Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SL: ಏಕದಿನ ಸರಣಿಗೂ ಮುನ್ನ ಭಾರತೀಯ ಕ್ರಿಕೆಟ್‌ನಲ್ಲಿ ಶೋಕದ ಛಾಯೆ; ಮಾಜಿ ಕೋಚ್ ನಿಧನ

ಆಗಸ್ಟ್‌ 1 ಗುರುವಾರ, ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗು ಹೆಡ್‌ ಕೋಚ್‌ ಆಗಿದ್ದ ಅಂಶುಮಾನ್ ಗಾಯಕ್ವಾಡ್ ಬಹಳ ದಿನಗಳಿಂದ ಕ್ಯಾನ್ಸರ್ ನಂತಹ ಕಾಯಿಲೆಯಿಂದ ಬಳಲುತ್ತಿದ್ದರು. ನಿನ್ನೆ (ಜುಲೈ 31) ತಮ್ಮ 71 ನೇ ವಯಸ್ಸಿನಲ್ಲಿ ಅಂಶುಮಾನ್ ಗಾಯಕ್ವಾಡ್ ನಿಧನರಾದ್ದಾರೆ.

ಅಂಶುಮಾನ್ ಗಾಯಕ್ವಾಡ್ ಭಾರತೀಯ ಕ್ರಿಕೆಟ್‌ಗೆ ಸುದೀರ್ಘ ಕೊಡುಗೆ ನೀಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ,ಟೀಮ್‌ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗು ಪ್ರಧಾನಿ ನರೇಂದ್ರ ಮೋದಿ ಅವರು ಭಾವನಾತ್ಮಕ ಪೋಸ್ಟ್‌ ಮಾಡುವ ಮೂಲಕ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

Team India Former coach Anshuman Gaikwad passed away

ಗಾಯಕ್ವಾಡ್ ಭಾರತಕ್ಕಾಗಿ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದು, 2000 ರಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಅಲ್ಲದೆ, ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಭಾರತ ತಂಡ ರನ್ನರ್ ಅಪ್ ಆಗಿತ್ತು.

ಗಾಯಕ್ವಾಡ್ ಅವರು ಬಹಳ ಸಮಯದಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಿಸಿಸಿಐ ಆರ್ಥಿಕ ನೆರವು

ಬಿಸಿಸಿಐ ಕೂಡ ಗಾಯಕ್ವಾಡ್‌ ಚಿಕಿತ್ಸೆಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಿತ್ತು. 1983ರ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದ ಗಾಯಕ್ವಾಡ್ ತಮ್ಮ 22 ವರ್ಷಗಳ ವೃತ್ತಿ ಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಹೇಳಿರುವ ಜಯ್ ಶಾ, 'ಶ್ರೀ ಅಂಶುಮಾನ್ ಗಾಯಕ್‌ವಾಡ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪ. ಇಡೀ ಕ್ರಿಕೆಟ್ ಜಗತ್ತಿಗೆ ಇದೊಂದು ದುಃಖದ ಘಟನೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ಸೌರವ್ ಗಂಗೂಲಿ ಶಾಕ್

ಅಂಶುಮಾನ್ ಗಾಯಕ್ವಾಡ್ ಅವರ ಸಾವಿನ ಸುದ್ದಿ ಕೇಳಿ ಸೌರವ್ ಗಂಗೂಲಿ ಶಾಕ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗಾಯಕ್ವಾಡ್ ಹಂಚಿಕೊಂಡಿರುವ ಗಂಗೂಲಿ, 'ಆರ್‌ಐಪಿ ಅಂಶು ಭಾಯ್.. ತುಂಬಾ ಭಯ ಹುಟ್ಟಿಸುವ ಸುದ್ದಿ' ಎಂದು ಬರೆದಿದ್ದಾರೆ.

ಪ್ರಧಾನಿ ಸಂತಾಪ

ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂತಾಪ ಹೇಳಿದ್ದು, 'ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಶ್ರೀ ಅಂಶುಮಾನ್ ಗಾಯಕ್ವಾಡ್ ಜಿ ಅವರನ್ನು ಸ್ಮರಿಸಲಾಗುವುದು. ಅವರು ಪ್ರತಿಭಾವಂತ ಆಟಗಾರ ಮತ್ತು ಅತ್ಯುತ್ತಮ ತರಬೇತುದಾರರಾಗಿದ್ದರು. ಅವರ ನಿಧನದಿಂದ ತುಂಬಾ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ' ಎಂದು ಬರೆದುಕೊಂಡಿದ್ದಾರೆ.

Story first published: Thursday, August 1, 2024, 7:02 [IST]
Other articles published on Aug 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+