆಸೀಸ್‌ ಬ್ಯಾಟಿಂಗ್ ಮಾಡುವ ಅಪ್ರೋಚ್‌ ಚೇಂಜ್ ಮಾಡಿದೆ. ಈ ವೇಳೆ ಇನ್ನೊಂದು ತುದಿಯಲ್ಲಿ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಇವರ ಅನುಪಸ್ಥಿತಿಯಲ್ಲಿ ರಾಣಾ, ಸಿರಾಜ್, ಆಲ್‌ರೌಂಡರ್‌ ನಿತೀಶ್ ಕುಮಾರ್‌ ರೆಡ್ಡಿ ಶಿಸ್ತು ಬದ್ಧ ದಾಳಿ ನಡೆಸಲಿಲ್ಲ.

Team India Feels Mohammad Shami s Absence in Adelaide Day-Night Test Against Australia

ದೇಶೀಯ ಟೂರ್ನಿಯಲ್ಲಿ ಮಿಂಚು

ಮೊಹಮ್ಮದ್‌ ಶಮಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್ ಬಳಿಕ ಮೈದಾನಕ್ಕೆ ಇಳಿದಿರಲಿಲ್ಲ. ಆದರೆ ಈಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ ಆಡುತ್ತಿದ್ದಾರೆ. ಅವರು ಮೊದಲೇ ಸೂಚಿಸಿದಂತೆ ರಾಷ್ಟ್ರೀಯ ತಂಡಕ್ಕೆ ವಾಪಸ್‌ ಆಗುವ ಮುನ್ನ ದೇಶೀಯ ಟೂರ್ನಿಯಲ್ಲಿ ಆಡುವದಾಗಿ ತಿಳಿಸಿದ್ದರು. ಅದರಂತೆ ಶಮಿ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲೂ ಬಿಗುವಿನ ದಾಳಿ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಆದರೆ ಇವರ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕ್ರಿಕ್‌ ಬಜ್‌ ವರದಿಯ ಪ್ರಕಾರ ರಾಜಕೋಟ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್‌ ಅಲಿ ಟೂರ್ನಿಯ ವೇಳೆ ಆಯ್ಕೆ ಸಮಿತಿಯ ಸದಸ್ಯರು ಹಾಗೂ ಎನ್‌ಸಿಎ ಸಿಬ್ಬಂದಿಗಳು ಅವರ ಫಿಟ್ನೆಸ್‌ ಮೇಲೆ ಮೇಲ್ವಿಚಾರಣೆ ನಡೆಸಿದರು. ಇನ್ನು ಬಾರ್ಡರ್‌ ಗವಾಸ್ಕರ್‌ ಸರಣಿ ಬಹುದಿನಗಳ ಕಾಲ ನಡೆಯಲಿದ್ದು, ಬುಮ್ರಾ ಅವರ ಹೆಗಲಿನ ಭಾರ ಕಡಿಮೆ ಮಾಡಲು ಶಮಿ ಉಪಸ್ಥಿತಿ ಅನಿವಾರ್ಯ.

Story first published: Saturday, December 7, 2024, 13:55 [IST]
Other articles published on Dec 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+