IPL Auction 2025: ರಿಷಬ್ ಪಂತ್ ಎಷ್ಟು ಕೋಟಿಗೆ ಬಿಡ್ ಆಗಲಿದ್ದಾರೆ ಗೊತ್ತೇ?; ಮಾಜಿ ಆಟಗಾರ ಭವಿಷ್ಯ
ಐಪಿಎಲ್ 2025ರ ಮೆಗಾ ಹರಾಜಿಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ದಿನದಿಂದ ದಿನಕ್ಕೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡುತ್ತಿದೆ. ನವೆಂಬರ್ 24 ಮತ್ತು 25 ರಂದು ಜಿಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ನಾಯಕ ಮತ್ತು ಸ್ಟಾರ್ ವಿಕೆಟ್‌ಕೀಪರ್ ರಿಷಬ್ ಪಂತ್ ಕೂಡ ಈ ಬಾರಿ ಮೆಗಾ ಹರಾಜು ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಎಷ್ಟು ಕೋಟಿ ರೂ.ಗಳಿಗೆ ಬಿಡ್ ಆಗಬಹುದು ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ರಿಷಬ್ ಪಂತ್ ಎಷ್ಟು ಕೋಟಿ ರೂ.ಗಳಿಗೆ ಬಿಡ್ ಆಗುತ್ತಾರೆ ಎಂಬ ಚರ್ಚೆಗಳು ಕೂಡ ಜೋರಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಎಷ್ಟು ಕೋಟಿ ರೂ.ಗಳಿಗೆ ಬಿಡ್ ಆಗುತ್ತಾರೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಭವಿಷ್ಯ ನುಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2025ರ ಟೂರ್ನಿಗಾಗಿ ರಿಷಬ್ ಪಂತ್ ಅವರನ್ನು ಉಳಿಸಿಕೊಂಡಿಲ್ಲ. ಹೀಗಾಗಿ ರಿಷಬ್ ಪಂತ್ ಮೆಗಾ ಹರಾಜಿನಲ್ಲಿ ಬಂದು ನಿಂತಿದ್ದಾರೆ. ರಿಷಬ್ ಪಂತ್ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದು, ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಇತ್ತ ನಾಯಕ ಮತ್ತು ವಿಕೆಟ್‌ಕೀಪರ್ ಹುಡುಕಾಟದಲ್ಲಿರುವ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅವರನ್ನು ಬಿಡ್ ಮಾಡುವ ನಿರೀಕ್ಷೆಯಿದೆ. ಇದರ ಆಧಾರದ ಮೇಲೆ ಟೀಮ್ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಬಿಡ್ ಆಗುವ ಬಗ್ಗೆ ಮಾತನಾಡಿದ್ದಾರೆ.
ರಾಬಿನ್ ಭವಿಷ್ಯ
ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಬಿನ್ ಉತ್ತಪ್ಪ, 'ರಿಷಬ್ ಪಂತ್ ಅವರನ್ನು ಸುಮಾರು 25-28 ಕೋಟಿ ರೂ.ಗೆ ಬಿಡ್ ಮಾಡಲಾಗುತ್ತದೆ ಅಂದುಕೊಂಡಿದ್ದೇನೆ. ಅವರು ಖಂಡಿತವಾಗಿಯೂ ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಅವರು ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗುತ್ತಾರೆ. ಪಂತ್ ಅವರನ್ನು ಅಂತಹ ಬೆಲೆಗೆ ಖರೀದಿಸುವುದನ್ನು ನೋಡುವುದು ಕುತೂಹಲಕಾರಿಯಾಗಿದೆ. ಏಕೆಂದರೆ ಪಂಜಾಬ್ ಕಿಂಗ್ಸ್ ಅವರನ್ನು ಖರೀದಿಸುವ ನಿರೀಕ್ಷೆಯಿದೆ. ಜೊತೆಗೆ ಆರ್‌ಸಿಬಿ ಕೂಡ ಪಂತ್ ಅವರನ್ನು ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಪಾತ್ರದಲ್ಲಿ ಬಿಡ್ ಮಾಡಲಿದೆ ಎಂದು ಹೇಳಿದ್ದಾರೆ.
ಆಕಾಶ್ ಚೋಪ್ರಾ ಹೇಳಿದ್ದೇನು?
ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ. ಪಂತ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಉತ್ತಮ ಬಾಂಧವ್ಯವಿದ್ದರೆ, ಅವರು ಅವರನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ಇಲ್ಲದಿದ್ದರೆ ಆರ್‌ಸಿಬಿ ರಿಷಬ್ ಪಂತ್ ಅವರನ್ನು ಬಿಡ್ ಮಾಡಬಹುದು. ಆದರೆ ಇತರ ತಂಡಗಳು ಕೂಡ ಪಂತ್‌ಗೆ ಬಿಡ್ ಮಾಡುವ ಸಾಧ್ಯತೆಯಿದೆ. ಈ ಮೆಗಾ ಹರಾಜಿನಲ್ಲಿ ಭಾರತದ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಲಿದ್ದಾರೆ ಎಂದು ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications