ಕುಮಾರ ಸಂಗಕ್ಕಾರನಿಗೆ ಟೀಂ ಇಂಡಿಯಾದಿಂದ ಬಹುಪರಾಕ್
ಕೊಲಂಬೋ, ಆಗಸ್ಟ್ 21: ಕ್ರಿಕೆಟ್ ಲೋಕದ ದಿಗ್ಗಜ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರಿಗೆ ಟೀಂ ಇಂಡಿಯಾದಿಂದ ಬಹುಪರಾಕ್ ಸ್ವಾಗತ ಸಿಕ್ಕಿದೆ. ತಮ್ಮ ಟೆಸ್ಟ್ ವೃತ್ತಿ ಬದುಕಿನ ಕಟ್ಟ ಕಡೆಯ ಇನ್ನಿಂಗ್ಸ್ ಆಡಲು ಬಂದ ಸಂಗಾಗೆ ಭಾರತದ ಆಟಗಾರರು ಗೌರವ ರಕ್ಷೆ ನೀಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾದ ನಡುವೆ ಗುರುವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯ ಕುಮಾರ್ ಸಂಗಕ್ಕಾರ ಅವರ ಕೊನೆ ಪಂದ್ಯವಾಗಿದೆ. ಟೆಸ್ಟ್ ಆರಂಭಕ್ಕೂ ಮೊದಲೇ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶ್ರೀಲಂಕಾದ ಬ್ಯಾಟಿಂಗ್ ದಂತಕತೆ ಕುಮಾರ ಸಂಗಕ್ಕಾರ ಆವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಪಂದ್ಯದ ಎರಡನೇ ದಿನವಾದ ಶುಕ್ರವಾರದಂದು ಬ್ಯಾಟಿಂಗ್ ಆಡಲು ಮೈದಾನಕ್ಕಿಳಿದ ಸಂಗಕ್ಕಾರರನ್ನು ಟೀಂ ಇಂಡಿಯಾ ಆಟಗಾರರು ಭರ್ಜರಿಯಾಗಿ ಸ್ವಾಗತಿಸಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 393 ಸ್ಕೋರಿಗೆ ಆಲೌಟ್ ಆಯಿತು. ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿ ಮೊದಲ ಇನ್ನಿಂಗ್ಸ್ ನ 2ನೇ ಓವರ್ ನಲ್ಲೇ ವಿಕೆಟ್ ಕಳೆದುಕೊಂಡಿತು.
ಇದಾದ ಬಳಿಕ ಮೈದಾನಕ್ಕೆ ಬಂದ 37 ವರ್ಷ ವಯಸ್ಸಿನ ಸಂಗಕ್ಕಾರ ಅವರನ್ನು ಟೀಂ ಇಂಡಿಯಾ ಆಟಗಾರರು ಎರಡು ಬದಿಯಲ್ಲಿ ನಿಂತು ಚಪ್ಪಾಳೆ ಹೊಡೆದು ಸ್ವಾಗತಿಸಿದರು. ನಾಯಕ ವಿರಾಟ್ ಕೊಹ್ಲಿ ಕೈಕುಲುಕಿ ಕ್ರೀಸ್ ಗೆ ಬಂದ ಸಂಗಾಗೆ ಯಾದವ್ ಅವರು ಯಾರ್ಕರ್ ಮೂಲಕ ಸ್ವಾಗತಿಸಿದರು.

ಕುಮಾರ್ -ಕ್ರಿಕೆಟ್ ಪಂದ್ಯಕ್ಕೆ ಶ್ರೇಷ್ಠ ರಾಯಭಾರಿ
ಕುಮಾರ ಸಂಗಕ್ಕರ ಶ್ರೀಲಂಕಾ ಕ್ರಿಕೆಟ್‌ಗೆ ಮಾತ್ರ ದೊಡ್ಡ ಆಸ್ತಿಯಾಗಿಲ್ಲ. ಅವರು ಕ್ರಿಕೆಟ್ ಪಂದ್ಯಕ್ಕೆ ಶ್ರೇಷ್ಠ ರಾಯಭಾರಿಯಾಗಿದ್ದಾರೆ. ಮಹಾನ್ ಸಾಧನೆ ಮಾಡಿರುವ ಸಂಗಕ್ಕರಗೆ ಅಭಿನಂದನೆ ಸಲ್ಲಿಸುವೆ. ನಿವೃತ್ತಿ ನಂತರದ ಬದುಕು ಸುಖ-ಸಮೃದ್ದಿಯಿಂದ ಕೂಡಿರಲಿ ಎಂದು ಹಾರೈಸುವೆ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಹೇಳಿದ್ದಾರೆ.

ಕೊಲಂಬೋ ಮೈದಾನದಲ್ಲಿ ಗೌರವ ರಕ್ಷೆ
134ನೇ ಟೆಸ್ಟ್ ಪಂದ್ಯವಾಡುತ್ತಿರುವ ಕುಮಾರ್ ಸಂಗಕ್ಕಾರ ಅವರು ಕಟ್ಟಕಡೆಯ ಪಂದ್ಯವಾಡಲು ಬಂದಾಗ ಪಿ ಸಾರಾ ಓವಲ್ ಮೈದಾನದಲ್ಲಿ ಬರಮಾಡಿಕೊಂಡಿದ್ದು ಹೀಗೆ
ಕುಮಾರ ಸಂಗಕ್ಕರ ಕ್ರಿಕೆಟ್‌ನ ನಿಜವಾದ ದಂತಕತೆ
ಕುಮಾರ ಸಂಗಕ್ಕರ ಕ್ರಿಕೆಟ್‌ನ ನಿಜವಾದ ದಂತಕತೆ, ಅವರು ಡಾನ್ ಬ್ರಾಡ್ಮನ್ ಅವರಂತೆ ದಿಗ್ಗಜ ಆಟಗಾರ ಎಂದು ಟೀಂ ಇಂಡಿಯಾದ ಆಟಗಾರರು ಹೊಗಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರಿಂದ ಶುಭ ಹಾರೈಕೆ
ಸಚಿನ್ ತೆಂಡೂಲ್ಕರ್ ಅವರಿಂದ ಸಂಗಕ್ಕಾರ ಅವರಿಗೆ ಶುಭ ಹಾರೈಕೆ
ಅನುರಾಗ್ ಠಾಕೂರ್ ಅವರಿಂದ ಪ್ರಶಂಸೆ
ವಿಶ್ವದ ಯುವ ಆಟಗಾರರಿಗೆ ಅವರು ಆದರ್ಶಪ್ರಾಯರಾಗಿದ್ದಾರೆ. ಬಿಸಿಸಿಐ ಪರವಾಗಿ ಅವರಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಸಂಗಕ್ಕಾರನಿಗೆ ಸಂದ ಗೌರವ ರಕ್ಷೆ
ಸಂಗಕ್ಕಾರನಿಗೆ ಸಂದ ಗೌರವ ರಕ್ಷೆ ಬಗ್ಗೆ ಟ್ವೀಟ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications