India Vs Bangladesh: ಬಾಂಗ್ಲಾ ತಂಡವನ್ನು ಕಟ್ಟಿಹಾಕಲು ಭಾರತದ ಬಳಿಯಿದೆ 3 ವೆಪನ್ಸ್
ತನ್ನ ಹಳೆಯ ವೈರಿ ಬಾಂಗ್ಲಾದೇಶವನ್ನು ಬಗ್ಗು ಬಡೆಯಲು ಟೀಮ್ ಇಂಡಿಯಾ ತಯಾರಿ ನಡೆಸಿದೆ. 16 ವರ್ಷಗಳ ಹಿಂದೆ ಬಾಂಗ್ಲಾದೇಶ, ಭಾರತವನ್ನು ಮಣಿಸಿ ವಿಶ್ವಕಪ್ ನಿಂದಲೇ ಹೊರ ಹಾಕಿತ್ತು. ಈ ಸೋಲು ನಿಜಕ್ಕೂ ಟೀಮ್ ಇಂಡಿಯಾಗೆ ಎಂದೂ ಮಾಸದಂತೆ ಕಾಡುತ್ತಿದೆ. 2007 ವಿಶ್ವಕಪ್ ತಂಡವನ್ನು ಭಾರತದ ಅಂತ್ಯತ ಬಲಿಷ್ಠ ತಂಡ ಎಂದೇ ಪರಿಗಣಿಸಲಾಗಿತ್ತು.
ಆದರೆ, ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾ ಐದು ವಿಕೆಟ್ ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿತ್ತು. ಈ ಮೂಲಕ ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ನಡೆಯ ಬೇಕಾಯಿತು.

ವಿಶ್ವಕಪ್ ಕ್ರಿಕೆಟ್ ಪಂದ್ಯವಳಿಯಲ್ಲಿ ನಿಜಕ್ಕೂ ಭಾರತದ ಪಾಲಿಗೆ ಬಾಂಗ್ಲಾ ವೈರಿಯಂತೆ ಕಂಗಳಿಸುತ್ತಿದೆ. ಯಾರ ಊಹಿಗೂ ನಿಲುಕದ ರಿಸಲ್ಟ್ ನೀಡಿದ್ದ ಬಾಂಗ್ಲಾ ಎಲ್ಲರ ಚಿತ್ತ ಕದ್ದಿತ್ತು. ಬಾಂಗ್ಲಾದೇಶ ಏಷ್ಯಾ ಕಪ್ ಆಗಿರಲಿ ಅಥವಾ ಯಾವುದೇ ಸರಣಿಯಾಗಿರಲಿ ಟೀಮ್ ಇಂಡಿಯಾಕ್ಕೆ ಕಾಟ ನೀಡಿದೆ. ಇದರಿಂದ ತಪ್ಪಿಸಿಕೊಳ್ಳಲು ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಟೀಮ್ ಇಂಡಿಯಾ ಪ್ರಸಕ್ತ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು, ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು, ಹಾಗೂ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ, ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ, ತನ್ನ ಅಜೇಯ ಓಟವನ್ನು ಮುಂದುವರೆಸುವ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ಹಾಕಿಕೊಂಡಿದೆ.
ಬಾಂಗ್ಲಾದೇಶದ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಒಟ್ಟಾರೆ ರೋಹಿತ್ 254 ಏಕದಿನ ಆಡಿದ್ದು, 31 ಶತಕ ಹಾಗೂ 53 ಅರ್ಧಶತಕ ಬಾರಿಸಿದ್ದಾರೆ. ಇನ್ನು ಬಾಂಗ್ಲಾ ವಿರುದ್ಧ ನೋಡಿದರೆ, ಇವರು 16 ಪಂದ್ಯಗಳಲ್ಲಿ, 738 ರನ್ ಸಿಡಿಸಿದ್ದಾರೆ. ಇವರ ಎಕನಾಮಿ 56.76 ಆಗಿದ್ದು, 96.09ರ ಸ್ಟ್ರೈಕರ್ ರೇಟ್ ಹೊಂದಿದ್ದಾರೆ.
ರೋಹಿತ್ ಧಮಾಕೆದಾರ್ ಫಾರ್ಮ್
ಇದರಲ್ಲಿ 1 ಶತಕ ಹಾಗೂ ಮೂರು ಅರ್ಧಶತಕಗಳು ಸೇರಿವೆ. ವಿಶ್ವಕಪ್ ನಲ್ಲೂ ರೋಹಿತ್ ತಮ್ಮ ಧಮಾಕೆದಾರ್ ಫಾರ್ಮ್ ಮುಂದುವರೆಸಿದ್ದಾರೆ. ವಿಶ್ವಕಪ್ ನಲ್ಲಿ ಹಿಟ್ ಮ್ಯಾನ್ 3 ಪಂದ್ಯಗಳಲ್ಲಿ 217 ರನ್ ಬಾರಿಸಿದ್ದು, ತಲಾ ಒಂದು ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿದ್ದಾರೆ. ಇವರು ಬಾಂಗ್ಲಾ ತಂಡವನ್ನು ಕಾಡಲು ಸಜ್ಜಾಗಿದ್ದಾರೆ.
ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ
ಬಾಂಗ್ಲಾ ಬೌಲರ್ ಗಳ ನಿದ್ದೆಗೆಡಿಸಿರುವ ಇನ್ನೊಂದು ಹೆಸರು ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ .. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್, ಬಾಂಗ್ಲಾ ವಿರುದ್ಧ ಆಡಿದ 15 ಪಂದ್ಯಗಳಲ್ಲಿ 807 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 3 ಅರ್ಧ ಶತಕಗಳು ಸೇರಿವೆ. ಈ ವಿಶ್ವಕಪ್ ನಲ್ಲೂ ವಿರಾಟ್ ಭರ್ಜರಿ ಫಾರ್ಮ್ ನಲ್ಲಿದ್ದು, ಬಾಂಗ್ಲಾ ತಂಡದ ಟೆನ್ಷನ್ ಹೆಚ್ಚಿದೆ.
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ
ಈ ಇಬ್ಬರೂ ಆಟಗಾರರು ಬೌಲರ್ ಗಳಿಗೆ ಕಾಟ ನೀಡಿದರೆ, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಬೌಲರ್ ಗಳಿಗೆ ಕಾಟ ನೀಡಲು ಸಜ್ಜಾಗಿದ್ದಾರೆ. ಪ್ರಸಕ್ತ ವಿಶ್ವಕಪ್ ನಲ್ಲಿ ಗರಿಷ್ಠ ವಿಕೆಟ್ ಬೇಟೆ ನಡೆಸಿರುವ ಬುಮ್ರಾ ಬಾಂಗ್ಲಾ ವಿರುದ್ಧವೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆಡಿದ 4 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿರುವ ಬುಮ್ರಾ ಅಬ್ಬರಿಸಿದ್ದಾರೆ. ವಿಶ್ವಕಪ್ ಪಂದ್ಯದಲ್ಲೂ ಇವರು ಟೀಮ್ ಇಂಡಿಯಾ ಪರ ಮಿಂಚಲು ತಯಾರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications