ವಿರಾಟ್ ಕೊಹ್ಲಿ ತನ್ನ 'ಫಿಟ್ನೆಸ್ ಗುರು' ಎಂದ ಭಾರತೀಯ ಮಾಜಿ ಕ್ರಿಕೆಟಿಗ
ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ತುಂಬಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಶ್ಲಾಘಿಸಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿಯನ್ನು ತಮ್ಮ 'ಫಿಟ್ನೆಸ್ ಗುರು' ಎಂದು ಕರೆದ ಹರ್ಭಜನ್ ಸಿಂಗ್, ತಮ್ಮ ಫಿಟ್ನೆಸ್‌ನ ಉತ್ತುಂಗವನ್ನು ತಲುಪಲು ಕೊಹ್ಲಿ ಹೇಗೆ ಸಹಾಯ ಮಾಡಿದರು ಎಂಬುದನ್ನು ಬಹಿರಂಗಪಡಿಸಿದರು.

ವಿರಾಟ್ ಕೊಹ್ಲಿಯ ಭಾರತ ತಂಡದ ಮಾಜಿ ಸಹ ಆಟಗಾರನಾಗಿ ಹರ್ಭಜನ್ ಸಿಂಗ್ 4 ಜನರ ಆಹಾರವನ್ನು ತಿನ್ನುವುದರಿಂದ ಹಿಡಿದು, ದೇಹ ನಿಯಂತ್ರಣವನ್ನು ಹೇಗೆ ಮಾಡಬೇಕೆಂದು ಕಲಿಯುವವರೆಗೆ ತಮ್ಮ ಫಿಟ್ನೆಸ್ ಪರಿವರ್ತನೆ ಪ್ರಯಾಣದ ಮೇಲೆ ಬೆಳಕು ಚೆಲ್ಲಿದರು.
ವಿರಾಟ್ ಕೊಹ್ಲಿ ಭಾರತದ ಫಿಟ್ಟೆಸ್ಟ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಲು ದೊಡ್ಡ ಪರಿವರ್ತನೆಯ ಪ್ರಯಾಣವನ್ನು ಕೈಗೊಂಡರು. ಫಿಟ್ನೆಸ್ ಸಂಸ್ಕೃತಿಯನ್ನು ತರುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೀರ್ತಿ ಅನುಭವಿ ಬ್ಯಾಟರ್‌ಗೆ ಹೆಚ್ಚಾಗಿ ಸಲ್ಲುತ್ತದೆ. 35 ವರ್ಷದ ಕ್ರಿಕೆಟಿಗ ತಮ್ಮ ಕಠಿಣ ವ್ಯಾಯಾಮದ ದಿನಚರಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

"ಖಂಡಿತವಾಗಿಯೂ, ನಾವು ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ, ನೀವು ಕನ್ನಡಿಯಲ್ಲಿ ನಿಮ್ಮನ್ನು ನೋಡಿದಾಗ ಮಾತ್ರ ನೀವು ತಿಳಿದುಕೊಳ್ಳುತ್ತೀರಿ. ಹೌದು, ಇದು ಸರಿಯಲ್ಲ ಮತ್ತು ಇದರ ಬಗ್ಗೆ ಏನಾದರೂ ಮಾಡಬೇಕಿದೆ ಎಂದು ನೀವು ಅರಿತುಕೊಳ್ಳುತ್ತೀರಿ".
"ವಿರಾಟ್ ಕೊಹ್ಲಿ ಒಬ್ಬರೇ 4 ಜನರ ಆಹಾರವನ್ನು ಸುಲಭವಾಗಿ ತಿನ್ನಬಲ್ಲ ವ್ಯಕ್ತಿ. ಪ್ರತಿ ಬಾರಿಯೂ ಅವರು ಆಹಾರದ ಬಗ್ಗೆ ಮಾತನಾಡುತ್ತಿದ್ದರು, ಪಾಜಿ! ನಾನು ಇದನ್ನು ಆರ್ಡರ್ ಮಾಡಬೇಕೇ? ಅವರು ತಿನ್ನುವುದು ಮತ್ತು ಆಹಾರದ ಬಗ್ಗೆ ಹುಚ್ಚರಾಗಿದ್ದರು," ಎಂದು ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುವಾಗ ಹರ್ಭಜನ್ ಸಿಂಗ್ ಬಹಿರಂಗಪಡಿಸಿದರು.
ವಿರಾಟ್ ಕೊಹ್ಲಿ ನನ್ನ ಫಿಟ್ನೆಸ್ ಗುರು
"ನಾನು ಕೊಹ್ಲಿಯಲ್ಲಿ ಬದಲಾವಣೆಗಳನ್ನು ಕಂಡಾಗ, ಇಷ್ಟು ನಿಯಂತ್ರಣ ಬೇಕೆ? ಎಂದು ನಾನು ಪ್ರಶ್ನಿಸಿದೆ. ಅವನು ನಿರ್ದಿಷ್ಟ ಆಹಾರವನ್ನು ಮತ್ತು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ತಿನ್ನುತ್ತಾನೆ. ಅದಕ್ಕಿಂತ ಹೆಚ್ಚಿಲ್ಲ ಮತ್ತು ಸಮಯಕ್ಕೆ ಅನುಗುಣವಾಗಿ ತಿನ್ನುತ್ತಾನೆ. ಅವನು ತನ್ನೊಳಗೆ ಶಿಸ್ತು ಪಡೆದನು, ನನ್ನನ್ನೂ ಶಿಸ್ತಿನಲ್ಲಿಡಲು ಪ್ರಯತ್ನಿಸಿದರು".
"ಆ 2 ವರ್ಷಗಳು ನನ್ನ ಪಾಲಿಗೆ ಉತ್ತಮವಾಗಿ ಸಾಗಿದವು ಮತ್ತು ವಿರಾಟ್ ಕೊಹ್ಲಿಯಿಂದಾಗಿ ನಾನು ನನ್ನ ಫಿಟ್ನೆಸ್‌ನ ಉತ್ತುಂಗವನ್ನು ತಲುಪಿದೆ. ಅವರು ನನ್ನನ್ನು ಜಿಮ್‌ಗೆ ಕರೆದೊಯ್ಯಲು ಪ್ರಾರಂಭಿಸಿದರು. ನಾನು ವಿರಾಟ್ ಕೊಹ್ಲಿಯನ್ನು ಫಿಟ್ನೆಸ್ ಗುರು ಎಂದು ಕರೆಯುತ್ತೇನೆ. ಭಾರತ ತಂಡದಲ್ಲಿ ಫಿಟ್ನೆಸ್ ಮಾದರಿಯನ್ನು ಸ್ಥಾಪಿಸಿದವರು ವಿರಾಟ್ ಕೊಹ್ಲಿ," ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಿಳಿಸಿದರು.
ಕ್ರಿಕೆಟ್ ಮೈದಾನದಲ್ಲಿ ತಮ್ಮ ಸುಧಾರಿತ ಪ್ರದರ್ಶನದಿಂದಾಗಿ ವಿರಾಟ್ ಕೊಹ್ಲಿ ಆಗಾಗ್ಗೆ ಫಿಟ್ನೆಸ್ ಅನ್ನು ಗುರುತಿಸುತ್ತಾರೆ. ಶಕ್ತಿ, ತರಬೇತಿ, ಚುರುಕುತನ ಮತ್ತು ಕಾರ್ಡಿಯೋವನ್ನು ಒಳಗೊಂಡಿರುವ ಎಚ್ಚರಿಕೆಯ ಪೋಷಣೆಯಿಂದ ಹೆಚ್ಚಿನ-ತೀವ್ರತೆಯ ತಾಲೀಮುಗಳವರೆಗೆ, ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಅನ್ನು ನೋಡಿಕೊಳ್ಳುತ್ತಾರೆ.
ಗಂಡು ಮಗುವಿನ ತಂದೆಯಾದ ವಿರಾಟ್ ಕೊಹ್ಲಿ
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಅದು ಗಂಡು ಮಗುವಾಗಿದೆ. ಸ್ಟಾರ್ ಸೆಲೆಬ್ರಿಟಿ ದಂಪತಿ ಈ ಸುದ್ದಿಯನ್ನು ಮಂಗಳವಾರ, ಫೆಬ್ರವರಿ 20ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚಿಗೆ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಕೊಹ್ಲಿ ರಜೆ ತೆಗೆದುಕೊಳ್ಳುವ ನಿರ್ಧಾರವನ್ನು ಬಿಸಿಸಿಐ ಬೆಂಬಲಿಸಿದೆ ಮತ್ತು ಅವರ ಅನುಪಸ್ಥಿತಿಯ ಹಿಂದಿನ ಕಾರಣವನ್ನು ಊಹಿಸಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿತ್ತು.
ಆದರೆ, ವಿರಾಟ್ ಕೊಹ್ಲಿ ಅನುಪಸ್ಥಿತಿಯ ನಡುವೆಯೂ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಮುನ್ನಡೆ ಸಾಧಿಸಿವಲ್ಲಿ ಯಶಸ್ವಿಯಾಗಿದೆ.
ರಾಜ್‌ಕೋಟ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಾರತ ತಂಡ 434 ರನ್‌ಗಳ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications